ನಾಗಾವಿ ಯಲ್ಲಮ್ಮ ಪಲ್ಲಕ್ಕಿ ಉತ್ಸವದಲ್ಲಿ ವಿಶೇಷ ಪುರವಣಿ ಬಿಡುಗಡೆ | ನಾಗಾವಿ ಎಕ್ಸಪ್ರೆಸ್ ಅಲ್ಪ ಸಮಯದಲ್ಲೇ ಎಲ್ಲರ ಮನ ಮತ್ತು ಮನೆ ಮುಟ್ಟಿದ ಏಕೈಕ ಪತ್ರಿಕೆ: ತಹಸೀಲ್ದಾರ್
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಸ್ಥಳೀಯ ಮತ್ತು ಸುತ್ತಲಿನ ಸುದ್ದಿ ಸಮಾಚಾರಗಳುನ್ನು ಅತೀ ಶೀಘ್ರದಲ್ಲಿ ಎಲ್ಲರಿಗೂ ಮುಟ್ಟಿಸುತ್ತಿರುವ ಕಾಶಿನಾಥ ಗುತ್ತೇದಾರ ಅವರ ಸಂಪಾದಕತ್ವದಲ್ಲಿ ಮುನ್ನೆಡೆಯುತ್ತಿರುವ ನಾಗಾವಿ ಎಕ್ಸಪ್ರೆಸ್ ಎಲ್ಲರ ಮನ ಮತ್ತು ಮನೆ ಮುಟ್ಟಿದ ಏಕೈಕ ಪತ್ರಿಕೆಯಾಗಿದೆ ಎಂದು ತಹಸೀಲ್ದಾರ್ ನಾಗಯ್ಯ ಹಿರೇಮಠ ಹೇಳಿದರು.
ಪಟ್ಟಣದ ಲಚ್ಚಪ್ಪ ನಾಯಕ ಸರಾಫ್ ಮನೆಯಲ್ಲಿ ಮಂಗಳವಾರ ನಾಗಾವಿ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಿ ನಂತರ ನಾಗಾವಿ ಎಕ್ಸಪ್ರೆಸ್ ಕನ್ನಡ ದಿನಪತ್ರಿಕೆಯ ವಿಶೇಷ ಪುರವಣಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ಅತ್ಯಂತ ಕಡಿಮೆ ಅವಧಿಯಲ್ಲಿ ವಿಶೇಷ ಪುರವಣಿ ಹೊರತಂದ ಸಂಪಾದಕ ಕಾಶಿನಾಥ ಗುತ್ತೇದಾರ ಅವರ ಕಾರ್ಯ ಅಮೋಘ ಎಂದು ಬಣ್ಣಿಸಿದರು. ವಸ್ತುನಿಷ್ಠ ನಿಖರವಾದ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಜನರಿಗೆ ಹಾಗೂ ಅಧಿಕಾರಿಗಳಿಗೆ ತಲುಪಿಸುತ್ತಿರುವ ಅವರ ಶ್ರಮ ಮತ್ತು ಸಾಧನೆ ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಶಂಕರಗೌಡ ಪಾಟೀಲ, ಸಿಪಿಐ ಚಂದ್ರಶೇಖರ ತಿಗಡಿ, ಕಾಳಗಿ ಸಿಪಿಐ ಜಗದೇವಪ್ಪ ಪಾಳಾ, ಪಿಎಲ್’ಡಿ ಬ್ಯಾಂಕ್ ಅಧ್ಯಕ್ಷ ಭೀಮಣ್ಣ ಸಾಲಿ, ಪುರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ ಕಾಶಿ, ಬಿಜೆಪಿ ಮುಖಂಡ ಅಯ್ಯಪ್ಪ ರಾಮತೀರ್ಥ, ಕೃಷಿಕ ಸಮಾಜದ ಅಧ್ಯಕ್ಷ ನಾಗರೆಡ್ಡಿ ಗೋಪಸೇನ್, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಜಗದೀಶ್ ಚವ್ಹಾಣ, ರೈತ ಸಂಘದ ಅಧ್ಯಕ್ಷ ಮೌನೇಶ್ ಭಂಕಲಗಿ, ರತ್ನಾಕರ್ ನಾಯಕ, ಕಣ್ವಾ ನಾಯಕ, ಗೌತಮ್ ನಾಯಕ, ಬೌದ್ಧ ಮಹಾಸಭಾ ಅಧ್ಯಕ್ಷ ಜಗನ್ನಾಥ ಮುಡಬೂಳಕರ್, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

