Oplus_0

ಜನಗಣತಿಯ ಜಾತಿ ಕಲಂನಲ್ಲಿ ಆದಿ ಬಣಜಿಗ ಬರೆಸಲು:  ಚೆನ್ನವೀರ ಕಣಗಿ ಮನವಿ

ನಾಗಾವಿ ಎಕ್ಸಪ್ರೆಸ್ 

ಚಿತ್ತಾಪುರ: ಮುಂಬರುವ ಜನಗಣತಿಯ ಜಾತಿ ಕಲಂ 8 ರಲ್ಲಿ ಆದಿ ಬಣಜಿಗ ಮಾತ್ರ ಬರೆಸಬೇಕು ಎಂದು ಆದಿ ಬಣಜಿಗ ಸಮಾಜದ ಯುವ ಮುಖಂಡ ಚೆನ್ನವೀರ ಕಣಗಿ ದಿಗ್ಗಾಂವ ಮನವಿ ಮಾಡಿದ್ದಾರೆ.

ಲಿಂಗಾಯತ ಆದಿ ಬಣಜಿಗ ಎಂದು ಬರೆಯಿಸದೆ ಕೇವಲ ಆದಿ ಬಣಜಿಗ ಎಂದು ಬರೆಯಿಸಬೇಕು ಎಂದು ತಿಳಿಸಿದ್ದಾರೆ. ಇದರಿಂದ ಕರ್ನಾಟಕದಲ್ಲಿ ಆದಿ ಬಣಜಿಗ ಜನಸಂಖ್ಯೆ ಎಷ್ಟಿದೆ ಎಂದು ನಿರ್ದಿಷ್ಟ ಮತ್ತು ಖಚಿತ ಮಾಹಿತಿ ದೊರೆಯುತ್ತದೆ. ಆದ್ದರಿಂದ ಸಮಾಜ ಬಾಂಧವರು ಆದಿ ಬಣಜಿಗ ಎಂದು ಬರೆಯಿಸಬೇಕು ಎಂದು ಮನವಿ ಮಾಡಿದ್ದಾರೆ.

ಈಗಾಗಲೇ ಸಮಾಜದ ಮುಖಂಡರು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಮಧುಸೂದನ ನಾಯ್ಕ ಅವರಿಗೆ ಮನವಿ  ಸಲ್ಲಿಸಿದ್ದಾರೆ ಎಂದು ತಿಳಿಸಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!