ಶ್ರೀ ಮಲ್ಲಾರಾಧ್ಯ ಕೋರಿಸಿದ್ದೇಶ್ವರ ಜಾತ್ರೆ, ತನಾರತಿ ಉತ್ಸವ ಇಂದು, ನಾಳೆ ಭವ್ಯರಥೋತ್ಸವ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ಜಿಲ್ಲೆಯ ಯಡ್ರಾಮಿ ತಾಲೂಕಿನ ಶ್ರೀ ಕ್ಷೇತ್ರ ಕಾಖಂಡಕಿ ಸದ್ಗುರು ಶ್ರೀ ಮಲ್ಲಾರಾಧ್ಯ ಕೋರಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಇದೇ 16 ಮತ್ತು 17ರಂದು ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಡಾ. ಸಿದ್ದ ತೋಟೆಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರ ದಿವ್ಯ ಸನ್ನಿಧಿಯಲ್ಲಿ ಸಡಗರ ಸಂಭ್ರಮದ ಮಧ್ಯೆ ನಡೆಯಲಿದೆ.
ಪವಾಡ ಪುರುಷ, ಲೀಲಾಮೂರ್ತಿ ಮೂರ್ತಿಗಳಾದ ಸದ್ಗುರು ಮಲ್ಲಾರಾಧ್ಯ ಮಹಾತ್ಮಾ ಕೋರಿ ಸಿದ್ದೇಶ್ವರ ಜಾತ್ರಾಮಹೋತ್ಸವವು ಪ್ರತಿ ವರ್ಷದ ಪದ್ಧತಿಯಂತೆ ಸಹಸ್ರಾರ್ ಭಕ್ತರ ಮಧ್ಯೆ ಸಡಗರ ಸಂಭ್ರಮದಿಂದ ಅತ್ಯಂತ ವೈಭವದಿಂದ ನಾಲವಾರ ಕಾಖಂಡಕಿ ಉಭಯ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಡಾ.ಸಿದ್ಧತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ಪಾವನ ಸಾನಿಧ್ಯದಲ್ಲಿ ದಿನಾಂಕ 16 ರಂದು ಬಾದಾಮಿ ಅಮಾವಾಸ್ಯೆ ಯಂದು ರಾತ್ರಿ 8 ಗಂಟೆಗೆ ಜಾತ್ರಾ ಮಹೋತ್ಸವ ಉದ್ಘಾಟನೆ ಮತ್ತು ಮಾಸಿಕ ಶಿವಾನುಭವ ಚಿಂತನ ನಡೆಯಲಿದೆ, ಭಕ್ತರಿಂದ ಪೂಜ್ಯಶ್ರೀಗಳ ನಾಣ್ಯಗಳಿಂದ ತುಲಾಭಾರ ಸೇವೆ ನಡೆಯುವುದು, ಮಧ್ಯರಾತ್ರಿ ಸದ್ಭಕ್ತರ ಹರಕೆಯ ತನಾರತಿ ಉತ್ಸವ ನಾಡಿನಲ್ಲಿಯೇ ವಿಶೇಷವೆನ್ನಬಹುದಾದ ಭಕ್ತಿ ಪರಂಪರೆಯ ಶ್ರೇಷ್ಠ ಸೇವೆ ಭಕ್ತರಿಂದ ಜರುಗಲಿದೆ. 17ರಂದು ಸಂಜೆ ಸಂಜೆ 6 ಗಂಟೆಗೆ ಶ್ರೀ ಸದ್ಗುರು ಮಲ್ಲಾರಾಧ್ಯ ಕೋರಿ ಸಿದ್ದೇಶ್ವರ ಭವ್ಯ ರಥೋತ್ಸವ ಕಾರ್ಯಕ್ರಮ ನಡೆಯಲಿದೆ.
ಈ ಸಂದರ್ಭದಲ್ಲಿ ರಥೋತ್ಸವಕ್ಕೂ ಮುಂಚೆ ವಿಶೇಷ ಮದ್ದು ಸುಡುವ ಕಾರ್ಯಕ್ರಮ ನೆರವಿರುವುದು, ರಥೋತ್ಸವದ ನಂತರ ಪೀಠಾಧಿಪತಿಗಳಾದ ಪೂಜ್ಯ ಶ್ರೀ ಡಾ.ಸಿದ್ಧತೋಟೇಂದ್ರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ಜಾತ್ರಾ ಧರ್ಮಸಭೆ ಹಾಗೂ ತುಲಾಭಾರ ಸೇವೆ. ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಪವಾಡ ಪುರುಷರಾದ ಸದ್ಗುರು ಶ್ರೀ ಮಲ್ಲಾರಾಧ್ಯರು ಮತ್ತು ಕೋರಿಸಿದ್ಧೇಶ್ವರ ಶಿವಯೋಗಿಗಳು ಲೋಕಸಂಚಾರಗೈಯುತ್ತಾ ನಾಡಿನ ವಿವಿಧ ಭಾಗಗಳಲ್ಲಿ ಸಂಚರಿಸಿ, ಹಲವಾರು ಪವಾಡಗಳ ಮೂಲಕ ಜನಮನವನ್ನು ಉದ್ಧರಿಸಿದ ಮಹಾತ್ಮರಾಗಿದ್ದು, ಶ್ರೀ ಕ್ಷೇತ್ರ ಕಾಖಂಡಕಿಯಲ್ಲಿ ಹಲವು ಪವಾಡಗಳನ್ನು ಗೈದು ಗ್ರಾಮಸ್ಥರಿಗೆ ಸಂಕಷ್ಟದಿಂದ ಪಾರು ಮಾಡಿದ್ದರು.
ಅವರು ಹಲವು ದಶಕಗಳ ಕಾಲ ತಂಗಿ, ತಪಗೈದ ಲಿಂಗೈಕ್ಯವಾದ ಶ್ರೀ ಕ್ಷೇತ್ರ ಕಾಖಂಡಕಿ ಗ್ರಾಮದಲ್ಲಿ ಪ್ರತಿವರ್ಷ ಅದ್ಧೂರಿಯಾಗಿ ಜಾತ್ರಾ ಮಹೋತ್ಸವ ಅಂಗವಾಗಿ ಕಳೆದು 11 ದಿನಗಳಿಂದ ಪಂ ಶ್ರೀ ಅಮರಯ್ಯ ಶಾಸ್ತ್ರಿಗಳು ಎರಡೋಣಿ ಅವರಿಂದ ಶ್ರೀಕ್ಷೇತ್ರ ರಟಕಲ್ ರೇವಣಸಿದ್ದೇಶ್ವರ ಪುರಾಣ ಪ್ರವಚನ ಸಂಭ್ರಮದಿಂದ ನಡೆದುಕೊಂಡು ಬರುತ್ತಿದೆ ಶ್ರೀ ಕಲ್ಲಯ್ಯ ಸ್ವಾಮಿ ಪಡದಲ್ಲಿ ಮತ್ತು ರಾಜಶೇಖರ್ ಗೆಜ್ಜೆ ಸಂಗೀತ ಸೇವೆ ಜಾತ್ರಾಮಹೋತ್ಸವ ಕಾರ್ಯಕ್ರಮದಲ್ಲಿ ಹರ-ಗುರು- ಚರಮೂರ್ತಿಗಳು, ರಾಜಕೀಯ ಧುರೀಣರು,ಕವಿ-ಕಲಾವಿದರು ಭಾಗವಹಿಸಲಿದ್ದಾರೆ.
ಜಾತ್ರಾ ಮಹೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಮಠದ ವಕ್ತಾರ ಮಹಾದೇವ ಗಂವ್ಹಾರ ತಿಳಿಸಿದ್ದಾರೆ.
