Oplus_0

ಕರವೇ ಇಂಗಳಗಿ ವಲಯ ಅಧ್ಯಕ್ಷರಾಗಿ ಅರುಣಕುಮಾರ್ ಸಿಂಧೆ ಆಯ್ಕೆ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ) ಚಿತ್ತಾಪುರ ತಾಲೂಕಿನ ಇಂಗಳಗಿ ವಲಯ ಅಧ್ಯಕ್ಷರಾಗಿ ಆಯ್ಕೆಯಾದ ಅರುಣಕುಮಾರ್ ಸಿಂಧೆ ಅವರಿಗೆ ನೇಮಕಾತಿ ಪತ್ರವನ್ನು ತಾಲೂಕು ಅಧ್ಯಕ್ಷ ಚಂದರ್ ಚವ್ಹಾಣ ನೀಡಿದರು.

ರಾಜ್ಯ ಒಕ್ಕೂಟ ವ್ಯವಸ್ಥೆಯಲ್ಲಿ ಕನ್ನಡ ಕನ್ನಡಿಗ, ಮತ್ತು ಕರ್ನಾಟಕ ಸರ್ವಭೌಮತೆಯನ್ನು ಕಾಪಾಡಲು ಕಳೆದ ಹಲವಾರು ವರ್ಷಗಳಿಂದ ದುಡಿಯುತ್ತಿರುವ ಕರ್ನಾಟಕ ರಕ್ಷಣಾ ವೇದಿಕೆಯ ತತ್ವ ಸಿದ್ದಾಂತದಡಿಯಲ್ಲಿ ಸೇವೆ ಸಲ್ಲಿಸಬೇಕು ಎಂದು ಸೂಚಿಸಿದ್ದಾರೆ.

ಈ ಗುರುತರ ಜವಾಬ್ದಾರಿಯನ್ನು ಅತ್ಯಂತ ಶೃದ್ಧೆ ಮತ್ತು ಪ್ರಮಾಣಿಕತೆಯಿಂದ ನಿರ್ವಹಿಸಿ ಕರ್ನಾಟಕ ರಕ್ಷಣಾ ವೇದಿಕೆಯನ್ನು ಬಲಪಡಿಸಲು ಶಕ್ತಮೀರಿ ಶ್ರಮವಹಿಸಿ ಎಂದು ತಿಳಿಸಿದ್ದಾರೆ.

ಕರವೇ ವಾಡಿ ಘಟಕ ಅಧ್ಯಕ್ಷ ಶಿವುಕುಮಾರ್ ಗುತ್ತೇದಾರ, ಕಾರ್ಯದರ್ಶಿ ಅರ್ಜುನ್ ಕಟ್ಟಿಮನಿ, ಸಾಯಿನಾಥ್ ಚೀಟಿಯಲ್ಕರ್, ಪ್ರೇಮ್ ಜೋಶಿ, ಸಾಬಯ್ಯ ಗುತ್ತೇದಾರ್ ಇದ್ದರು.

Spread the love

Leave a Reply

Your email address will not be published. Required fields are marked *

You missed

error: Content is protected !!