ರುಮ್ಮನಗೂಡ್ ಗ್ರಾಮ ಪಂಚಾಯಿತಿಯಲ್ಲಿ ಅವ್ಯವಹಾರ, ಪಿಡಿಓ ಮತ್ತು ಅಧ್ಯಕ್ಷರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ
ನಾಗಾವಿ ಎಕ್ಸಪ್ರೆಸ್
ಕಾಳಗಿ: ತಾಲೂಕಿನ ರುಮ್ಮನಗೂಡ್ ಗ್ರಾಮ ಪಂಚಾಯತಿಯಲ್ಲಿ ಗ್ರಾಮದ ಜನರಿಗೆ ಸಿಗಬೇಕಾದ ಮೂಲ ಸವಲತ್ತುಗಳು ಮತ್ತು ಕುಡಿಯುವ ನೀರು ಸಮಯಕ್ಕೆ ಸರಿಯಾಗಿ ಸಿಗುತ್ತಿಲ್ಲ. ಕಾರಣ ಸರಕಾರದಿಂದ ಬಂದ 15ನೇ ಹಣಕಾಸಿನ ಅನುದಾನದವು ರುಮ್ಮನಗೂಡ್ ಗ್ರಾಮ ಪಂಚಾಯತಿಗೆ ಬಂದಿರುತ್ತದೆ. ಇದರಲ್ಲಿ ಸುಳ್ಳು ದಾಖಲೆಯನ್ನು ಸೃಷ್ಟಿಸಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಧ್ಯಕ್ಷರು ಕೂಡಿ ಈ ಹಣವನ್ನು ಲೂಟಿ ಮಾಡಿದ್ದಾರೆ. ಹೀಗಾಗಿ ಇವರ ವಿರುದ್ಧ ಕೂಡಲೇ ಕಾನೂನು ಕ್ರಮ ಕೈಗೊಂಡು ಇವರನ್ನು ಅಧಿಕಾರದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಮಾದಿಗ ದಂಡೋರ ಹೋರಾಟ ಸಮಿತಿ ನೇತೃತ್ವದಲ್ಲಿ ಮುಖಂಡರು ಪಂಚಾಯತ್ ಕಾರ್ಯಾಲಯದ ಎದುರಿಗೆ ಪ್ರತಿಭಟನೆ ನಡೆಸಿದರು.
ಹೋರಾಟ ಸಮಿತಿ ತಾಲೂಕು ಅಧ್ಯಕ್ಷ ಕರಣ್ ರಾಜಾಪುರ ಮಾತನಾಡಿ, ಕುಡಿಯುವ ನೀರಿನ ಸಮಸ್ಯೆ, ವಿದ್ಯುತ್ ಕಂಬಗಳಿಗೆ ಬೀದಿ ದೀಪ ಅಳವಡಿಸುವುದು, ವಸತಿ ಯೋಜನೆಯಲ್ಲಿ ಬಿಪಿಎಲ್ ಕಾರ್ಡುದಾರರಿಗೆ ಫೋಟೋ ಅಳವಡಿಸಲು ಲಂಚ ಕೇಳುತ್ತಿರುವುದು ಇದನ್ನು ನಿಲ್ಲಿಸಬೇಕು. ಪಿಡಿ ಓ ಅಧಿಕಾರಿಯನ್ನು ಅಧಿಕಾರದಿಂದ ವಜಾಗೊಳಿಸಬೇಕು ಒಂದು ವೇಳೆ ಇವರ ಮೇಲೆ ಸೂಕ್ತವಾದ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸ್ಥಳಕ್ಕಾಗಮಿಸಿದ ಕಾಳಗಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಡಾ.ಬಸಲಿಂಗಪ್ಪ ಡಿಗ್ಗಿ ಅವರು ಮನವಿ ಪತ್ರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ರೈತ ಸೇನೆ ತಾಲೂಕು ಅಧ್ಯಕ್ಷ ವೀರಣ್ಣ ಗಂಗಾಣಿ, ಹಣಮಂತ್ ಮೇಲಿನಕೇರಿ ರುಮ್ಮನಗೂಡ್, ಸುಂದರ್ ಡಿ ಸಾಗರ, ಡೇವಿಡ್ ರುಮ್ಮನಗೂಡ್, ಶ್ರೀಕಾಂತ್ ಸಜ್ಜನ್, ಭೀಮು ರಟಕಲ್, ಮಲ್ಲಿಕಾರ್ಜುನ್ ಗೋಟೂರ, ಸುರೇಶ್ ಕೋಡ್ಲಿ, ಪಿಂಟು ಕೋಡ್ಲಿ, ಪೀರಪ್ಪ ಸಾಲಹಳ್ಳಿ ಆನಂದ್ ಯಲಕಪಳ್ಳಿ, ಅನಿಲ್ ಹೆಬ್ಬಾಳ, ಚಂದ್ರಕಾಂತ್, ಸುರೇಶ ಮೇಲಿನಕೇರಿ, ಸಂತೋಷ್ ಸಾಸರಗಾಂವ್, ಕಾಶಪ್ಪ ಮಾಸ್ಟರ್ ಸೇರಿದಂತೆ ರುಮ್ಮನಗೂಡ್ ಗ್ರಾಮದ ಜನರು ಭಾಗವಹಿಸಿದರು.

