ಚಿತ್ತಾಪುರ ಪಟ್ಟಣದಲ್ಲಿ ತಂಬಾಕು ನಿಷೇಧ ಕಾರ್ಯಾಚರಣೆ | ಅಂಗಡಿಗಳ ಮೇಲೆ ದಾಳಿ, ರೂ.18400 ದಂಡ: ತಹಸೀಲ್ದಾರ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನಾದ್ಯಂತ ತಂಬಾಕು ನಿಷೇಧ ಕಾರ್ಯಾಚರಣೆ ಕೈಗೊಂಡ ತಹಸೀಲ್ದಾರ್ ನಾಗಯ್ಯ ಹಿರೇಮಠ ನೇತೃತ್ವದ ತಂಡ ಪಟ್ಟಣದ ಬಸ್ ನಿಲ್ದಾಣ, ತರಕಾರಿ ಮಾರುಕಟ್ಟೆ, ಜನತಾ ವೃತ್ತ, ಕಪ್ಪಡಾ ಬಜಾರ್ ಸೇರಿದಂತೆ ಇತರೆ ರಸ್ತೆಗಳ ಅಂಗಡಿಗಳ ಮೇಲೆ ದಾಳಿ ಮಾಡಿ ಪರವಾನಿಗೆ ರಹಿತ ಮತ್ತು ನಿಯಮ ಉಲ್ಲಂಘನೆ ತಂಬಾಕು ವ್ಯಾಪಾರಸ್ಥರಿಗೆ ಕೊಟ್ಟಾ ಕಾಯ್ದೆ ಅಡಿಯಲ್ಲಿ ದಂಡ ವಿಧಿಸಿದರು ಹಾಗೂ ತಂಬಾಕು ಸೇವನೆ ಮತ್ತು 21 ವರ್ಗದ ಒಳಗಿನ ಮಕ್ಕಳು ಆಕರ್ಷಿತರಾಗದಂತೆ ಜಾಗೃತಿ ಸಂದೇಶ ನೀಡಿದರು.
ಈ ವೇಳೆ ತಹಸೀಲ್ದಾರ್ ನಾಗಯ್ಯ ಹಿರೇಮಠ ಮಾತನಾಡಿ, ತಂಬಾಕು ನಿಯಂತ್ರಣ ಕಾನೂನು ಕೊಟ್ಟಾ 2003 ಕಾಯ್ದೆಯನ್ವಯ ತಾಲೂಕಿನಾದ್ಯಂತ ಅನಧಿಕೃತ ತಂಬಾಕು ಮಾರಾಟವನ್ನು ನಿಯಂತ್ರಿಸಲು ಈ ಕಾರ್ಯಚರಣೆಯನ್ನು ಮಾಡಲಾಗಿದ್ದು ವಿವಿಧ ಅಂಗಡಿಗಳಿಂದ ಆರ್.ಆರ್ ಪಾಕೀಟ್ 16, ಬಾಬಾ ಪಾಕೀಟ್ 16, ಕಿಶನ್ ಚಾಪ್ 1, ಗೇ ಚಾಪ್ 2, ಎಸ್.ಪಿ 999-2 ವಶಪಡಿಸಿಕೊಂಡಿದ್ದು ರೂ.18400 ದಂಡ ವಿಧಿಸಲಾಗಿದೆ ಎಂದು ತಿಳಿಸಿದರು.
ಲೈಸನ್ಸ್ ಪಡೆಯದೆ ಅನಧಿಕೃತ ತಂಬಾಕು ಮಾರಾಟ ಮಾಡುವ ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳ ಜಾಹಿರಾತು ಬೋರ್ಡ್ ಬಿತ್ತಿ ಪತ್ರ ಮತ್ತು ಎಲ್.ಸಿ.ಡಿ ಟಿ.ವಿ.ಗಳ ಮುಖಾಂತರ ಪ್ರಚಾರವನ್ನು ಮಾಡುವಂತಿಲ್ಲ, ಅಪ್ರಾಪ್ತ ವಯಸ್ಕರಿಗೆ ತಂಬಾಕು ಉತ್ಪನ್ನಗಳ ಮಾರಾಟ ಮಾಡುವುದು ಹಾಗೂ ಅಪ್ರಾಪ್ತ ವಯಸ್ಕರಿಂದ ತಂಬಾಕು ಉತ್ಪನ್ನಗಳ ಮಾರಾಟ ಮಾಡುವುದು ಶಿಕ್ಷಾರ್ಹ ಅಪಾರದವಾಗಿದೆ ಎಂದು ಹೇಳಿದರು.
ತಂಬಾಕು ಮಾರಾಟ ಅಂಗಡಿಗಳಲ್ಲಿ ಬೆಂಕಿಪೊಟ್ಟಣ, ಲೈಟರ್ ಮುಂತಾದ ಧೂಮಪಾನಕ್ಕೆ ಉತ್ತೇಜಿಸುವ ವಸ್ತುಗಳನ್ನು ತಂಬಾಕು ಮಾರಾಟವನ್ನು ಮಾಡುವಂತಹ ಅಂಗಡಿಗಳಲ್ಲಿ ಸಾರ್ವಜನಿಕರಿಗೆ ನೀಡಬಾರದು. ಅನಧೀಕೃತ ತಂಬಾಕು ಉತ್ಪನ್ನಗಳ ಮಾರಾಟವು ಶಿಕ್ಷಾರ್ಹ ಅಪರಾಧವಾಗಿದ್ದು, ಈ ರೀತಿಯಾಗಿ ಕಾನೂನು ಉಲ್ಲಂಘನೆ ಮಾಡುವ ಅಂಗಡಿಗಳ ಮಾಲೀಕರಿಗೆ ದಂಡ ವಿಧಿಸಲಾಗುವುದು. ತಂಬಾಕಿನ ಉತ್ಪನ್ನಗಳ ಮಾರಾಟಕ್ಕೆ ಕಡ್ಡಾಯವಾಗಿ ಪರವಾನಗಿಯನ್ನು ಪಡೆಯಬೇಕು ಎಂದು ಹೇಳಿದರು.
ಕಾರ್ಯಾಚರಣೆಯಲ್ಲಿ ಸಿಡಿಪಿಒ ಆರತಿ ತುಪ್ಪದ್, ಪಿಎಸ್ಐ ಶ್ರೀಶೈಲ್ ಅಂಬಾಟಿ ಸೇರಿದಂತೆ ಪುರಸಭೆ, ಆರೋಗ್ಯ, ಪೊಲೀಸ್, ಶಿಕ್ಷಣ ಸೇರಿದಂತೆ ಇತರೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
“ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಚಿತ್ತಾಪುರ ಪಟ್ಟಣ ಮತ್ತು ವಾಡಿ ಪಟ್ಟಣ ಹಾಗೂ ಗ್ರಾಮ ಪಂಚಾಯಿತಿವಾರು ಕೋಟ್ಟಾ-2003ರ ಅಧೀನದ ಎಲ್ಲಾ ಕಡೆ ಏಕಕಾಲದಲ್ಲಿ ಒಂದೇ ದಿನಾ ಬೃಹತ್ ಕಾರ್ಯಾಚರಣೆ ತಾಲೂಕಿನಲ್ಲಿ ಪರಿಣಾಮಕಾರಿ ಅನುಷ್ಠಾನಗೊಳಿಸಲು ಎಲ್ಲಾ ಇಲಾಖೆಗಳ ಸಮನ್ವಯಕ್ಕಾಗಿ ತಾಲೂಕಾ ಮತ್ತು ಗ್ರಾಮ ಮಟ್ಟದಲ್ಲಿ 10 ತಂಡಗಳನ್ನು ರಚಿಸಲಾಗಿದೆ”.-ನಾಗಯ್ಯ ಹಿರೇಮಠ ತಹಸೀಲ್ದಾರರು.

