ದಿ.6 ರಂದು ದಾಂಡಿಯಾ ನೃತ್ಯ ಕಾರ್ಯಕ್ರಮ
ಚಿತ್ತಾಪುರದಲ್ಲಿ 2 ನೇ ವರ್ಷದ ನವರಾತ್ರಿ ಉತ್ಸವ, ದೇವಿ ಮೂರ್ತಿಯ ಭವ್ಯ ಮೆರವಣಿಗೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಸ್ಟೇಷನ್ ತಾಂಡಾದ ತುಕಾರಾಮ ಖೀರು ನಾಯಕ ತಾಂಡಾದ ಜೈ ಮಾತಾದಿ ನವರಾತ್ರಿ ಉತ್ಸವ ಸಮಿತಿ ವತಿಯಿಂದ 2 ನೇ ವರ್ಷದ ನವರಾತ್ರಿ ಉತ್ಸವ ನಿಮಿತ್ತ ಗುರುವಾರ ಜಗದಂಬಾ ದೇವಿ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು.
ಪಟ್ಟಣದ ಕಾಶಿ ಗಲ್ಲಿಯ ಗಣೇಶ ಮಂದಿರದಿಂದ ಪ್ರಾರಂಭವಾದ ಭವ್ಯ ಮೆರವಣಿಗೆ ಅಂಬೇಡ್ಕರ್ ವೃತ್ತ, ಭುವನೇಶ್ವರಿ ವೃತ್ತ, ಜನತಾ ವೃತ್ತ, ನಾಗಾವಿ ವೃತ್ತದ ಮೂಲಕ ತುಕಾರಾಮ ಖೀರು ನಾಯಕ ತಾಂಡಾಕ್ಕೆ ತಲುಪಿದ ನಂತರ ದೇವಿಯ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು 9 ದಿನಗಳ ಕಾಲ ನಿತ್ಯ ವಿಶೇಷ ಪೂಜೆ ನಡೆಯುವುದು. ಪ್ರಥಮ ಬಾರಿಗೆ ಗ್ರಾಂಡ ಫಿನಾಲೆ ದಾಂಡಿಯಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಶ್ವಥ್ ರಾಠೋಡ, ಶಿವರಾಮ್ ಚವ್ಹಾಣ ಅವರು ತಿಳಿಸಿದ್ದಾರೆ.
ಮೆರವಣಿಗೆಯಲ್ಲಿ ಹಲಗೆಯ ವಾದನಕ್ಕೆ ಬಂಜಾರ ಸಮಾಜದ ಯುವತಿಯರ ಹಾಗೂ ಮಹಿಳೆಯರ ನೃತ್ಯ ಹಾಗೂ ಡಿಜೆ ಸೌಂಡ್ ಗೆ ಯುವಕರ ನೃತ್ಯ ನೋಡುಗರ ಕಣ್ಮನ ಸೆಳೆಯಿತು.
ಕಂಬಳೇಶ್ವರ ಶ್ರೀ ಸೋಮಶೇಖರ ಶಿವಾಚಾರ್ಯರು, ತುಕಾರಾಮ ನಾಯಕ, ನವರಾತ್ರಿ ಉತ್ಸವ ಸಮಿತಿ ಅಧ್ಯಕ್ಷ ಅನಿಲಕುಮಾರ ಚವ್ಹಾಣ, ಟ್ರಸ್ಟ್ ಅಧ್ಯಕ್ಷ ನಾಗೇಂದ್ರ ರಾಠೋಡ, ಪ್ರದಾನ ಕಾರ್ಯದರ್ಶಿ ಲಕ್ಷ್ಮಣ ಚವ್ಹಾಣ, ವೆಂಕಟೇಶ್ ಜಾಧವ, ವಿಕಾಸ ಪವಾರ, ರಮೇಶ ಪವಾರ, ನಾಗು ಅಶೋಕ, ಗೋವಿಂದ, ಸುರೇಶ ಚವ್ಹಾಣ ವಿನೋದ ಚೋಕ್ಲಾ, ಕುಮಾರ ರಾಠೋಡ, ರಾಜು ಜಾಧವ, ಶಿವರಾಮ ಚವ್ಹಾಣ ಅಶ್ವಥ ರಾಠೋಡ, ರವೀಂದ್ರ ನಾಯಕ, ಸುರೇಶ್ ಚವ್ಹಾಣ, ವಿಠಲ್ ರಾಠೋಡ, ಚಂದ್ರಕಾಂತ ಚವ್ಹಾಣ, ರಾಜು ಚವ್ಹಾಣ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಬಂಜಾರ ಸಮಾಜದವರು ಭಾಗವಹಿಸಿದ್ದರು.
“ನವರಾತ್ರಿ ಉತ್ಸವ ನಿಮಿತ್ತ ಅ.6 ರಂದು ವಿಶೇಷ ದಾಂಡಿಯಾ ಸ್ಪರ್ಧೆ ಕಾರ್ಯಕ್ರಮ ಆಯೋಜಿಸಲಾಗಿದೆ. ದಾಂಡಿಯಾ ಕಾರ್ಯಕ್ರಮದಲ್ಲಿ ಜಿಲ್ಲೆ ಹಾಗೂ ವಿವಿಧ ತಾಲೂಕುಗಳ ದಾಂಡಿಯಾ ತಂಡಗಳು ಭಾಗವಹಿಸಬಹುದು. ಸ್ಪರ್ಧೆಯಲ್ಲಿ ವಿಜೇತರಾದ ತಂಡಕ್ಕೆ ಪ್ರಥಮ- 21 ಸಾವಿರ, ದ್ವಿತೀಯ- 11 ಸಾವಿರ, ತೃತೀಯ-5 ಸಾವಿರ ರೂಪಾಯಿ ಬಹುಮಾನ ರೂಪದಲ್ಲಿ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವ ಆಸಕ್ತ ತಂಡಗಳು ಮೊದಲು ನೋಂದಣಿ ಮಾಡಿಸಬೇಕು. ಹೆಚ್ಚಿನ ಮಾಹಿತಿಗಾಗಿ 9108685115, 9731595983, 8147234100 ಸಂಪರ್ಕಿಸಬಹುದು”.- ಅನೀಲಕುಮಾರ್ ಚವ್ಹಾಣ ಉತ್ಸವ ಸಮಿತಿ ಅಧ್ಯಕ್ಷರು.