ಸಂಕನೂರ ಕ್ರಾಸ್ ಹತ್ತಿರ ಬೈಕ್ ಹಾಗೂ ಟಿಪ್ಪರ್ ನಡುವೆ ಅಪಘಾತ ಸ್ಥಳದಲ್ಲೇ ಓರ್ವನ ಸಾವು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಸಂಕನೂರ ಕ್ರಾಸ್ ಹತ್ತಿರ ಬೈಕ್ ಹಾಗೂ ಟಿಪ್ಪರ್ ನಡುವೆ ಸೋಮವಾರ ಅಪಘಾತ ಸಂಭವಿಸಿದ್ದು ಓರ್ವ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದು ಇನ್ನೋರ್ವ ಯುವಕನ ಕಾಲು ಮುರಿದಿದ್ದು ಅಲ್ಲಲ್ಲಿ ಗಂಭೀರ ಗಾಯಗಳಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಯ ಯುನೈಟೆಡ್ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ತಿಳಿದುಬಂದಿದೆ.
ಹಣಮಂತ ಬಸಪ್ಪ ಬೊಮ್ಮನಕ್ (18) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಲಕ್ಷ್ಮಣ್ ಕಾಶಪ್ಪ ಹಲಕಟ್ಟಿ (17) ಕಾಲು ಮುರಿದಿದ್ದು ಅಲ್ಲಲ್ಲಿ ಗಂಭೀರ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ನಾಲವಾರ ಸ್ಟೇಷನ್ ನಿಂದ ಸಂಕನೂರ ಗ್ರಾಮಕ್ಕೆ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ, ಇವರಿಬ್ಬರು ಸಂಕನೂರ ಗ್ರಾಮದವರು ಎಂದು ತಿಳಿದುಬಂದಿದೆ.