ನಾನಾಡಿದ ಗಾದೆ ಮಾತಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೆಸರು ನಾಯಿಗೆ ಹೋಲಿಕೆ ಮಾಡಿದ್ದು ವಿಷಾದ, ಅವರ ಹೆಸರು ವಾಪಸ್ ಪಡೆಯುತ್ತೇನೆ: ಛಲವಾದಿ ನಾರಾಯಣಸ್ವಾಮಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಆನೆ ಹೋಗುವಾಗ ನಾಯಿ ಬೊಗಳುತ್ತದೆ ಎಂದು ನಾನಾಡಿದ್ದ ಮಾತಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ ಅವರ ಹೆಸರು ವಾಪಸ್ ಪಡೆಯುತ್ತೇನೆ ಎಂದು ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸ್ಪಷ್ಟನೆ ನೀಡಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ನಮ್ಮ ಪಕ್ಷದ ವರಿಷ್ಠರು ಬಿ.ಎಸ್.ಯಡಿಯೂರಪ್ಪ ಅವರ ಸೂಚನೆ ಮೇರೆಗೆ ನಾನು ಆಡಿದ ಆನೆ ಹೋಗುವಾಗ ನಾಯಿ ಬೊಗಳುತ್ತದೆ ಎನ್ನುವ ಗಾದೆ ಮಾತಿನಲ್ಲಿ ಸಚಿವ ಪ್ರಿಯಾಂಕ್ ಹೆಸರು ನಾಯಿಗೆ ಹೊಲಿಕೆ ಮಾಡಬಾರದಿತ್ತು ಆ ಹೆಸರನ್ನು ಬಿಟ್ಟು ಬಿಡಿ ಎಂದು ಹೇಳಿದ ಪ್ರಯುಕ್ತ ನಾನು ಪ್ರಿಯಾಂಕ್ ಖರ್ಗೆ ಹೆಸರು ವಾಪಸ್ ಪಡೆದಿದ್ದೇನೆ ಎಂದು ಹೇಳಿದರು.
ನಮಗೂ ಚಡ್ಡಿ ಹೊರೊನು ಎಂದು ಹೇಳಿದ್ದರು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಆಗ ನಮಗೂ ನೋವಾಗಿತ್ತು ನಾವು ಅದನ್ನು ಸ್ಪೂರ್ತಿಯಾಗಿ ತೆಗೆದುಕೊಂಡಿದ್ದೇವು ರಾಜಕಾರಣದಲ್ಲಿ ಒಂದು ಹೊಗುತ್ತೆ ಒಂದು ಬರುತ್ತದೆ ನಾನು ಹೇಳಿದ ಗಾದೆ ಮಾತನ್ನೇ ಇವರು ಈ ತರಹ ಮಾಡುತ್ತಾರೆ ಎಂದರೆ ಹೇಗೆ ಎಂದು ಹೇಳಿದರು. ನಾನಾಡಿದ ಗಾದೆ ಮಾತಲ್ಲಿ ಪ್ರಿಯಾಂಕ್ ಖರ್ಗೆ ಹೆಸರು ವಾಪಸ್ ತೆಗೆದುಕೊಂಡಾಗ ಆಗ ಆ ವಿಷಯಕ್ಕೆ ಸಂಬಂಧ ಪಡಲ್ಲ ಕ್ಲೋಸ್ ಆಯಿತು ಬಿಡಿ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಬಾಬುರಾವ್ ಚವ್ಹಾಣ, ಮಾಜಿ ಎಂಎಲ್ಸಿ ಅಮರನಾಥ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ, ಭೀಮರೆಡ್ಡಿ ಕುರಾಳ, ಅಯ್ಯಪ್ಪ ರಾಮತೀರ್ಥ, ಮಲ್ಲಿಕಾರ್ಜುನ ಎಮ್ಮೆನೋರ್ ಸೇರಿದಂತೆ ಇತರರು ಇದ್ದರು.