Oplus_0

ಚಿತ್ತಾಪುರದಲ್ಲಿ ವಿಶ್ವ ಔಷಧ ತಜ್ಞರ ದಿನಾಚರಣೆ

ಔಷಧ ತಜ್ಞರು ಜನರ ಆರೋಗ್ಯ ರಕ್ಷಕರು: ಜೋಶಿ 

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ನಾಗರಿಕರ ಆರೋಗ್ಯದ ಬಗ್ಗೆ ಕಾಳಜಿ ಮತ್ತು ಸುರಕ್ಷತೆ ಜೊತೆಗೆ ಔಷಧಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡುವ ಔಷಧ ತಜ್ಞರು ಆರೋಗ್ಯ ರಕ್ಷಕರಾಗಿದ್ದಾರೆ ಎಂದು ಜಿಲ್ಲಾ ಔಷಧಿ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ರವೀಂದ್ರ ಜೋಶಿ ಹೇಳಿದರು.

ಪಟ್ಟಣದ ಬಜಾಜ್ ಕಲ್ಯಾಣ ಮಂಟಪದಲ್ಲಿ ಚಿತ್ತಾಪುರ ತಾಲೂಕು ಔಷಧಿ ವ್ಯಾಪಾರಿಗಳ ಸಂಘದ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ಔಷಧ ತಜ್ಞರ ದಿನಾಚರಣೆ ನಿಮಿತ್ತ ಹಿರಿಯ ಔಷಧಿ ತಜ್ಞರಿಗೆ, ಪತ್ರಕರ್ತರಿಗೆ ಸನ್ಮಾನ ಹಾಗೂ ಔಷಧಿ ವ್ಯಾಪಾರಿಗಳಿಗೆ ಪ್ರಮಾಣ ಪತ್ರ ಮತ್ತು ಐಡಿ ಕಾರ್ಡ್ ವಿತರಣೆ ಹಾಗೂ ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಆಹಾರ ಕಿಟ್ ವಿತರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ಎಲ್ಲರೂ ಔಷಧ ವ್ಯಾಪಾರಿಗಳಾಗಲು ಸಾಧ್ಯವಿಲ್ಲ, ಮೊದಲು ವೈದ್ಯರು ಬರೆದ ಚೀಟಿಯನ್ನು ಓದಲು ಬರಬೇಕು, ವೈದ್ಯರ ಚೀಟಿ ಪ್ರಕಾರ ಔಷಧ ಮಾತ್ರೆಗಳು ತೆಗೆದುಕೊಳ್ಳುವ ವಿಧಾನ ಮತ್ತು ಕ್ರಮದ ಬಗ್ಗೆ ಔಷಧ ತಜ್ಞರು ಹೇಳಬೇಕು ಅಂದಾಗ ರೋಗಿಗಳು ಸಂತೋಷಗೊಂಡು ಅದರಂತೆ ಪಾಲನೆ ಮಾಡುತ್ತಾರೆ, ವೈದ್ಯರ ಸಲಹಾ ಚೀಟಿ ಇಲ್ಲದೆ ಯಾವುದೇ ಔಷಧಿ ನೀಡಬೇಡಿ ಎಂದು ಕಿವಿಮಾತು ಹೇಳಿದರು.

ಕರೋನಾ ಕಾಲದಲ್ಲಿ ಜನರ ಪ್ರಾಣ ಉಳಿಸಿದವರಲ್ಲಿ ಔಷಧಿ ವ್ಯಾಪಾರಿಗಳ ಪಾತ್ರ ಪ್ರಮುಖವಾಗಿದೆ ಆದರೂ ಸರ್ಕಾರ ನಮಗೆ ಯಾವುದೇ ಯೋಜನೆಗಳು ಜಾರಿಗೊಳಿಸಿಲ್ಲ, ಔಷಧಿ ವ್ಯಾಪಾರಿಗಳಿಗೆ ಸರ್ಕಾರ ವಸತಿ ಯೋಜನೆಯಡಿ ಮೀಸಲು ಕಲ್ಪಿಸಬೇಕು, ವಿಮಾ ಸೌಲಭ್ಯ ಒದಗಿಸಬೇಕು, ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು. ವೈದ್ಯರು ಅಕ್ಷರಗಳು ತಿಳಿಯುವ ಹಾಗೆ ಚೆನ್ನಾಗಿ ಬರೆಯಬೇಕೆಂಬ ನಿಯಮ ಇದ್ದರೂ ಅದು ಯಾರೂ ಪಾಲನೆ ಮಾಡುತ್ತಿಲ್ಲ ಹಾಗೂ ಫಾರ್ಮಾಸಿಸ್ಟ್ ಗಳಿಗೆ ಮಾತ್ರ ಮೇಡಿಕಲ್ ಹಾಕುವ ನಿಯಮ ಇದ್ದರೂ ಅದು ಕೂಡ ಆಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ತಾಲೂಕು ಅಧ್ಯಕ್ಷ ಸೈಯದ್ ನಿಜಾಮೋದ್ದಿನ್ ಚಿಸ್ತಿ ಮಾತನಾಡಿ, ತಾಲೂಕಿನ ಎಲ್ಲ ಔಷಧ ವ್ಯಾಪಾರಿಗಳ ಸಹಕಾರದಿಂದ ವಿಶ್ವ ಔಷಧ ತಜ್ಞರ ದಿನಾಚರಣೆ ನಿಮಿತ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಔಷಧ ವ್ಯಾಪಾರ ಜನರ ಆರೋಗ್ಯ ಸುರಕ್ಷತೆಗೆ ಸಂಬಂಧಿಸಿದ್ದು ಇದೊಂದು ಸಮಾಜದ ಹಾಗೂ ಜನರ ಸೇವೆಯಾಗಿದೆ ಎಂದು ಹೇಳಿದರು.

ಹಿರಿಯ ಔಷಧಿ ವ್ಯಾಪಾರಿಗಳಾದ ವಿವೇಕ್ ಹಂಚಾಟೆ, ಭೀಮು ವಚ್ಚಾ ಅವರಿಗೆ ಸನ್ಮಾನಿಸಲಾಯಿತು. ಡಾ.ಪ್ರಭುರಾಜ ಕಾಂತಾ, ಜಿಲ್ಲಾ ಖಜಾಂಚಿ ಧನಂಜಯ ಪೂರಿ, ಔಷಧಿ ವ್ಯಾಪಾರಿಗಳಾದ ವಿಜಯಕುಮಾರ್ ಅಂಗಡಿ, ಗೋಪಾಲ್ ಸಿಂಗ್, ಚಂದರರೆಡ್ಡಿ, ವಿಶ್ವಾರಾಧ್ಯ ಅಂಗಡಿ, ಮಹ್ಮದ್ ಅಲೀಂ, ಸರ್ವಾಸ್ ಅಹ್ಮದ್, ಸುಭಾಶ್ಚಂದ್ರ ಹುಳಗೋಳ, ಶ್ರೀಕಾಂತ ಪಾಟೀಲ, ಯಂಕಾರೆಡ್ಡಿ ಭೀಮನಳ್ಳಿ, ಚನ್ನಬಸಪ್ಪ ಭೀಮನಳ್ಳಿ, ಶಿವಕುಮಾರ ಸುನಾರ್, ಚಂದ್ರಕಾಂತ ಜಿತುರೆ, ಸ್ವಸ್ತಿಕ್ ಭಂಡಾರಿ, ಕುನಾಲ್, ಸಂತೋಷ ಸೇರಿದಂತೆ ಅನೇಕರು ಇದ್ದರು. ಸಂಜು ಮೇಡಿಕಲ್ ದಿಗ್ಗಾಂವ ನಿರೂಪಿಸಿದರು, ಶಿವಕುಮಾರ್ ಗುರುಮಠಕಲ್ ವಂದಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!