Oplus_0

ನಾಗಾವಿ ಯಲ್ಲಮ್ಮ ದೇವಿಯ ನವರಾತ್ರಿ ಉತ್ಸವಕ್ಕೆ ದೀಪಾಲಂಕಾರಕ್ಕೆ ಭಕ್ತಾದಿಗಳ ಮನವಿ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದ ಐತಿಹಾಸಿಕ ನಾಗಾವಿ ಯಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವದ ನಿಮಿತ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ದೀಪಾಲಾಂಕರ ಮಾಡುವ ಕುರಿತು ದೇವಿಯ ಭಕ್ತಾದಿಗಳು ಮಂಗಳವಾರ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಶ್ರೀ ನಾಗಾವಿ ಯಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ನಡೆಯುತ್ತಿದೆ. ಸದರಿ ಕಾರ್ಯಕ್ರಮವು ಅಕ್ಟೋಬರ್ 17 ರಂದು ಶ್ರೀ ನಾಗಾವಿ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವದ ನಿಮಿತ್ತ ಪಲ್ಲಕ್ಕಿ ಉತ್ಸವ ಮುಂಚಿತವಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಂದರೆ ಬಸ್ ಡಿಪೋದಿಂದ ನಾಗಾವಿ ವೃತ್ತ, ಅಗ್ನಿ ಶಾಮಕ ಠಾಣೆಯಿಂದ ಲಾಡ್ಜ್ಂಗ್ ಕ್ರಾಸ್, ರೈಲ್ವೆ ಸ್ಟೇಷನದಿಂದ ನಾಗಾವಿ ವೃತ್ತದವರೆಗೆ,  ಬಾಲಚಂದ್ರ ಸರಾಫ್ ಮನೆಯಿಂದ ನಾಗಾವಿ ವೃತ್ತ ಈ ಎಲ್ಲಾ ರಸ್ತೆಗಳಲ್ಲಿ ದೀಪಾಲಂಕಾರವನ್ನು ದಿನಾಂಕ ಅಕ್ಟೋಬರ್ 12 ರಿಂದ 19 ರವರೆಗೆ ಇರುತ್ತದೆ. ಹಾಗೂ ಕೆಲವು ವೃತ್ತಗಳಾದ ಲಾಡ್ಜಿಂಗ್ ಕ್ರಾಸ್,  ನಿಜಶರಣ ಅಂಬಿಗರ ಚೌಡಯ್ಯ ವೃತ್ತ,  ಬಸವೇಶ್ವರ ವೃತ್ತ, ಡಾ.ಬಿ.ಆರ್.ಅಂಬೇಡ್ಕರ ವೃತ್ತ, ಭುವನೇಶ್ವರಿ ವೃತ್ತ, ನಾಗಾವಿ ವೃತ್ತ, ದಿಗ್ಗಾಂವ ರಸ್ತೆ ಇವಗಳಿಗೂ ಸಹ ದೀಪಾಲಂಕಾರ ಮಾಡಲಾಗುತ್ತದೆ. ಹಾಗೂ ಪ್ರತಿ ಸಿಟಿಲೈಟ ಕಂಬಗಳಿಗೆ ಹಾಗೂ ಉತ್ಸವದ ಕಟೌಟ, ಬ್ಯಾನರಗಳನ್ನು ಹಾಕಲಾಗುತ್ತಿದೆ. ಹಾಗೂ ದೇವಿಯ ಉತ್ಸವದ ದಿನದಂದು ಹೆಲಿಪ್ಯಾಡ ಮುಖಾಂತರ ಪುಷ್ಪಾರ್ಚನೆ ಮತ್ತು ದೇವಿಯ ಭಾವಚಿತ್ರ ತೋರಿಸುವ ಮುಖಾಂತರ ಈ ಎಲ್ಲಾ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದ್ದೇವೆ. ಆದ್ದರಿಂದ ಸದರಿ ಕಾರ್ಯಕ್ರಮಗಳಿಗೆ ಅನುಮೋದನೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.

 

Spread the love

Leave a Reply

Your email address will not be published. Required fields are marked *

You missed

error: Content is protected !!