ಶಹಾಬಾದ ರಸ್ತೆಯಲ್ಲಿ ಚರಂಡಿ ಅವ್ಯವಸ್ಥೆ ಅಪಾಯಕ್ಕೆ ಆಹ್ವಾನ, ಮೂಕ ಪ್ರಾಣಿಯ ನರಕಯಾತನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಶಹಾಬಾದ ರಸ್ತೆಯ ಹೊಸ ಕೋರ್ಟ್ ಎದುರಿಗೆ ಪುರಸಭೆ ವತಿಯಿಂದ ನಡೆಯುತ್ತಿರುವ ಚರಂಡಿ ಕಾಮಗಾರಿ ಅವ್ಯವಸ್ಥೆಯಿಂದ ಮೂಕಪ್ರಾಣಿ ಎಮ್ಮೆಯೊಂದು ಒಳಗಡೆ ಬಿದ್ದು ನರಕಯಾತನೆ ಅನುಭವಿಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳಾಗಲಿ ಅಥವಾ ಗುತ್ತಿಗೆದಾರರಾಗಲಿ ಗಮನ ಹರಿಸದೆ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಧನರಾಜ್ ಯಾದವ್ ಆರೋಪಿಸಿದ್ದಾರೆ.
ರಸ್ತೆ ಬದಿ ಚರಂಡಿ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ ಅಲ್ಲದೆ ಚರಂಡಿ ಮೇಲೆ ಬೆಡ್ ಹಾಕದೆ ಇರುವುದರಿಂದ ರಸ್ತೆ ದಾಟಬೇಕಾದರೆ ಮಕ್ಕಳು, ಮಹಿಳೆಯರು, ವೃದ್ದರು ಹಾಗೂ ವಿದ್ಯಾರ್ಥಿಗಳು ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಚರಂಡಿ ದಾಟುವಾಗ ಚರಂಡಿ ಒಳಗೆ ಬಿದ್ದರೆ ಯಾರು ಹೊಣೆಗಾರರು ಎಂದು ಪ್ರಶ್ನಿಸಿದ್ದಾರೆ
ಚರಂಡಿ ಮೇಲೆ ಬೇಗನೆ ಬೆಡ್ ಹಾಕಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಿ ಎಂದು ಗುತ್ತಿಗೆದಾರ ವಾರದ್ ಅವರಿಗೆ ಕೇಳಿದರೆ ಬೆಡ್ ಹಾಕುವ ನಮ್ಮ ಕೆಲಸ ಅಲ್ಲ ರಸ್ತೆ ಬದಿ ಇರುವ ಅಂಗಡಿಗಳ ಮಾಲಿಕರೆ ಹಾಕಿಕೊಳ್ಳಬೇಕೆಂದು ಹೇಳುತ್ತಾರೆ, ಜೆಇ ಅವರಿಗೆ ಕೇಳಿದರೆ ಪುರಸಭೆ ವತಿಯಿಂದಲೇ ಬೆಡ್ ಹಾಕಲಾಗುವುದು ಎಂದು ಹೇಳುತ್ತಾರೆ ಇವರ ನಡುವೆ ದ್ವಂದ್ವ ಹೇಳಿಕೆಗಳು ಬಂದಿವೆ ಎಂದು ಅವರು ಧನರಾಜ್ ತಿಳಿಸಿದ್ದಾರೆ.
ಇದೇ ರಸ್ತೆಯಲ್ಲಿ ಅಲ್ಪಸಂಖ್ಯಾತರ ವಿದ್ಯಾರ್ಥಿ ವಸತಿ ನಿಲಯ ಇದೆ, ನ್ಯೂ ಪೊಲೀಸ್ ಕ್ವಾರ್ಟರ್ಸ್ ಇದೆ, ಸ್ವಾಮಿ ಲೇಔಟ್ ಇದೆ ಸಾಕಷ್ಟು ಮನೆಗಳು, ಅಂಗಡಿಗಳು ಇವೆ ಹೀಗಾಗಿ ಚರಂಡಿ ಅಪೂರ್ಣ ಕಾಮಗಾರಿಯಿಂದ ಎಲ್ಲರಿಗೂ ತೊಂದರೆ ಆಗಿದೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಈ ಕಡೆ ಗಮನ ಹರಿಸಿ ಮುಂದೆ ಆಗುವ ಅನಾಹುತಗಳನ್ನು ತಪ್ಪಿಸಬೇಕು ಎಂದು ಆಗ್ರಹಿಸಿದ್ದಾರೆ.