ಅಳ್ಳೋಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಮೌನೇಶ್ ಉಪಾಧ್ಯಕ್ಷರಾಗಿ ಹೀರಾಬಾಯಿ ಅವಿರೋಧ ಆಯ್ಕೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಅಳ್ಳೋಳ್ಳಿ ಗ್ರಾಮ ಪಂಚಾಯತಿ ಕಾಂಗ್ರೆಸ್ ಬೆಂಬಲಿತ ನೂತನ ಅಧ್ಯಕ್ಷರಾಗಿ ಮೌನೇಶ್ ಹೊಸಮನಿ ಮತ್ತು ಉಪಾಧ್ಯಕ್ಷರಾಗಿ ಹೀರಾಬಾಯಿ ರವಿಕುಮಾರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಾಜಿ ತಾಲೂಕ ಪಂಚಾಯತಿ ಮಾಜಿ ಅಧ್ಯಕ್ಷರಾದ ಶಾಂತಣ್ಣ ಚಾಳೀಕರ್, ಸಿದ್ದಮ್ಮ ಕಾಶನೂರು, ಮುಖಂಡರಾದ ವೀರಾರೆಡ್ಡಿ ಮಶೇನಿ, ದೇವೇಂದ್ರಪ್ಪ ಹಾದಿಮನಿ, ಮಹಾಂತಗೌಡ ಮಾಲಿ ಪಾಟೀಲ್, ಶರಣಪ್ಪ ನಾಶಿ, ರಾಮಲಿಂಗ ಕೊನೆಗೇರಿ, ಹಣಮಂತ ಸಂಕನೂರ, ಶ್ರೀಶೈಲ್ ಗುತ್ತೇದಾರ, ಶರಣು ಡೋಣಗಾಂವ, ಬಸ್ಸುಗೌಡ ಮಾಲಿ ಪಾಟೀಲ, ಮಂಜುನಾಥ ಪೊಲೀಸ್ ಪಾಟೀಲ, ಮರೇಪ್ಪ ದಂಡಗುಂಡ, ಯಂಕಪ್ಪ ಕಟ್ಟಿಮನಿ, ವಿಶ್ವನಾಥ ಗುತ್ತೇದಾರ, ಪಿಡಿಒ ದೇವಿಂದ್ರಪ್ಪ ಭಾಲ್ಕೆ ಸೇರಿದಂತೆ ಸರ್ವ ಸದಸ್ಯರು, ಮತ್ತು ಅಳ್ಳೋಳ್ಳಿ, ಸಂಕನೂರ, ದಂಡಗುಂಡ ಗ್ರಾಮದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ ಫಲಿತಾಂಶ ಹೊರಬೀಳುತ್ತಿದ್ದಂತೆ ಅವರ ಬೆಂಬಲಿಗರು ಪಟಾಕಿ ಸಿಡಿಸಿ ಗುಲಾಲ್ ಎರಚಿ ವಿಜಯೋತ್ಸವ ಆಚರಿಸಿದರು.