ಶ್ರೀ ಸಿಮೆಂಟ್ ಕಂಪೆನಿ ವತಿಯಿಂದ ಡೋಣಗಾಂವ ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಮಂಜೂರು, ಕಾಮಗಾರಿಗೆ ಚಾಲನೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಡೋಣಗಾಂವ ಗ್ರಾಮದಲ್ಲಿ ಶ್ರೀ ಸಿಮೆಂಟ್ ಕಂಪನಿಯ ವತಿಯಿಂದ 8 ಲಕ್ಷದ ವೆಚ್ಚದಲ್ಲಿ ಕೈಗೊಂಡ ಶುದ್ಧ ಕುಡಿಯುವ ನೀರಿನ ಘಟಕ ಕಾಮಗಾರಿಗೆ ಶುಕ್ರವಾರ ಚಾಲನೆ ನೀಡಲಾಯಿತು.
ಗ್ರಾಮದ ಮುಖಂಡ ಕಾಶಪ್ಪ ಡೋಣಗಾಂವ ಮಾತನಾಡಿ, ಡೋಣಗಾಂವ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕೆಂಬ ಬಹುದಿನಗಳ ಬೇಡಿಕೆಯಾಗಿತ್ತು. ಇದನ್ನು ಗಮನ ಹರಿಸಿದ ಶ್ರೀ ಸಿಮೆಂಟ್ ಕಂಪೆನಿ ಸ್ಪಂದಿಸಿ ಶುದ್ಧ ನೀರು ಕುಡಿಯುವ ಘಟಕ ಮಂಜೂರು ಮಾಡಿ ಕಾಮಗಾರಿಗೆ ಚಾಲನೆ ನೀಡಿದ್ದು ಹರ್ಷವನ್ನುಂಟು ಮಾಡಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಗುತ್ತಿಗೆದಾರ ನರಸಿಂಹಲು ಗುತ್ತೇದಾರ ದ್ಯಾವನೂರು ಸೇರಿದಂತೆ ಇತರರು ಇದ್ದರು.
