ಗುಲ್ಬರ್ಗ ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಅಬ್ದುಲ್ ರಬ್ ಉಸ್ತಾದ್ ಅವರಿಗೆ ನಿವೃತ್ತ ಮುಸ್ಲಿಂ ನೌಕರರ ಸಂಘದಿಂದ ಸನ್ಮಾನ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದ ಹೊಸ ಉಪಕುಲಪತಿಯಾಗಿ ನಿಯೋಜನೆಗೊಂಡ ಉರ್ದು ಮತ್ತು ಪರ್ಷಿಯನ್ ವಿಭಾಗದ ಪ್ರೊಫೆಸರ್ ಅಬ್ದುಲ್ ರಬ್ ಉಸ್ತಾದ್ ಅವರಿಗೆ ಕರ್ನಾಟಕ ರಾಜ್ಯ ನಿವೃತ್ತ ಮುಸ್ಲಿಂ ನೌಕರರ ಸಂಘದ ಕಲಬುರಗಿ ಜಿಲ್ಲಾಧ್ಯಕ್ಷ ಸೈಯದ್ ನಜೀರುದ್ದೀನ್ ಮುತ್ತುವಲಿ ಅವರು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ನವಾಬ್ ಖಾನ್, ವಕ್ತಾರ ಮಂಜೂರ್ ವಕಾರ್, ಮುಹಮ್ಮದ್ ಮುಜೀಬ್ ಅಲಿ ಖಾನ್ ಮತ್ತು ಎಂಜಿನಿಯರ್ ವಾಸಿಮ್ ಆರಿಫ್ ಉಪಸ್ಥಿತರಿದ್ದರು.

