Oplus_0

ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಚಿತ್ತಾಪುರ ತಾಲೂಕಿಗೆ ಸಮಗ್ರ ಪ್ರಶಸ್ತಿ: ಮರಿಯಪ್ಪ ಬೊಮ್ಮನಳ್ಳಿಕರ್ ಹರ್ಷ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಕಲಬುರಗಿ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದಲ್ಲಿ  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಕಲಬುರಗಿ ಇವರ ಸಹಯೋಗದಲ್ಲಿ ನಡೆದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ ಚಿತ್ತಾಪುರ ತಾಲೂಕು ಪಡೆದುಕೊಂಡಿದೆ ಎಂದು ಮರಿಯಪ್ಪ ಬೊಮ್ಮನಳ್ಳಿಕರ್ ತಿಳಿಸಿದ್ದಾರೆ.

ಪುರುಷರ ಕಬ್ಬಡಿ ಪ್ರಥಮ, ಪುರುಷರ ವಾಲಿಬಾಲ್ ದ್ವಿತೀಯ, ಪುರುಷರ ಖೋ ಖೋ ದ್ವಿತೀಯ, ಮಹಿಳೆಯರ ಖೋ ಖೋ ಪ್ರಥಮ, ವಾಲಿಬಾಲ್ ಪ್ರಥಮ, 100 ರನ್ನಿಂಗ್ ಸಾಕ್ಷಿ ಪ್ರಥಮ, ತ್ರಿಬಲ್ ಜಂಪ್ ಸಮಾಧಾನ್, ಲಾಂಗ್ ಜಂಪ್ ತೃತೀಯ, ತ್ರಿಪಲ್ ಜಂಪ್  ದ್ವಿತೀಯ ಹಾಗೂ ತೃತೀಯ, ಹೈ ಜಂಪ್ ದ್ವಿತೀಯ ಹಾಗೂ ತೃತೀಯ, 400 ರೀಲೇ ದ್ವಿತೀಯ, 100 ಮೀ. ಹರ್ಡಲ್ಸ್ ದ್ವಿತೀಯ, ಬಾಲಕರ ವಿಭಾಗದ  400 ಮೀ ರೀಲೇ ಓಟದಲ್ಲಿ ದ್ವಿತೀಯ ಸ್ಥಾನ.

ಲಾಂಗ್ ಜಂಪ್ ಸುನಿತಾ ಮಲ್ಲಪ್ಪ ತೃತೀಯ, ತ್ರಿಪಲ್ ಜಂಪ್  ರಕ್ಷಿತಾ ಚನ್ನಬಸಪ್ಪ ದ್ವಿತೀಯ, ಭವಾನಿ ಭೀಮಣ್ಣ ತೃತೀಯ, ಹೈ ಜಂಪ್ ಸುನಿತಾ ಮಲ್ಲಪ್ಪ ದ್ವಿತೀಯ, ಭವಾನಿ ಭೀಮಣ್ಣ ತೃತೀಯ, 400 ರೀಲೇ ಭವಾನಿ ಭೀಮಣ್ಣ, ಭೀಮಬಾಯಿ ಚನ್ನಬಸಪ್ಪ, ಕಲ್ಪನಾ ಶಿವಬಸಪ್ಪ, ಸುನಿತಾ ಮಲ್ಲಪ್ಪ ದ್ವಿತೀಯ, 100 ಮೀ ಹರ್ಡಲ್ಸ್ ಭವಾನಿ ಭೀಮಣ್ಣ ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

“ಚಿತ್ತಾಪುರ ಕಬ್ಬಡಿ ತಂಡವು ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಸತತವಾಗಿ 5 ವರ್ಷದಿಂದ ಗೆಲ್ಲುತ್ತಾ ಬಂದಿದೆ. ಅಲ್ಲದೇ ಈ ಬಾರಿ ಎಲ್ಲಾ ಕ್ರೀಡೆಗಳಲ್ಲಿ ಚಿತ್ತಾಪುರ ತಾಲೂಕಿನ ಕ್ರೀಡಾಪಟುಗಳು ಒಂದಿಲ್ಲೊಂದು ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆಯುವ ಸಮಗ್ರ ಪ್ರಶಸ್ತಿ ತನ್ನದಾಗಿಸಿಕೊಂಡಿದೆ ಇದು ಬಹಳ ಹರ್ಷವನ್ನುಂಟು ಮಾಡಿದೆ”.-ಮರಿಯಪ್ಪ ಬೊಮ್ಮನಳ್ಳಿ ಕ್ರೀಡಾಂಗಣ ವ್ಯವಸ್ಥಾಪಕರು ಚಿತ್ತಾಪುರ.

Spread the love

Leave a Reply

Your email address will not be published. Required fields are marked *

You missed

error: Content is protected !!