ನಾಗಾವಿ ನಾಡು ನಾಟ್ಯ ಸಂಘದ ಉದ್ಘಾಟನೆ
ನಾಗಾವಿ ನಕ್ಷತ್ರ ಪ್ರಶಸ್ತಿಗೆ 11 ರಂಗಭೂಮಿ ಕಲಾವಿದರ ಆಯ್ಕೆ: ಚಂದರ್ ಚವ್ಹಾಣ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ರಾಷ್ಟ್ರಕೂಟರ ಕುಲ ದೇವತೆ ಶ್ರೀ ನಾಗಾವಿ ಯಲ್ಲಮ ದೇವಿಯ ಜಾತ್ರಾ ನಿಮಿತ್ಯ ನಾಗಾವಿ ನಾಡು ನಾಟ್ಯ ಸಂಘದ ಉದ್ಘಾಟನೆ ಕಾರ್ಯಕ್ರಮದ ಅಂಗವಾಗಿ ಕೊಡಮಾಡುವ ನಾಗಾವಿ ನಕ್ಷತ್ರ ಪ್ರಶಸ್ತಿಗೆ ತಾಲೂಕಿನ 11 ರಂಗಭೂಮಿಯ ಕಲಾವಿದರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಚಂದರ್ ಚವ್ಹಾಣ ತಿಳಿಸಿದ್ದಾರೆ.
ಪೂಜ್ಯ ನಾಗಪಯ್ಯ ಮಹಾಸ್ವಾಮಿಗಳು ಗದ್ದಗಿ ಮಠ ಅಳ್ಳೋಳ್ಳಿ, ರಾಚಣ್ಣ ಕಮರವಾಡಿ, ಶಿವಣ್ಣ ಹಿಟ್ಟಿನ್ ಹಲಕರ್ಟಿ, ಅಯ್ಯಣ್ಣ ಮಾಸ್ಟರ ಅಳ್ಳೋಳ್ಳಿ, ಮಲ್ಲು ಮಾಸ್ಟರ ಭಜಂತ್ರಿ ಹಲಕರ್ಟಿ, ಶಿವಶರಣಪ್ಪ ಶಿರವಾಳ ಕಮರವಾಡಿ, ಪ್ರಭು ಗುತ್ತೇದಾರ ಬೆಣ್ಣೂರ, ನಾಗರಾಜ ಬಾಳಿ ಮಲಕೂಡ, ಬಾಬು ಕಾಶಿ ಚಿತ್ತಾಪುರ, ರಾಮಕೃಷ್ಣ ಕರದಾಳ, ಶ್ರೀಧರ ಆಚಾರಿ ಅಳ್ಳೋಳ್ಳಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.