ಅಲ್ಲೂರು.ಬಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಶರಣಪ್ಪ ನಾಶಿ, ಉಪಾಧ್ಯಕ್ಷರಾಗಿ ಚಂದ್ರಶೇಖರ ವಾರದ್ ಅವಿರೋಧ ಆಯ್ಕೆ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಅಲ್ಲೂರು.ಬಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ 5 ವರ್ಷ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶರಣಪ್ಪ ನಾಶಿ ಹಾಗೂ ಉಪಾಧ್ಯಕ್ಷರಾಗಿ ಚಂದ್ರಶೇಖರ ವಾರದ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವಿಜಯಕುಮಾರ್ ತಿಳಿಸಿದ್ದಾರೆ.
ಒಟ್ಟು 12 ಸದಸ್ಯ ಬಲ ಹೊಂದಿರುವ ಸಂಘದಲ್ಲಿ ಪರಿಶಿಷ್ಟ ಪಂಗಡದ ಸದಸ್ಯ ಸ್ಥಾನ ಖಾಲಿ ಉಳಿದಿದೆ. ಗ್ರಾಮದ ದುರ್ಗಾದೇವಿ ದೇವಸ್ಥಾನದ ಕೊಠಡಿಯೊಂದರಲ್ಲಿ ನಡೆದ ಚುನಾವಣೆ ಸಭೆಗೆ 11 ಸದಸ್ಯರು ಹಾಜರಾಗಿದ್ದರು. ಅಧ್ಯಕ್ಷ ಸ್ಥಾನಕ್ಕೆ ಶರಣಪ್ಪ ನಾಶಿ, ಉಪಾಧ್ಯಕ್ಷ ಸ್ಥಾನಕ್ಕೆ ಚಂದ್ರಶೇಖರ ವಾರದ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಪ್ರತಿಸ್ಪರ್ಧಿ ಅಭ್ಯರ್ಥಿಯಿಲ್ಲದ್ದರಿಂದ ಚುನಾವಣಾಧಿಕಾರಿ ವಿಜಯಕುಮಾರ ಅವರು ಅವಿರೋಧ ಅಯ್ಕೆ ಎಂದು ಘೋಷಿಸಿದರು.
ಸಂಘದ ನಿರ್ದೇಶಕರಾದ ಸಣ್ಣ ರಾಯಪ್ಪ ಹಣಮಂತ ಜೀರ, ಮಲ್ಲಮ್ಮ ಬಸವರಾಜ ವಾಡ, ಮಹಾದೇವಪ್ಪ ದ್ಯಾವಪ್ಪ ದನಕಾಯ, ಶಂಕರ ಬೆಳ್ಳಪ್ಪ ವಿಜಾಪುರ, ಶ್ರೀಮಂತ ಧೂಳಪ್ಪ, ಸಿದ್ದನಗೌಡ ದೇವಿಂದ್ರರೆಡ್ಡಿ, ಜಗದೇವಿ ನಿಂಗಪ್ಪ ಗಮಗ, ಅಯ್ಯಮ್ಮ ದುರ್ಗಪ್ಪ, ರಹೆಮಾನಸಾಬ್, ನದಿಮ್ ಸಾಬ್ ಯರಗೋಳ ಅವರನ್ನು ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಅವರು ಸನ್ಮಾನಿಸಿದರು.
ಗ್ರಾಮದ ಮುಖಂಡ ನಾಗುಗೌಡ, ಗ್ರಾ.ಪಂ. ಅಧ್ಯಕ್ಷ ರಾಮಲಿಂಗ ಕೊನಿಗೇರಿ, ಮುಖಂಡರಾದ ರವಿ ಸಾಹು, ವೆಂಕಟೇಶ ಕುಲಕರ್ಣಿ, ಬಸ್ಸುಗೌಡ ಅಲ್ಲೂರ್(ಕೆ), ಗುರುರಾಜ ಜೋಶಿ, ಮನೋಹರ ಪಂಚಾಳ, ವಿರು-ಪಾಕ್ಷರೆಡ್ಡಿ, ಮಹಾದೇವ ಕೊನಿಗೇರಿ, ವೆಂಕಟೇಶ, ದುರ್ಜಿನ್ ನಾಟಿಕಾರ, ದೊಡ್ಡಸಾಬಣ್ಣಾ, ಭೀಮರಾಯ, ಹಣಮಂತ ಕಟ್ಟಿ, ಮಲ್ಲಪ್ಪ ಬೂದಿ, ಮೋನಪ್ಪ, ದೇವು ಕೊರಬಾ, ನಾಗರೆಡ್ಡಿ ಕಟ್ಟಿ, ನಂದಪ್ಪ, ಹಣಮಂತ ಅಮನಗಡ್ಡಿ ಹಾಜರಿದ್ದರು.