ಅಣಿಕೇರಾ ಮಹಿಳಾ ಮೀನುಗಾರರ ಸಹಕಾರ ಸಂಘದ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಮಹಿಳಾ ಮೀನುಗಾರರ ಸಹಕಾರ ಸಂಘ(ನಿ) ಅಣಿಕೇರಾ ಕೇಂದ್ರ ಸ್ಥಾನ ವಾಡಿ ಇದೊಂದು ಬೋಗಸ್ ಸಂಘವಾಗಿದ್ದು ಇದರ ಅವ್ಯವಹಾರ ಕುರಿತು ಸಮಗ್ರ ತನಿಖೆ ಕೈಗೊಂಡು ಅಗತ್ಯ ಕಾನೂನು ಕ್ರಮ ಜರುಗಿಸಬೇಕು ಎಂದು ಮುಖಂಡರಾದ ಮಲ್ಲಿಕಾರ್ಜುನ ಈಶ್ವರಪ್ಪ ದಬ್ಬಿಗೇರ, ಮಹಾದೇವಪ್ಪ ಶಿವಪ್ಪ ಸಂಕನೋರ, ಅರ್ಜುನ ನಿಂಗಪ್ಪ ತಳವಾರ, ನರಸಣ್ಣ ಪೀರಣ್ಣ ಬಾನರ್, ರಾಜಾಸಾಬ್ ಬಶೀರ್ ಸಾಬ್ ಅಲ್ಲಾಪೂರ ಅವರು ಚಿಂಚೋಳಿ ಮೀನುಗಾರಿಕೆ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.
ಈ ಮಹಿಳಾ ಸಂಘವು ಹೆಸರಿಗಷ್ಟೆ ಮಹಿಳಾ ಮೀನುಗಾರರ ಸಹಕಾರ ಸಂಘ ಆಗಿದ್ದು ಈ ಸಂಘದ ಮಹಿಳೆಯರು ಯಾರು ಕೆರೆಯಲ್ಲಿ ಮೀನು ಹಿಡಿಯುವುದಿಲ್ಲ ಹಾಗೂ ಹಿಡಿಯುವುದಕ್ಕೆ ಬರುವುದಿಲ್ಲ ಇದು ಮೀನುಗಾರಿಕೆ ಇಲಾಖೆ ಮತ್ತು ಸಹಕಾರ ಇಲಾಖೆಯ ಕಾನೂನುಗಳು ಉಲ್ಲಂಘನೆ ಮಾಡಿದಂತೆ ಆಗಿದೆ ಕೂಡಲೇ ಸಂಘದ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸದರಿ ಸಂಘವು ನಮ್ಮ ಊರಿನ ಜಲ ಸಂಪನ್ಮೂಲವಾದ ಕರದಾಳ ಕೆರೆಯನ್ನು ಮೀನುಗಾರಿಕೆ ಇಲಾಖೆಯ ಸಾಧ್ಯತಾ ವರದಿ ಇಲ್ಲದೆ ಸುಳ್ಳು ಮಾಹಿತಿಗಳನ್ನು ನೀಡಿ ಸದರಿ ಸಂಘಕ್ಕೆ ಪಡೆದು ಮೀನುಗಳನ್ನು ಹಿಡಿದುಕೊಂಡು ಹೋಗುತ್ತಿದ್ದಾರೆ. ಮೀನುಗಾರಿಕೆ ಇಲಾಖೆ ಮತ್ತು ಸಹಕಾರ ಇಲಾಖೆಯ ನಿಯಮದ ಪ್ರಕಾರ ಕರದಾಳ ಗ್ರಾಮದ ಸದಸ್ಯ ಮಹಿಳೆಯರು ಮತ್ತು ಅಣಿಕೇರಾ ಗ್ರಾಮದ ಮಹಿಳಾ ಸದಸ್ಯರು ಮಾತ್ರ ಕೆರೆಯಲ್ಲಿ ಇಳಿದು ಮೀನು ಹಿಡಿಯ ತಕ್ಕದ್ದು ಆದರೆ ಈ ಬೋಗಸ್ ಮಹಿಳಾ ಸಂಘವು ತಮ್ಮ ಸದಸ್ಯರ ಮುಖಾಂತರ ಮೀನು ಹಿಡಿಸುವುದು ಬಿಟ್ಟು ಬೇರೆ ತಾಲೂಕಿನ ಪುರುಷ ಮೀನುಗಾರರಿಂದ ಮೀನು ಹಿಡಿಸುತ್ತಿದ್ದಾರೆ. ಇದು ಮೀನುಗಾರಿಕೆ ಇಲಾಖೆಯ ಪ್ರಕಾರ ಕಾನೂನು ಉಲ್ಲಂಘನೆಯಾಗಿರುತ್ತದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮೀನುಗಾರಿಕೆ ಅಧಿಕಾರಿಗಳಿಗೆ ಮೌಖಿಕವಾಗಿ ಹೇಳಿದರೂ ಯಾವುದೇ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ಈ ಕೂಡಲೆ ಈ ಬೋಗಸ್ ಮಹಿಳಾ ಮೀನುಗಾರರ ಸಹಕಾರ ಸಂಘದ ಜನರು ಅಕ್ರಮವಾಗಿ ಬೇರೆ ತಾಲೂಕಿನ ಪುರುಷ ಮೀನುಗಾರರನ್ನು ತಂದು ಕರದಾಳ ಕೆರೆಯಲ್ಲಿ ಮೀನು ಹಿಡಿಯುವುದನ್ನು ತಕ್ಷಣವೆ ನಿಲ್ಲಿಸಬೇಕು ಇಲ್ಲದ್ದಿದ್ದಲ್ಲಿ ಕರದಾಳ ಕೆರೆ ಅಂಚಿನಲ್ಲಿ ಯಾವುದೇ ಕಾನೂನು ಸುವ್ಯವಸ್ಥೆ ಹಾಳಾದಲ್ಲಿ ಅದಕ್ಕೆ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳೇ ನೇರ ಹೊಣೆಗಾರರಾಗುತ್ತಾರೆ. ಈ ಕೂಡಲೆ ಕರದಾಳ ಗ್ರಾಮಕ್ಕೆ ಮತ್ತು ಅಣಿಕೇರಾ ಗ್ರಾಮಕ್ಕೆ ಪೊಲೀಸ್ ಸಮಕ್ಷಮದಲ್ಲಿ ಬೇಟಿ ನೀಡಿ ಈ ಸಮಸ್ಯೆ ಕುರಿತು ಗ್ರಾಮಸ್ಥರಲ್ಲಿ ಸ್ಪಷ್ಟನೆ ನೀಡಬೇಕೆಂದು ಮೀನುಗಾರಿಕೆ ಇಲಾಖೆಗೆ ಮನವಿ ಮಾಡಿಕೊಂಡಿದ್ದಾರೆ.