ಆದಿಬಣಜಿಗ ಸಮಾಜವನ್ನು ಪ್ರವರ್ಗ 2ಎ ಗೆ ಸೇರಿಸಲು ಒತ್ತಾಯಿಸಿ ದಿ.19 ರಂದು ಬೆಳಗಾವಿ ಸುವರ್ಣ ಸೌಧ ಎದುರಿಗೆ ಬೃಹತ್ ಪ್ರತಿಭಟನೆ: ಚೆನ್ನವೀರ ಕಣ್ಣಿಗಿ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಆದಿಬಣಜಿಗ ಸಮಾಜವನ್ನು ಜಾತಿ ಗೆಜೆಟ್ ನಲ್ಲಿ ಹಾಗೂ ಪ್ರವರ್ಗ 2ಎ ಗ ಸೇರಿಸಲು ಒತ್ತಾಯಿಸಿ ಅಖಿಲ ಕರ್ನಾಟಕ ಆದಿಬಣಜಿಗ ಹೋರಾಟ ಸಮಿತಿಯ ವತಿಯಿಂದ ಬೆಳಗಾವಿ ಸುವರ್ಣ ಸೌಧ ಹತ್ತಿರದ ಟೆಂಟ್ ನಂಬರ್-9ಎ ನಲ್ಲಿ ಇದೇ ಡಿಸೆಂಬರ್ 19 ರಂದು ಬೆಳಿಗ್ಗೆ 9 ಘಂಟೆಗೆ ಬೃಹತ್ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಆದಿ ಬಣಜಿಗ ಸಮಾಜದ ಯುವ ಮುಖಂಡ ಚೆನ್ನವೀರ ಬಿ. ಕಣ್ಣಿಗಿ ದಿಗ್ಗಾoವ ತಿಳಿಸಿದ್ದಾರೆ.
ಸಮಾಜದ ಏಳಿಗೆಗಾಗಿ ನವ ಯುವಕರ ಮುಂದಿನ ಭಾವಿ ಭವಿಷ್ಯದ ಭದ್ರ ಬುನಾದಿಗಾಗಿ ರಾಜ್ಯದ ಎಲ್ಲ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಆದಿಬಣಜಿಗ ಸಮಾಜದ ಬಂಧುಗಳು ಆಗಮಿಸಿ ಹೋರಾಟವನ್ನು ಯಶಸ್ವಿಗೋಳಿಸಬೇಕಾಗಿ ಸಮಸ್ತ ಸಮಾಜದ ಬಂಧುಗಳಲ್ಲಿ ವಿನಂತಿ ಮಾಡಿದ್ದಾರೆ.
ಯಾರು ಅನ್ಯತಾ ಭಾವಿಸಭಾರದು ನನಗೆ ಪೋನ್ ಮಾಡಿಲ್ಲ ನನಗೆ ಯಾರು ಹೇಳಿಲ್ಲ, ನನಗೆ ಯಾರು ಕರೆದಿಲ್ಲ ಅಂತ ಇದು ನಮ್ಮ ಸಮಾಜದ ಹೋರಾಟವಾಗಿದೆ ಅದಕ್ಕೆ ಅಭಿಮಾನದಿಂದ ಭಾಗವಹಿಸಬೇಕು ಎಂದು ಕೋರಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9606350990 ಸಂಪರ್ಕಿಸಬೇಕು ಎಂದು ತಿಳಿಸಿದ್ದಾರೆ.