ಕಾಳಗಿ ಬಸವೇಶ್ವರ ಪಿಯು ಕಾಲೇಜಿಗೆ ಉತ್ತಮ ಫಲಿತಾಂಶ
ನಾಗಾವಿ ಎಕ್ಸಪ್ರೆಸ್
ಕಾಳಗಿ: ಪಟ್ಟಣದ ಜೆ.ಎಸ್ ಬಸವೇಶ್ವರ ಪದವಿ ಪೂರ್ವ ಕಾಲೇಜಿಗೆ 2025-26 ನೇ ಸಾಲಿನ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಬಂದಿದೆ ಎಂದು ಪ್ರಾಚಾರ್ಯ ಅಂಬಾದಾಸ್ ಮದನೆ ತಿಳಿಸಿದ್ದಾರೆ.
ಒಟ್ಟು ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು 36, ಈ ಪೈಕಿ ಡಿಸ್ಟಿಂಕ್ಷನ್ ನಲ್ಲಿ 6 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ 12 ವಿದ್ಯಾರ್ಥಿಗಳು, ದ್ವಿತೀಯ ಶ್ರೇಣಿಯಲ್ಲಿ 5 ವಿದ್ಯಾರ್ಥಿಗಳು ಹಾಗೂ ತೃತೀಯ ಶ್ರೇಣಿಯಲ್ಲಿ 3 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ತಿಳಿಸಿದ್ದಾರೆ.
ರಾಧಿಕಾ ಬೀಮರಾಯ 600 ಅಂಕಕ್ಕೆ 567 ಅಂಕ ಪಡೆದು ಶೇ.94.50, ಧಾನೇಶ್ವರಿ ಬಸವರಾಜ 600 ಅಂಕಕ್ಕೆ 558 ಶೇ.93, ಸೌಮ್ಯ ಭಿಮಶಂಕರ್ 600 ಅಂಕಕ್ಕೆ 54190.16, ಸಂಗೀತ ಸಂತೋಷ್ ರೆಡ್ಡಿ 600 ಅಂಕಕ್ಕೆ 539 ಅಂಕ ಪಡೆದು ಶೇ.89.83 ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷರು, ಉಪನ್ಯಾಸರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

