ಅಲ್ಲೂರು.ಬಿ ಶೌಚಾಲಯಕ್ಕಾಗಿ ಮಹಿಳೆಯರಿಂದ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಅಲ್ಲೂರ (ಬಿ) ಗ್ರಾಮದಲ್ಲಿರುವ ಸಾರ್ವಜನಿಕ ಶೌಚಾಲಯ ಸ್ಥಳದಲ್ಲಿ ಕಟ್ಟಡ ನಿರ್ಮಾಣ ಮಾಡಿದ್ದು ಇದನ್ನು ಬೇರೆಯವರು ಅನಧಿಕೃತವಾಗಿ ಕಬ್ಜೆ ಮಾಡಿದ್ದು ಕಬ್ಜೆ ಮಾಡಿದನ್ನು ಬಿಡಿಸಿ ಸದರಿ ಶೌಚಾಲಯ ಸ್ಥಳವನ್ನು ಸ್ವಚ್ಛಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿ ಮಹಿಳೆಯರು ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಅಲ್ಲೂರ (ಬಿ) ಗ್ರಾಮದಲ್ಲಿ ಸಾರ್ವಜನಿಕ ಮಹಿಳಾ ಶೌಚಾಲಯ ನಿರ್ಮಾಣ ಮಾಡಿರುತ್ತಾರೆ. ಆದರೆ ಸದರಿ ಶೌಚಾಲಯ ಜಾಗದವನ್ನು ಬೇರೆಯವರು ಅನಧಿಕೃತವಾಗಿ ಕಬ್ಜೆ ಮಾಡಿ ಕಟ್ಟಡ ನಿರ್ಮಾಣ ಮಾಡಿರುತ್ತಾರೆ. ಈ ಶೌಚಾಲಯ ಸಾರ್ವಜನಿಕರಿಗೆ ಉಪಯೋಗವಾಗಲು ನಿರ್ಮಾಣ ಮಾಡಿದ್ದು ಅದನ್ನು ಬಿಟ್ಟು ಬೇರೆಯವರು ಅನಧಿಕೃತವಾಗಿ ನಿರ್ಮಾಣ ಮಾಡಿದ್ದು ಅದನ್ನು ಬಿಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಗ್ರಾಪಂ ಅಧ್ಯಕ್ಷರಿಗೆ ಮತ್ತು ಪಿ.ಡಿ.ಓ ಅವರಿಗೆ ಈಗಾಗಲೇ ಮನವಿ ಪತ್ರವನ್ನು ಸಲ್ಲಿಸಲಾಗಿದೆ. ಆದರೆ ಇನ್ನುವರೆಗೆ ಪಿ.ಡಿ.ಓ ಇವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕ ಶೌಚಾಲಯವನ್ನು ಅನಧಿಕೃತವಾಗಿ ಕಬ್ಜೆ ಮಾಡಿರುವುದನ್ನು ಬಿಡಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಒಂದು ವೇಳೆ ಇದರ ಕುರಿತು ಕ್ರಮ ಕೈಗೊಳ್ಳದೆ ಇದ್ದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಗ್ರಾ.ಪಂ.ಗೆ ಬೀಗಮುದ್ರೆ ಹಾಕಿ ಪ್ರತಿಭಟನೆ ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.
ಶರಣಮ್ಮ ಮಲ್ಲಪ್ಪ, ಮುನಿಯಮ್ಮ ಶರಣಪ್ಪ, ಮಲ್ಲಮ್ಮ ಮಲ್ಲಿನಾಥ, ಕಮಲಮ್ಮ ಬಸಪ್ಪ, ಬಸಣ್ಣ ಮಲ್ಲೇಶಪ್ಪ ಬಿಜಾಪೂರಕರ್, ಲಕ್ಷ್ಮೀ ಮಲ್ಲಪ್ಪ, ಕೃಷ್ಣಮ್ಮ ಮಹಾದೇವ ಸೇರಿದಂತೆ ಅನೇಕರು ಭಾಗವಹಿಸಿದ್ದರು.