ವಾಡಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ ಶೇ.100 ಪ್ರತಿಶತ ಫಲಿತಾಂಶ
ನಾಗಾವಿ ಎಕ್ಸಪ್ರೆಸ್
ವಾಡಿ: ಪಟ್ಟಣದ ಎಜುಕೇಷನ್ ಹಬ್ ಪ್ರದೇಶದಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿಗಳು 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ.100 ಪ್ರತಿಶತ ಫಲಿತಾಂಶ ಪಡೆಯುವ ಮೂಲಕ ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದು ಪ್ರಾಚಾರ್ಯ ಕರುಣಾದೇವಿ ಗೋಡಬೋಲೇ ತಿಳಿಸಿದ್ದಾರೆ.
ಪರೀಕ್ಷೆ ಎದುರಿಸಿದ ಶಾಲೆಯ ಎಲ್ಲ 48 ಜನ ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು 9 ಜನ ಡಿಸ್ಟಿಂಕ್ಷನ್, 29 ಜನ ಪ್ರಥಮ ಶ್ರೇಣಿ, 9 ಜನ ದ್ವಿತೀಯ ಶ್ರೇಣಿ, 1 ತೃತೀಯ ಶ್ರೇಣಿ ಪಡೆದುಕೊಂಡು ಎಲ್ಲಾ 48 ಜನ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಅಗ್ರ ಶ್ರೇಣಿಯಲ್ಲಿ ಉತ್ತೀರ್ಣರಾದ ನೀಲಮ್ ಸಂಜುಕುಮಾರ್ (575/625) ಶೇ.92, ಭವ್ಯ ರಾಘವೇಂದ್ರ (573/625) ಶೇ.91.68, ಸ್ವಾತಿ ರಾಜಕುಮಾರ (572/625) ಶೇ.91.52, ರೇಣುಕಾ ಶಿವಶರಣ (555/625) ಶೇ.88.80, ಉಷಾ ಚಂದ್ರಶೆಟ್ಟಿ (548/625) ಶೇ.87.68, ಪ್ರಿಯದರ್ಶಿನಿ ಯಶವಂತ (543/625) ಶೇ.86.88, ಕೋಮಲ್ ಮೋತಿಲಾಲ್ (539/625) ಶೇ.86.24, ರೂಪ ಶರಣಗೌಡ ಮಾಲಿ ಬಿರಾದಾರ (538/625) ಶೇ.86.08, ಮೇಘಾ ಸಿದ್ದರಾಮ (536/625) ಶೇ.85.76 ಅಂಕ ಪಡೆಯುವ ಮೂಲಕ ವಸತಿ ಶಾಲೆಗೆ ಕೀರ್ತಿ ತಂದಿದ್ದಾರೆ
ಶಾಲೆಗೆ ಶೇ.100 ಫಲಿತಾಂಶ ಪ್ರಕಟಗೊಂಡಿದ್ದು, ವಿದ್ಯಾರ್ಥಿಗಳ ಸಾಧನೆಗೆ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕಿ ಪ್ರೀತಿ ದೊಡ್ಡಮನಿ, ಕ್ರೈಸ್ ಕಲಬುರಗಿ ಜಿಲ್ಲಾ ಸಮನ್ವಯಾಧಿಕಾರಿ ನವೀದ ಅಂಜುಮ್ ಹಾಗೂ ವಸತಿ ಶಾಲೆಯ ಪ್ರಾಚಾರ್ಯ ಕರುಣಾದೇವಿ ಗೋಡಬೋಲೇ ಹಾಗೂ ಉಪ ಪ್ರಾಚಾರ್ಯ ಶಿವಕುಮಾರ ಪೂಜಾರಿ ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು ಹರ್ಷ ವ್ಯಕ್ತಪಡಿಸಿ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.
“ಕ್ರೈಸ್ ಕೇಂದ್ರ ಕಚೇರಿ ಹಾಗೂ ಶಿಕ್ಷಣ ಇಲಾಖೆ ನಿರ್ದೇಶನ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳ ಮಾರ್ಗದರ್ಶನದಂತೆ ವಸತಿ ಶಾಲೆಯ ಎಲ್ಲಾ ಸಿಬ್ಬಂದಿಗಳು ವಿದ್ಯಾರ್ಥಿಗಳನ್ನು ದತ್ತು ಪಡೆದು ವಿಶೇಷ ತರಗತಿ ನಡೆಸಿ ಮಾರ್ಗದರ್ಶನ ನೀಡಿ ಅಭ್ಯಾಸ ಮಾಡಿಸಿದ ಪ್ರತಿ ಫಲವಾಗಿ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯುವಲ್ಲಿ ಸಹಕಾರಿಯಾಯಿತು”.-ಕರುಣಾದೇವಿ ಗೋಡಬೋಲೇ, ಪ್ರಾಚಾರ್ಯರು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ವಾಡಿ ಟೌನ್.

