ಒಡೆದ ಮನಸ್ಸುಗಳನ್ನು ಒಂದುಗೂಡಿಸುವ ಹಬ್ಬವೇ ದಸರಾ ಹಬ್ಬ : ಸಿದ್ದಲಿಂಗ ಶ್ರೀ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಸಮಾಜದಲ್ಲಿ ಒಡೆದ ಮನಸ್ಸುಗಳನ್ನು ಒಂದುಗೂಡಿಸುವ ಹಬ್ಬವೇ ದಸರಾ ಹಬ್ಬವಾಗಿದೆ ಎಂದು ರಾವೂರ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು.

ಮತಕ್ಷೇತ್ರದ ರಾವೂರ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಸಂಸ್ಥಾನ ಮಠದಲ್ಲಿ ನಡೆದ ಶ್ರೀಗಳ ಮೌನ ಅನುಸ್ಟಾನ ಮಂಗಲ ಹಾಗೂ ದಸರಾ ಹಬ್ಬದ ವಿಶೇಷ ಆಶೀರ್ವಚನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಹಿಂದೂ ಧರ್ಮದಲ್ಲಿ ಆಚರಿಸುವ ಪ್ರತಿಯೊಂದೂ ಹಬ್ಬಗಳೂ ತನ್ನದೇ ಆದ ಇತಿಹಾಸ, ಹಿನ್ನಲೆಯನ್ನು ಒಳಗೊಂಡಿರುವಂತೆ ವಿಜಯದಶಮಿ ಅಥವಾ ದಸರಾ ಹಬ್ಬವು ಐತಿಹಾಸಿಕ, ಧಾರ್ಮಿಕ ಹಿನ್ನಲೆಯನ್ನು ಹೊಂದಿದೆ ಎಂದರು.

ವಿಶೇಷವಾಗಿ ದಸರಾ ಹಬ್ಬವು ಬನ್ನಿ ಬಂಗಾರವನ್ನು ಕೊಡುವುದರ ಮೂಲಕ ದೂರವಿದ್ದವರನ್ನು ಹತ್ತಿರಕ್ಕೆ ಸೇರಿಸುವ, ದ್ವೇಷಿಸುವರನ್ನು ಪ್ರೀತಿಸುವ ಹಬ್ಬವಾಗಿದೆ. ಹಿರಿಯರು ಮಕ್ಕಳನ್ನು ಇಂತಹ ಹಬ್ಬಗಳಲ್ಲಿ ಗುರು ಹಿರಿಯರಿಗೆ ಗೌರವಿಸುವ, ಪ್ರೀತಿಸುವ ಸಂಸ್ಕಾರಗಳನ್ನು ಹೇಳಿಕೊಡಬೇಕು. ಭಾರತವು ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಸಂಸ್ಕೃತಿಯನ್ನು ಹೊಂದಿದ್ದು. ನಾವು ಅದನ್ನು ಅರ್ಥ ಮಾಡಿಕೊಂಡು ನಮ್ಮ ಮಕ್ಕಳಿಗೂ ತಿಳಿಸುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು. ಉತ್ತಮ ವಿಚಾರಗಳನ್ನು ಹೊಂದುವ ಮೂಲಕ ದುಷ್ಟ ವಿಚಾರಗಳನ್ನು ನಮ್ಮಿಂದ ದೂರ ಮಾಡಬೇಕು ಅದೇ ವಿಜಯದಶಮಿ ಹಬ್ಬದ ಮೂಲ ಆಶಯವೆಂದು ಹೇಳಿದರು. ಗೋಳಾ (ಕೆ ) ಗ್ರಾಮದಲ್ಲಿ ನವರಾತ್ರಿಯ ಅಂಗವಾಗಿ ಹಮ್ಮಿಕೊಂಡಿದ್ದ ಅನುಷ್ಠಾನದಲ್ಲಿ ಸಕಲ ಜೀವರಾಶಿಗಳಿಗೆ ಒಳಿತಾಗಲಿ ದೇವರಲ್ಲಿ ಪ್ರಾರ್ಥನೆ ಮಾಡಿರುವುದಾಗಿ ತಿಳಿಸಿದರು.

ನಂತರ ಸೇರಿದ ಸಾವಿರಾರು ಭಕ್ತರು ಕತೃ ಗದ್ದುಗೆಗೆ ಹಾಗೂ ಪೂಜ್ಯರಿಗೆ ಬನ್ನಿ ವಿನಿಮಯ ಮಾಡಿಕೊಂಡರು. ಈ ಸಂದರ್ಭದಲ್ಲಿ ಮುಖಂಡರಾದ ಡಾ. ಗುಂಡಣ್ಣ ಬಾಳಿ, ಚೆನ್ನಣ್ಣ ಬಾಳಿ, ಗುರುನಾಥ ಗುದಗಲ್, ತಿಪ್ಪಣ್ಣ ವಗ್ಗರ್, ಸಾಹೇಬಗೌಡ ತುಮಕೂರ, ದೇವಿಂದ್ರ ತಳವಾರ, ಅಣ್ಣಾರಾವ ಬಾಳಿ, ಈಶ್ವರ ಬಾಳಿ, ಬಸವರಾಜ ಮಾಕಾ, ಪಾಂಡುರಂಗ ಇಗ್ವೆ, ಸೂರ್ಯಕಾoತ ಕಾಳೆಕಾರ್, ಚಂದ್ರಶೇಖರ ಹಾವೇರಿ, ಸಿದ್ರಾಮಪ್ಪ ದೇಸಾಯಿ, ಚೆನ್ನಪ್ಪ ಆಳ್ಳೋಳ್ಳಿ, ಶರಣು ಜ್ಯೋತಿ, ಭೀಮರಾವ್ ಪಾಟೀಲ್ ಸೇರಿದಂತೆ ಹಲವಾರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕ ಸಿದ್ದಲಿಂಗ ಬಾಳಿ ನಿರೂಪಿಸಿ ವಂದಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!