ಚಿತ್ತಾಪುರ ಪೆದ್ದು ಮಠದಲ್ಲಿ ಗುರುವಂದನಾ ಕಾರ್ಯಕ್ರಮ, ಜ್ಞಾನ ಮತ್ತು ಮಾರ್ಗದರ್ಶನ ನೀಡುವ ಗುರು ದಿವ್ಯ ಶಕ್ತಿ ಇದ್ದಂತೆ: ದಿಗ್ಗಾಂವ ಶ್ರೀ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪ್ರತಿಯೊಬ್ಬರ ಬದುಕಿನಲ್ಲೂ ಗುರುವಿನ ಮಹತ್ವ ತುಂಬಾನೇ ವಿಶೇಷವಾಗಿರುತ್ತದೆ. ಗುರು ನಮಗೆ ಪ್ರತಿಯೊಂದು ಹಂತದಲ್ಲೂ ಜ್ಞಾನವನ್ನು ಮತ್ತು ಮಾರ್ಗದರ್ಶನವನ್ನು ನೀಡುವ ದಿವ್ಯ ಶಕ್ತಿ ಇದ್ದಂತೆ ಎಂದು ದಿಗ್ಗಾಂವ-ನಾಗಾವಿ ಮಠದ ಶ್ರೀ ಸಿದ್ದವೀರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಕಡಬೂರ ಗಲ್ಲಿಯ ಶ್ರೀ ಸಿದ್ದವಿರೇಶ್ವರ ಪೆದ್ದು ಮಠದಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಗುರುವಿಗಿಂತ ದೊಡ್ಡ ವ್ಯಕ್ತಿ ಯಾರು ಇಲ್ಲ, ಗುರು ವ್ಯಕ್ತಿಯಲ್ಲ ಶಿಷ್ಯರಿಗೆ ಒಳ್ಳೆಯ ದಾರಿ ಹಿಡಿಸುವ ದಿವ್ಯ ಶಕ್ತಿಯೆಂದು ಆಶೀರ್ವಚನ ನೀಡಿದರು. ಗುರು ಪೂರ್ಣಿಮಾವನ್ನು ಗುರು ಮತ್ತು ಶಿಷ್ಯರ ನಡುವಿನ ಬಾಂದವ್ಯವನ್ನು ಗೌರವಿಸುವುದಕ್ಕಾಗಿ ಆಚರಿಸಲಾಗುತ್ತದೆ. ಈ ದಿನದಂದು ಗುರುಗಳನ್ನು ದೇವರೆಂದು ಪೂಜಿಸುತ್ತಾರೆ ಎಂದರು.
ನಾಗಾವಿ ಶ್ರೀ ಸಿದ್ದೇಶ್ವರ ಕೋಟಿ ಮಠ (ಕಡ್ಲಿ ಬಸವಣ್ಣಗುಡಿ) ಹಾಗೂ ಸಿದ್ಧವೀರೇಶ್ವರ ಪೆದ್ದುಮಠ ಚಿತ್ತಾಪುರ ಉಭಯ ಶಿವಲಿಂಗಕ್ಕೆ ಮಹಾ ರುದ್ರಾಭಿಷೇಕ, ಪೂಜಾ, ಬಿಲ್ವಾರ್ಚನೆ ಮಹಾಮಂಗಲ ನಡೆಯಿತು.
ಪ್ರವಚನಕಾರರು ಜಗದೀಶ ಶಾಸ್ತ್ರೀಗಳು ಹಿರೇಮಠ ಸನ್ನತಿ, ಸಂಗೀತಗಾರರು ಸಂಗಯ್ಯ ಸ್ವಾಮಿ ಹೋನಗುಂಟಿ, ಸಿದ್ದಣ್ಣ ದಂಡೋತಿ ಹಲಚೆರಾ, ತಬಲಾವಾದಕರು ಶರಣಯ್ಯ ಸ್ವಾಮಿ ಕಲಕಂಭ, ಮಂಜುನಾಥ ವಿಶ್ವಕರ್ಮ ಡೋಣಗಾಂವ ಅವರು ಸೇವೆ ಸಲ್ಲಿಸಿದರು.
ಶಿವನಾಗಪ್ಪ ಮುತ್ತಲಗಡ್ಡಿ, ತಿಪ್ಪಣ್ಣ ಸಂಗಾವಿ, ಸಿದ್ದರಾಮರೆಡ್ಡಿ ಪಾಲಪ್, ಶರಣಪ್ಪ ಅಲ್ಲೂರ್ ಚಿತ್ತಾಪುರ, ಮಲ್ಲಿಕಾರ್ಜುನ ಪೂಜಾರಿ, ಮಲ್ಲಿಕಾರ್ಜುನ ದೊಡ್ಡಮನಿ, ಬಸಯ್ಯಸ್ವಾಮಿ ಸಾತನೂರ, ವೀರಯ್ಯಸ್ವಾಮಿ ಹತ್ತಿಕುಣಿ, ಲಕ್ಷ್ಮಿಕಾಂತ ಚಿಳಗೇರಿ, ಸೂರ್ಯಕಾಂತ ಸ್ವಾಮಿ, ಶಂಕರಯ್ಯ ಸ್ವಾಮಿ, ಮಂಜುನಾಥ ಜೈಗುರು ಚಿತ್ತಾಪುರ ಸೇರಿದಂತೆ ನಾಗಾವಿ ನಾಡು, ನೃಪತುಂಗ ನಾಡು, ಕಲ್ಯಾಣ ನಾಡಿನ ನೂರಾರು ಭಕ್ತರು ಭಾಗವಹಿಸಿದರು.
ವಿಶ್ವನಾಥ ಶಾರದಾ ಜಗನ್ನಾಥ ಚಿತ್ತಾಪುರ ಅನ್ನದಾಸೋಹ ಸೇವೆ, ಮಲ್ಲಿಕಾರ್ಜುನ ಶ್ರೀಮತಿ ಜಗದೇವಿ ಗಂಗಣಿ ಹೆಡ್ಡಳ್ಳಿ ಇವರು ಗುರುಗಳಿಗೆ ಭಕ್ತಿ ಸೇವೆ ಉಡುಗೊರೆ ಹಾಗೂ ಶಿವಶರಣಪ್ಪ ಶಿಕ್ಷಕರು ಶ್ರೀಮತಿ ಶಕುಂತಲಾ ಶಿಕ್ಷಕಿ ದಿಗ್ಗಾಂವ ಇವರಿಂದ ಗುರುಗಳ ಪಾದಪೂಜಾ ನಡೆಯಿತು. ಗುರುಗಳಿಗೆ ಹಲವಾರು ಗ್ರಾಮ ಪಟ್ಟಣದ ಸದ್ಭಕ್ತರಿಂದ ಗೌರವ ಸತ್ಕಾರ, ಶ್ರೀಗಳಿಂದ ಕಲಾವಿದರಿಗೂ ಸಂಘ ಸಂಸ್ಥೆಯ ಭಕ್ತರಿಗೆ ಗುರುರಕ್ಷೆ ನೆರವೇರಿತು.
ಬಸಲಿಂಗಯ್ಯ ಸ್ವಾಮಿ ಹಿರೇಮಠ ಅಲ್ಲೂರ್ ಬಿ.ಸ್ವಾಗತಿಸಿದರು, ಶಿವಶರಣಪ್ಪ ಉಡಿಗಿ ದಿಗ್ಗಾಂವ ನಿರೂಪಿಸಿದರು, ವಂದನಾರ್ಪಣೆ, ಶಿವಶರಣಪ್ಪ ಹೊನ್ನ ಕಲಕಂಭ ವಂದಿಸಿದರು.
