ಸಿಬಿಎಸ್ಇ ಪರೀಕ್ಷಾ ಫಲಿತಾಂಶ ಪ್ರಕಟ, ಶೇ.83 ಅಂಕ ಪಡೆದು ಸ್ನೇಹಾ ಸಾಧನೆ
ನಾಗಾವಿ ಎಕ್ಸಪ್ರೆಸ್
ಶಹಾಪುರ: ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ (ಸಿಬಿಎಸ್ಇ) ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, ಡಿಡಿಯು ಶಾಲೆಯ ವಿದ್ಯಾರ್ಥಿನಿ ಸ್ನೇಹಾ ಬನಶಂಕರ ಶೇ.83 ಫಲಿತಾಂಶ ಪಡೆಯುವ ಮೂಲಕ ಶಾಲೆಗೆ ಹಾಗೂ ಪಾಲಕರಿಗೆ ಕೀರ್ತಿ ತಂದಿದ್ದಾಳೆ.
ವಿದ್ಯಾರ್ಥಿನಿಯ ಸಾಧನೆಗೆ ಡಿಡಿಯು ಸಮೂಹ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಭೀಮಣ್ಣ ಮೇಟಿ, ಶಿಕ್ಷಕ ವರ್ಗ, ಸಿಬ್ಬಂದಿ ಹಾಗೂ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.