Oplus_0

ಕವಿತಾ ಸದಾಶಿವ 592(98.66%) ಅಂಕ ಪಡೆದು ರಾಜ್ಯಕ್ಕೆ 5ನೇ ರ್ಯಾಂಕ್, ಶಿಕ್ಷಣ ಸಂಸ್ಥೆ ವತಿಯಿಂದ ಸನ್ಮಾನ | ಚಿತ್ತಾಪುರ ಎನ್ಇಎಸ್ ಪಿಯು ಕಾಲೇಜಿಗೆ ಉತ್ತಮ ಫಲಿತಾಂಶ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದ ಎನ್ಇಎಸ್ ಪಿಯು ಕಾಲೇಜಿಗೆ 2025-26 ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ. ಒಟ್ಟು 292 ವಿಧ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ ಉನ್ನತ ಶ್ರೇಣಿಯಲ್ಲಿ 41, ಪ್ರಥಮ ಶ್ರೇಣಿಯಲ್ಲಿ 150, ದ್ವಿತೀಯ ಶ್ರೇಣಿಯಲ್ಲಿ 44 ಹಾಗೂ ತೃತೀಯ ಶ್ರೇಣಿಯಲ್ಲಿ 04 ವಿದ್ಯಾರ್ಥಿಗಳೊಂದಿಗೆ ಪ್ರತಿಶತ 82.13 ಫಲಿತಾಂಶ ಬಂದಿದೆ ಎಂದು ಪ್ರಾಚಾರ್ಯ ವೀರಾರೆಡ್ಡಿ ಶೇರಿ ತಿಳಿಸಿದ್ದಾರೆ.

ಕುಮಾರಿ ಕವಿತಾ ಸದಾಶಿವ 592(98.66%) ಅಂಕಗಳನ್ನು ಪಡೆಯುವದರ ಮೂಲಕ ಕಲಾ ವಿಭಾಗಕ್ಕೆ ರಾಜ್ಯಕ್ಕೆ 5ನೇ ರ್ಯಾಂಕ್ ಹಾಗೂ ಜಿಲ್ಲೆಗೆ ಎರಡನೇ ಸ್ಥಾನ ಪಡೆದಿರುತ್ತಾಳೆ.

ವಿಜ್ಞಾನ ವಿಭಾಗದಲ್ಲಿ: 35 ವಿದ್ಯಾರ್ಥಿಗಳಲ್ಲಿ ಉನ್ನತ ಶ್ರೇಣಿಯಲ್ಲಿ 01 ಪ್ರಥಮ ಶ್ರೇಣಿಯಲ್ಲಿ 24 ದ್ವಿತೀಯ ಶ್ರೇಣಿಯಲ್ಲಿ 05 ಒಟ್ಟು 30 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಪ್ರತಿಶತ 85.71 ಫಲಿತಾಂಶ ಬಂದಿದೆ. ವಿದ್ಯಾರ್ಥಿನಿಯಾದ ರೇಖಾ ಶಿವಕುಮಾರ 517 (86.16) ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

ಕಲಾ ವಿಭಾಗದಲ್ಲಿ: 211 ವಿದ್ಯಾರ್ಥಿಗಳಲ್ಲಿ ಉನ್ನತ ಶ್ರೇಣಿಯಲ್ಲಿ 30 ಪ್ರಥಮ ಶ್ರೇಣಿಯಲ್ಲಿ 100 ದ್ವಿತೀಯ ಶ್ರೇಣಿಯಲ್ಲಿ 32 ಒಟ್ಟು 166 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಪ್ರತಿಶತ 78.67 ಫಲಿತಾಂಶ ಬಂದಿದೆ.

ವಿದ್ಯಾರ್ಥಿಗಳಾದ ಕವಿತಾ ಸದಾಶಿವ 592 (98.66%), ಸಾಕ್ಷಿ ಶರಣಬಸ್ಸಪ್ಪ 582 (97%), ದಾವುಲ್ ಸಾಬ್ ಹಾಜಿಮಿಯಾ 572 (95.33%), ಲಕ್ಷ್ಮೀ ಬಸವರಾಜ 566 (94.33%), ನಶ್ರಿನ್ ಜಾವೀದ್ 564 (94%), ನಿಕೇಶ್ ಬಾಬು 563 (93.83%), ಗುರುರಾಜ್ ಗುಂಡಪ್ಪಾ 561 (93.5%), ಮಹಾನಂದಾ  ಭೀಮಣ್ಣಾ 560 (93.33%), ದೇವಕಮ್ಮ ಅಯ್ಯಣ್ಣ 556 (92.66%), ನಾಗಲಿಂಗು ಶಿವಯ್ಯ ಸ್ವಾಮಿ 549 (91.5%), ಲಕ್ಷ್ಮೀ ಹಣಮಂತ 549 (91.5%), ಹಾಜಿಮಿಯಾ ಬಾಸುಮಿಯಾ 546 (91%), ದೇವಮ್ಮ  ಚಂದ್ರಪ್ಪ 544 (90.66%), ಐಶ್ವರ್ಯ ದ್ಯಾವಣ್ಣ 544 (90.66%), ಸಂಕೇತ ಜಡಗಿ ಸಿದ್ದಲಿಂಗ 542(90.3%), ಭಾಗ್ಯಶ್ರೀ ದೇವಿಂದ್ರಪ್ಪ 535 (89.16%), ಫಾತೀಮಾ  ಖಾಸಿಂಸಾಬ್ 535 (89.16%), ಮಂಜುಳಾ ಹೊನಿಕೇರಪ್ಪ 534 (89%), ಗೌತಮಿ ನಾಗರಾಜ 530 (88.33%), ಶರಣಮ್ಮ ಬಸವರಾಜ 526 (87,66%), ದೇವಮ್ಮ ಸೂರಪ್ಪ 524 (87.33%), 521 (86.83), 2 3 2 521 (86.83%), ಸುಜಾತಾ ಮಹಾದೇವಪ್ಪ 517 (86.16%), ಐಶ್ವರ್ಯ ನರಸಪ್ಪ 517 (86.16%), ಮಂಜುಳಾ ಶಿವರಾಯ 515 (85.83%), ಕಾಟೆಮ್ಮ ದೇವಿಂದ್ರಪ್ಪ 513 ( 85.5%), ರಾಜೇಶ್ವರಿ ದೊಡ್ಡಪ್ಪ 513 (85.5%), ದೇವಪ್ಪ  ಬಸವರಾಜ 512(85.3%), ರೇಖಾ ಪ್ರಕಾಶ 511 (85.16%) ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ: 46 ವಿದ್ಯಾರ್ಥಿಗಳಲ್ಲಿ ಉನ್ನತ ಶ್ರೇಣಿಯಲ್ಲಿ 10 ಪ್ರಥಮ ಶ್ರೇಣಿಯಲ್ಲಿ 26 ದ್ವಿತೀಯ ಶ್ರೇಣಿಯಲ್ಲಿ 07 ಒಟ್ಟು 43 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಪ್ರತಿಶತ 95.96 ಫಲಿತಾಂಶ ಬಂದಿದೆ.

ವಿದ್ಯಾರ್ಥಿಗಳಾದ ರಾಘವೇಂದ್ರ ಬಸವರಾಜ 557 (92.83%), ಆಕಾಶ ಅಶೋಕ 545 (90.83%), ನಾಝಿಯಾ ಅಲ್ಲಾವುದ್ದೀನ 540 (90%), ಸೋಪಮಾ  ಗೌಸ್‌ಮಿಯಾ 537 (89.5%), ಶಾಂತಾ ಮಾಲಿಂಗರಾಯ 530 (88.33%), ತಸ್ಲಿಮ್ ಬಾಸುಮಿಯಾ 528 (88%), ತೇಜೆಶ್ರೀ ಮೋಹನ್ 526 (87.6%), ಕೀರ್ತಿ ಕೋನಪ್ಪ 522 ( 87%), ಮಧುಕುಮಾರ ತಿಪ್ಪಣ್ಣ 522 ( 87%), ಲಿಂಗಮ್ಮ ಸುರೇಶ 512 (85.33%) ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

ತೇರ್ಗಡೆಯಾದ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ಪಾಟೀಲ ಹೆಬ್ಬಾಳ, ಕಾರ್ಯದರ್ಶಿ ಡಾ.ಚಂದ್ರಶೇಖರ ಕಾಂತಾ ಹಾಗೂ ಪ್ರಾಚಾರ್ಯ ವೀರಾರೆಡ್ಡಿ ಶೇರಿ, ಉಪನ್ಯಾಸಕರಾದ ಶಾಂಭಟ್ ಜೋಶಿ, ತಿಪ್ಪಣ್ಣ ದೊಡ್ಡಮನಿ, ಬಸ್ಸಮ್ಮ, ಬಸ್ಸಣ್ಣ, ನಾಗಮ್ಮ, ಶ್ವೇತಾ, ಸಂಗೀತಾ, ಶ್ರೀನಿವಾಸ, ಅಂಬಿಕಾ, ಮಹಿಬೂಬ, ಗೌಸ್ ಅಜಿಂ, ಮಲ್ಲಪ್ಪ, ಪ್ರೇಮಾ, ಶಿವಕುಮಾರ ಅವರು ಹರ್ಷ ವ್ಯಕ್ತಪಡಿಸಿ, ಶುಭಾಶಯಗಳನ್ನು ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!