Oplus_131072

ಚಿತ್ತಾಪುರ: ನೀರನ್ನು ಸೋಸಿ ಕಾಯಿಸಿ ಆರಿಸಿ ಕುಡಿಯಲು ಮುಖ್ಯಾಧಿಕಾರಿ ಮನವಿ 

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಪುರಸಭೆಯಿಂದ ಕಾಗಿಣಾ ನದಿಯಿಂದ ಸರಬರಾಜು ಆಗುವ ನೀರನ್ನು ಸೋಸಿ ಕಾಯಿಸಿ ಆರಿಸಿ ಕುಡಿಯಲು ಬಳಸಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಮನೋಜಕುಮಾರ ಗುರಿಕಾರ ಕೋರಿದ್ದಾರೆ.

ಪುರಸಭೆಯ ವ್ಯಾಪ್ತಿಯಲ್ಲಿ ಪಟ್ಟಣಕ್ಕೆ ಸರಬರಾಜು ಆಗುತ್ತಿರುವ ಕಾಗಿಣಾ ನದಿಯಲ್ಲಿ ಸತತ 2 ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಹೆಚ್ಚು ಮಣ್ಣು ಮಿಶ್ರಿತ ನೀರು ಶುದ್ಧೀಕರಣ ಘಟಕಕ್ಕೆ ಬರುತ್ತಿದೆ. ಸೂಕ್ತವಾಗಿ ಶುದ್ಧೀಕರಣ ಮಾಡಿದರೂ ಕೂಡಾ ನೀರಿನಲ್ಲಿ ಮಣ್ಣು ಮಿಶ್ರಿತವಾಗುತ್ತಿದೆ. ಕಾರಣ ನದಿಯಲ್ಲಿ ಕಲುಷಿತ ನೀರು ನಿಯಂತ್ರಣಕ್ಕೆ ಬರುವವರೆಗೆ ಸಾರ್ವಜನಿಕರು ಸಹಕರಿಸಬೇಕು ಎಂದು ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!