ಅಣಿಕೇರಾ ಮಹಿಳೆಯರ ಮೀನುಗಾರಿಕೆ ಸಹಕಾರ ಸಂಘದ ವಿಚಾರಣೆ ನಾಳೆ: ಸಿಡಿಒ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮಹಿಳೆಯರ ಮೀನುಗಾರಿಕೆ ಸಹಕಾರ ಸಂಘ ನಿ.ಅಣಿಕೇರಾ ಕೇಂದ್ರ ಸ್ಥಾನ ವಾಡಿ ಸಂಘದ ವಿರುದ್ಧ ದೂರು ಬಂದ ಹಿನ್ನಲೆಯಲ್ಲಿ ದೂರು ಅರ್ಜಿಯ ವಿಚಾರಣೆ ನಾಳೆ ನಡೆಯಲಿದೆ ಎಂದು ಚಿತ್ತಾಪುರ ಸಹಕಾರ ಅಭಿವೃದ್ಧಿ ಅಧಿಕಾರಿ ತಿಳಿಸಿದ್ದಾರೆ.
ಸಹಕಾರ ಸಂಘಗಳು ಸೇಡಂ ಉಪ ವಿಭಾಗದ ಸಹಾಯಕ ನಿಬಂಧಕರು ಇವರ ಉಲ್ಲೇಖದನ್ವಯ ಅಧ್ಯಕ್ಷರು ಗ್ರಾಮ ಪಂಚಾಯತ ಕರದಾಳ ಹಾಗೂ ಇತರೆ 11 ಜನ ಗ್ರಾಮಸ್ಥರು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಇವರಿಗೆ ಸಲ್ಲಿಸಿದ ಮನವಿಯಂತೆ ಮಹಿಳೆಯರ ಮೀನುಗಾರಿಕೆ ಸಹಕಾರ ಸಂಘ ನಿ.ಅಣಿಕೇರಾ ಕೇಂದ್ರ ಸ್ಥಾನ ವಾಡಿ ಇದರ ಕಾನೂನು ಬಾಹಿರ ಚಟುವಟಿಕೆಗಳ ಕುರಿತು ನೀಡಿರುವ ದೂರು ಅರ್ಜಿಯಲ್ಲಿರುವ ಅಂಶವಾರು ವಿಚಾರಣೆಯನ್ನು ಮೇ.5 ರಂದು ಬೆಳಗ್ಗೆ 11 ಗಂಟೆಗೆ ಸಂಘದ ಕಚೇರಿಯಲ್ಲಿ ನಿಗದಿಪಡಿಸಲಾಗಿದ್ದು ಸದರಿ ದಿನಾಂಕದಂದು ದೂರು ಅರ್ಜಿಗೆ ಸಂಬಂಧಪಟ್ಟ ಎಲ್ಲಾ ಮೂಲ ದಾಖಲಾತಿಗಳೊಂದಿಗೆ ವಿಚಾರಣೆಗೆ ಹಾಜರಾಗಲು ಹಾಗೂ ಅಧ್ಯಕ್ಷರು ಗ್ರಾ.ಪಂ ಕರದಾಳ ಇತರೆ 11 ಜನ ಗ್ರಾಮಸ್ಥರು ವಿಚಾರಣೆ ಹಾಜರಾಗಲು ಸೂಚಿಸಿದ್ದಾರೆ.
ಒಂದು ವೇಳೆ ಗೈರು ಹಾಜರಾದಲ್ಲಿ ಲಭ್ಯವಿರುವ ದಾಖಲಾತಿಗಳ ಆಧಾರದ ಮೇಲೆ ವಿಚಾರಣೆಯನ್ನು ಪೂರ್ಣಗೊಳಿಸಿ ವರದಿ ಸಲ್ಲಿಸಲಾಗುವುದು.