ಎರಡನೇ ನವರಾತ್ರಿ ಉತ್ಸವ, ರಸಮಂಜರಿ ಕಾರ್ಯಕ್ರಮ
ಬಂಜಾರ ಸಮಾಜದವರು ಎಲ್ಲಾ ರಂಗಗಳಲ್ಲಿ ಅಭಿವೃದ್ಧಿ: ಕಂಬಳೇಶ್ವರ ಶೀ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಬಂಜಾರ ಸಮಾಜದವರು ದುಶ್ಚಟಗಳಿಂದ ದೂರ ಇರುವ ಮೂಲಕ ಎಲ್ಲ ರಂಗಗಳಲ್ಲಿ ಅಭಿವೃದ್ಧಿ ಸಾಧಿಸಿದ್ದಾರೆ ಎಂದು ಕಂಬಳೇಶ್ವರ ಶೀ ಸೋಮಶೇಖರ ಶಿವಾಚಾರ್ಯರು ಹೇಳಿದರು
ಪಟ್ಟಣದ ತುಕಾರಾಮ ಖೀರು ನಾಯಕ ರಾಠೋಡ ಸ್ಟೇಷನ್ ತಾಂಡಾದಲ್ಲಿ ಜೈ ಮಾತಾದಿ ನವರಾತ್ರಿ ಉತ್ಸವ ಸಮಿತಿ ವತಿಯಿಂದ 2 ನೇ ವರ್ಷದ ನವರಾತ್ರಿ ಉತ್ಸವ ನಿಮಿತ್ತ ಗುರುವಾರ ರಾತ್ರಿ ಹಮ್ಮಿಕೊಂಡಿದ್ದ ಚನ್ನವೀರ ಆರ್ಕೆಸ್ಟ್ರಾ ಕಲಾ ತಂಡ, ಕಲಬುರಗಿ ಹಾಗೂ ಬಂಜಾರ ನೃತ್ಯ ಕಲಾ ತಂಡ ಇವರಿಂದ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಂಜಾರ ಸಮಾಜದವರು ಮೊದಲು ದುಶ್ಚಟಗಳಿಗೆ ಬಲಿಯಾಗಿ ಹಿಂದುಳಿದಿದ್ದರು ಆದರೆ ಈಗ ಪ್ರಜ್ಞಾವಂತರಾಗಿದ್ದು ಶೈಕ್ಷಣಿಕವಾಗಿ, ರಾಜಕೀಯವಾಗಿ, ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಸಾಧಿಸಿದ್ದಾರೆ ಎಂದು ಹೇಳಿದರು.
ಕೆಪಿಸಿಸಿ ಸದಸ್ಯ ನಾಗರೆಡ್ಡಿ ಪಾಟೀಲ ಕರದಾಳ ಮಾತನಾಡಿ, ಬಂಜಾರ ಸಮಾಜದವರು ಯಾವತ್ತೂ ಶ್ರಮಜೀವಿಗಳು ಹಾಗೂ ಕಾಯಕನಿಷ್ಠರು ಎಂದರು. ಇಚೇಗೆ ಶಿಕ್ಷಣದಲ್ಲಿ ಹಾಗೂ ಕ್ರೀಡೆಯಲ್ಲಿ ಬಂಜಾರ ವಿದ್ಯಾರ್ಥಿಗಳು ಸಾಧನೆ ಮಾಡುವ ಮೂಲಕ ತಾಂಡಾಕ್ಕೆ ಹೆಸರು ತಂದಿದ್ದಾರೆ, ತಾಂಡಾದ ಜನರು ವಿದ್ಯಾವಂತ ಬುದ್ಧಿವಂತರಾಗಿದ್ದು ಜಾಗೃತರಾಗಿದ್ದಾರೆ ಇದರಿಂದ ತಾಂಡಾಗಳು ಅಭಿವೃದ್ಧಿಯಾಗಿವೆ ಎಂದು ಹೇಳಿದರು.
ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಮಾತನಾಡಿ, ಬಂಜಾರ ಸಮಾಜದವರು ಮೊದಲು ಕುಡಿತದಿಂದ ಹೊರಬನ್ನಿ, ಈಚೆಗೆ ಕುಡಿತದ ನಶೆಯಲ್ಲಿ ದ್ವಿಚಕ್ರ ವಾಹನ ಸವಾರರು ಬಲಿಯಾಗುತ್ತಿದ್ದಾರೆ ಹೆಚ್ಚಾಗಿ ಯುವಕರೇ ಸಾವನ್ನಪ್ಪುತ್ತಿದ್ದಾರೆ ಇದರಿಂದ ಇಡೀ ಕುಟುಂಬ ದುಃಖದಲ್ಲಿ ಮುಳುಗುತ್ತದೆ ಹೀಗಾಗಿ ದಯವಿಟ್ಟು ಯುವಕರು ಮದ್ಯೆ ಕುಡಿಯುವುದು ಬಿಟ್ಟು ಬಿಡಿ ಎಂದು ಕಿವಿಮಾತು ಹೇಳಿದರು.
ಪುರಸಭೆ ವಿಪಕ್ಷ ನಾಯಕ ನಾಗರಾಜ ಭಂಕಲಗಿ, ಕಾಂಗ್ರೆಸ್ ಅಲ್ಪಸಂಖ್ಯಾತರ ಅಧ್ಯಕ್ಷ ಮುಕ್ತಾರ್ ಪಟೇಲ್ ಅವರು ಮಾತನಾಡಿದರು. ಬಿಜೆಪಿ ತಾಲೂಕು ಅಧ್ಯಕ್ಷ ರವೀಂದ್ರ ಸಜ್ಜನಶೆಟ್ಟಿ, ನಗರಾಧ್ಯಕ್ಷ ಆನಂದ ಪಾಟೀಲ ನರಿಬೋಳ, ಕಾರ್ಯದರ್ಶಿ ನಾಗರಾಜ್ ಹೂಗಾರ, ತಾಂಡಾದ ನಾಯಕ ತುಕಾರಾಮ ನಾಯಕ, ಸಮಿತಿ ಗೌರವಾಧ್ಯಕ್ಷರಾದ ವಿಠಲ್ ರಾಠೋಡ, ಸುರೇಶ್ ಚವ್ಹಾಣ, ರವಿ ಜಾಧವ, ಲಕ್ಷ್ಮಣ್ ಚವ್ಹಾಣ, ಅಶೋಕ ರಾಠೋಡ, ಕಿಶನ್ ರಾಠೋಡ, ಪೋಮು ಜಾಧವ, ಹೀರು ರಾಠೋಡ, ಛತ್ರು ಮಾಸ್ಟರ್, ಪ್ರೀಯಾಂಕಾ ರಾಮದಾಸ್, ಧನರಾಜ್ ಯಾದವ್, ಉದ್ಯಮಿ ಸುನೀಲ್ ರಾಠೋಡ, ರವಿ ಜೈರಾಮ್ ರಾಠೋಡ, ವಸಂತ ಜಾಧವ, ಪ್ರಕಾಶ್ ಪವಾರ, ಶಿವರಾಮ್ ಚವ್ಹಾಣ, ರಾಜು ಚವ್ಹಾಣ, ಮೋತಿಲಾಲ್ ಚವ್ಹಾಣ, ಧರ್ಮು ಜಾಧವ, ಕುಮಾರ್ ಚವ್ಹಾಣ, ವೆಂಕಟೇಶ್ ಜಾಧವ, ವಿನೋದ್ ಚೋಕ್ಲಾ, ವಿಕಾಸ ಪವಾರ, ರಾಜು ರಾಠೋಡ, ವೆಂಕಟೇಶ್ ಚವ್ಹಾಣ ಸೇರಿದಂತೆ ತಾಂಡಾದ ನಾಯಕರು, ಮಹಿಳೆಯರು ಭಾಗವಹಿಸಿದ್ದರು. ಆಕಾಶ ಚವ್ಹಾಣ ನಿರೂಪಿಸಿದರು, ಅಶ್ವಥ್ ರಾಠೋಡ ವಂದಿಸಿದರು.