ಕಾಳಗಿ ಕಿಸಾನ್ ಸಂಘದ ಅಧ್ಯಕ್ಷ ಭೀಮರಾಯ ಮಲಘಾಣ ಹೊಲದಲ್ಲಿ 13 ಸಾಗುವಾನಿ ಮರ ಕಳ್ಳತನ, ಪರಿಹಾರಕ್ಕೆ ಒತ್ತಾಯ
ನಾಗಾವಿ ಎಕ್ಸ್‌ಪ್ರೆಸ್
ಕಾಳಗಿ: ಪಟ್ಟಣದ ಸರ್ವೆ ನಂ. 16 ರಲ್ಲಿ ಸಾಗುವಾನಿ ಮರಗಳನ್ನು ಬೆಳೆದಿದ್ದು, 13 ಸಾಗುವಾನಿ ಮರಗಳನ್ನು ಬುಧವಾರ ಕಳ್ಳರು ಕಡಿದು ಸಾಗಿಸಿದ ಘಟನೆ ಜರುಗಿದೆ.
ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಭೀಮರಾಯ ಮಲಘಾಣ ಅವರಿಗೆ ಸೇರಿದ ಜಮೀನಿನಲ್ಲಿ ಸುಮಾರು 300 ಸಾಗುವಾನಿ ಮರಗಳನ್ನು ಬೆಳೆಸಲಾಗಿದೆ. ಚಿತ್ತಾಪುರ ಅರಣ್ಯ ಇಲಾಖೆಯವರು 300 ಸಾಗುವಾನಿ ಸಸಿಗಳನ್ನು ನೀಡಿದ್ದರು. ಸರ್ವೆ ನಂ. 16 ರ ಜಮೀನಿನಲ್ಲಿ 300 ಸಾಗುವಾನಿ ಸಸಿಗಳನ್ನು ನೆಡಲಾಗಿತ್ತು. 3 ವರ್ಷ ಪ್ರಾಯದ ಅಂದಾಜು 30 ಸಾವಿರ ಮೌಲ್ಯದ 13 ಸಾಗುವಾನಿ ಮರಗಳನ್ನು ಕಳ್ಳರು ಕಡಿದು ಕಳ್ಳತನ ಮಾಡಿಕೊಂಡು ಹೋಗಿರುವುದು ಬೆಳಕಿಗೆ ಬಂದಿದೆ.
ಎಂದಿನಂತೆ ಗುರುವಾರ ಬೆಳಿಗ್ಗೆ ಹೊಲಕ್ಕೆ ಹೋದಾಗ 13 ಸಾಗುವಾನಿ ಮರಗಳನ್ನು ಕಡಿದುಕೊಂಡು ಹೋಗಿರುವುದು ಕಂಡುಬಂದಿದೆ ಎಂದು ತಿಳಿಸಿದ್ದಾರೆ.
ಚಿತ್ತಾಪುರ ಅರಣ್ಯ ಇಲಾಖೆ ಸಹಕಾರದಿಂದ ನಮ್ಮ ಜಮೀನಿನಲ್ಲಿ ಸುಮಾರು 300 ಸಾಗುವಾನಿ ಸಸಿಗಳನ್ನು ನೆಡಲಾಗಿದೆ. 5 ವರ್ಷ ಪ್ರಾಯದ 13 ಸಾಗುವಾನಿ ಮರಗಳನ್ನು ಅಂದಾಜು 30 ಸಾವಿರ ಮೌಲ್ಯದ ಮರಗಳನ್ನು ಕಳ್ಳರು ಕಡಿದುಕೊಂಡು ಹೋಗಿದ್ದಾರೆ. ಉಳಿದ ಸಾಗುವಾನಿ ಮರಗಳಿಗೆ ರಕ್ಷಣೆ ಒದಗಿಸಬೇಕು, ಹಾಗೂ ಪರಿಹಾರ ನೀಡಬೇಕು ಎಂದು ರೈತ ಭೀಮರಾಯ ಮಲಘಾಣ ಒತ್ತಾಯಿಸಿದ್ದಾರೆ.