Oplus_0

ಅಂಬಿಗರ ಚೌಡಯ್ಯ ಜಯಂತಿ ಯಶಸ್ವಿಗೆ ಸಕಲ ಸಿದ್ಧತೆ, ಸಮಾರಂಭದಲ್ಲಿ 2 ಸಾವಿರ ಜನರು ಭಾಗಿ: ಶಿವುಕುಮಾರ ಯಾಗಾಪೂರ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಾಲೂಕು ಆಡಳಿತ ವತಿಯಿಂದ ಜನವರಿ 21 ರಂದು ನಡೆಯಲಿರುವ ನಿಜಶರಣ ಅಂಬಿಗರ ಚೌಡಯ್ಯ ನವರ ಜಯಂತಿ ಸಮಾರಂಭದ ಯಶಸ್ವಿಗೆ ಈಗಾಗಲೇ ಸಿದ್ಧತೆ ಮಾಡಿಕೊಂಡಿದ್ದು ಕೋಲಿ ಸಮಾಜದ 2 ಸಾವಿರಕ್ಕೂ ಅಧಿಕ ಜನರು ಹಾಗೂ ಮಹಿಳೆಯರು ಭಾಗವಹಿಸಲಿದ್ದಾರೆ ಎಂದು ತಾಲೂಕು ಅಧ್ಯಕ್ಷ ಶಿವುಕುಮಾರ ಯಾಗಾಪೂರ ಹೇಳಿದರು.

ಪಟ್ಟಣದ ಅಂಬಿಗರ ಚೌಡಯ್ಯ ವೃತ್ತದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂಬಿಗರ ಚೌಡಯ್ಯ ನವರ ಭಾವಚಿತ್ರದ ಭವ್ಯ ಮೆರವಣಿಗೆಯಲ್ಲಿ ಡೊಳ್ಳು ಹಲಗೆ ಬಾಜಾ ಭಜಂತ್ರಿ ಹಾಗೂ ಮಹಿಳೆಯರ ಕುಂಬ ಮೇಳ ಸಮೇತ ಅದ್ದೂರಿಯಾಗಿ ಮಾಡಲು ನಿರ್ಧರಿಸಲಾಗಿದೆ ಹೀಗಾಗಿ ಸಮಾಜ ಬಾಂಧವರು ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

ಪಟ್ಟಣದ ಲಾಡ್ಜಿಂಗ್ ಕ್ರಾಸ್ ಹತ್ತಿರದ ಅಂಬಿಗರ ಚೌಡಯ್ಯ ವೃತ್ತಕ್ಕೆ ಸುಣ್ಣ ಬಣ್ಣ ಮಾಡಿದ್ದು ಕೂಡುವ ಆಸನಗಳ ವ್ಯವಸ್ಥೆ ಹಾಗೂ ವಿದ್ಯುತ್ ಟಿಸಿ ಸ್ಥಳಾಂತರ ಮಾಡುವ ಮೂಲಕ ಅನೇಕ ಅಭಿವೃದ್ಧಿ ಕೆಲಸಗಳು ಕೈಗೊಳ್ಳಲಾಗಿದೆ ಎಂದರು.

ಜಯಂತಿ ಸಮಿತಿ ಅಧ್ಯಕ್ಷ ಭೀಮಣ್ಣ ಸೀಬಾ ಮಾತನಾಡಿ,  ಶಿವುಕುಮಾರ ಯಾಗಾಪೂರ ಅಧ್ಯಕ್ಷತೆಯಲ್ಲಿ ಅಂಬಿಗರ ಚೌಡಯ್ಯ ಜಯಂತಿ ಬಹಳ ಅದ್ದೂರಿಯಾಗಿ ಮಾಡಲು ಈಗಾಗಲೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಮುಖಂಡ ಸಾಬಣ್ಣ ಭರಾಟೆ ಮಾತನಾಡಿ, ಶಿವುಕುಮಾರ ಯಾಗಾಪೂರ ತಾಲೂಕು ಅಧ್ಯಕ್ಷರಾದ ನಂತರ ಕೋಲಿ ಸಮಾಜದಲ್ಲಿ ಕ್ರಾಂತಿಕಾರಿ ಬದಲಾವಣೆ ಕಾಣುತ್ತಿದೆ ಯುವಕರು ತುಂಬಾ ಉತ್ಸಾಹದಲ್ಲಿ ಇದ್ದಾರೆ ವಿಶೇಷವಾಗಿ ಈ ಬಾರಿ ಮೆರವಣಿಗೆ ಬಹು ವಿಜೃಂಭಣೆಯಿಂದ ನಡೆಯಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ತಮ್ಮಣ್ಣ ಡಿಗ್ಗಿ, ದಶರಥ ದೊಡ್ಡಮನಿ, ಮಹಾದೇವ ಕೊನಿಗೇರಿ, ಮಹಾದೇವ ಮುಗುಟಿ, ಶರಣು ಅರಣಕಲ್, ಮಹೇಶ್ ಸಾತನೂರು, ಸೂರ್ಯಕಾಂತ ಕೊಂಕನಳ್ಳಿ, ಶರಣು ಹಾಸಬಾ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!