ಸೂಲಹಳ್ಳಿ ಗ್ರಾಮದಲ್ಲಿ ಹಜರತ್ ಮಹೆಬೂಬ್ ಸುಭಾನಿ ದರ್ಗಾದಲ್ಲಿ ಹಿಂದು-ಮುಸ್ಲಿಂ ಬಾಂಧವರಿಂದ ವಿಶೇಷ ಪೂಜೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಸೂಲಹಳ್ಳಿ ಗ್ರಾಮದಲ್ಲಿ ಹಜರತ್ ಮಹೆಬೂಬ್ ಸುಭಾನಿ ದರ್ಗಾದಲ್ಲಿ ಮಂಗಳವಾರ ಹಿಂದುಗಳು ಹಾಗೂ ಮುಸ್ಲಿಂ ಬಾಂಧವರು ಸೇರಿಕೊಂಡು ಗಂಧ ಲೇಪನ ಮಾಡುವ ಮೂಲಕ ವಿಶೇಷ ಪೂಜೆ ಸಲ್ಲಿಸಿದರು.
ಕಮರವಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬರುವ ಸೂಲಹಳ್ಳಿ ಗ್ರಾಮದಲ್ಲಿ ಹಿಂದೂ ಮುಸ್ಲಿಂ ಬಾಂಧವರು ಸೇರಿಕೊಂಡು ಸೂಲಹಳ್ಳಿ ಗ್ರಾಮದಲ್ಲಿ ಪುರಾತನ ಕಾಲದಿಂದ ಹಜರತ್ ಮಹಬೂಬ್ ಸುಭಾನಿ ದರ್ಗಾದಲ್ಲಿ ಹಲವು ವರ್ಷಗಳಿಂದ ದೀಪಾಲಂಕಾರ ಹಾಗೂ ಗಂಧೋತ್ಸವ ನಡೆಯುತ್ತಿದೆ. ಎಲ್ಲ ಭಕ್ತಾದಿಗಳಿಗೆ ಪ್ರಸಾದ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಊರಿನ ಹಿರಿಯ ಮುಖಂಡರಾದ ಬಸವರಾಜ್ ಗೌಡ ಮಾಲಿಪಾಟೀಲ್, ಶ್ರೀಶೈಲ್ ಗೌಡ ಪೊಲೀಸ್ ಪಾಟೀಲ್, ಇಸ್ಮಾಯಿಲ್ ಸಾಬ್ ಮುಲ್ಲಾ, ಭೀಮರಾಯ ಸುಬೇದಾರ್, ರವಿ ಗುತ್ತೇದಾರ, ಶಿವಯ್ಯ ಗುತ್ತೇದಾರ, ರಮೇಶ್ ಕದ್ದರಗಿ, ಬಸವರಾಜ ಹಡಪದ, ರಾಜು ಗುತ್ತೇದಾರ, ಭೀಮರಾಯ ಕುಂಬಾರ, ಬಸವರಾಜ್ ತಳವಾರ, ಭೀಮರಾಯ ಕುಂಬಾರ, ಸುರೇಶ ಗುತ್ತೇದಾರ, ಭೀಮು ಗುತ್ತೇದಾರ, ನರಸಯ್ಯ ಗುತ್ತೇದಾರ, ದೇಂದ್ರಪ್ಪ ಪಡಿಶೆಟ್ಟಿ, ಶಿವಕುಮಾರ, ಅರವಿಂದ ಗುತ್ತೇದಾರ, ವಿರೇಶ್ ಗುತ್ತೇದಾರ, ಮರಲಿಂಗ ಗುತ್ತೇದಾರ, ಹನುಮಂತ ಮಡಿವಾಳ, ಲಕ್ಷ್ಮಣ ಕುಂಬಾರ, ಜಾಫರ್ ಮುಲ್ಲಾ ಸೇರಿದಂತೆ ಅನೇಕರು ಇದ್ದರು.