ಕರ್ನಾಟಕ ವಿಕಾಸ ರಂಗ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಚಿ.ಸಿ.ನಿಂಗಣ್ಣ ನೇಮಕ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಕರ್ನಾಟಕ ವಿಕಾಸ ರಂಗದ ರಾಜ್ಯ ಅಧ್ಯಕ್ಷರಾದ ವ. ಚ. ಚೆನ್ನೆಗೌಡರ ನೇತೃತ್ವದಲ್ಲಿ ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ ಯ ಸಂವರ್ಧನೆಗಾಗಿ ರಾಜ್ಯಮಟ್ಟದಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ಅದರಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸಮಿತಿ ರಚನೆ ಕಾರ್ಯ ಜರುಗಿದ್ದು, ಅದರಂತೆ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷರನ್ನಾಗಿ ಡಾ. ಚಿ.ಸಿ.ನಿಂಗಣ್ಣ ಅವರನ್ನು ನೇಮಕ ಮಾಡಲಾಗಿದೆ.
ಅದರಂತೆ ಕಲಬುರಗಿ ಜಿಲ್ಲಾ ಘಟಕದ ಸಮಿತಿಯನ್ನು ರಚಿಸಲಾಗಿದ್ದು, ಉಪಾಧ್ಯಕ್ಷರು -ದೇವಿದಾಸ ಪವಾರ, ಪ್ರಧಾನ ಕಾರ್ಯದರ್ಶಿ -ವೆಂಕಟೇಶ್ ನೀರಡಗಿ, ಕಾರ್ಯದರ್ಶಿ -ಡಾ. ಶoಕರ ಬಾಳಿ, ಖಜಾಂಚಿ -ವಿಶ್ವನಾಥ ಭಕರೆ, ಸದಸ್ಯರುಗಳಾಗಿ -ಗೋಪಾಲ ರೆಡ್ಡಿ, ಡಾ. ಅನ್ನಪೂರ್ಣ ಎಸ್. ಗಂಗಣೆ, ಮೀನಾಕ್ಷಿ ಎ. ಗುತ್ತೇದಾರ, ಮರೆಪ್ಪ ಗೋನಾಲ್ಕರ, ನೀಲಕಂಠ ಹಾಬಾಳ, ಶಿವಶರಣಪ್ಪ ಪೂಜಾರಿ ಇವರನ್ನು ಜಿಲ್ಲಾ ಘಟಕದ ಪದಾಧಿಕಾರಿಗಳನ್ನಾಗಿ ನೇಮಕ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕ ವಿಕಾಸ ರಂಗದಡಿಯಲ್ಲಿ ಕಾರ್ಯ ಚಟುವಟಿಕೆಗಳನ್ನು ನಡೆಸಲಾಗುವದೆಂದು ಜಿಲ್ಲಾ ಘಟಕದ ಅಧ್ಯಕ್ಷರಾದ ಡಾ. ಚಿ.ಸಿ.ನಿಂಗಣ್ಣ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.