ಚಿತ್ತಾಪುರ ಎಪಿಎಂಸಿ ಮಳಿಗೆಗಳ ಹರಾಜಿನಲ್ಲಿ ಅವ್ಯವಹಾರ ಕಾರ್ಯದರ್ಶಿ ವಿರುದ್ಧ ಕ್ರಮ ಕೈಗೊಳ್ಳಲು ಕರವೇ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಮುಖ್ಯರಸ್ತೆಗೆ ಹೊಂದಿಕೊಂಡಿರುವ ಕೃಷಿ ಉತ್ಪನ್ನ ಮಾರುಕಟ್ಟೆ (ಎ.ಪಿ.ಎಂ.ಸಿ) ಚಿಕ್ಕ ಮಳಿಗೆಗಳ ಹಾರಜಿನಲ್ಲಿ ಅವ್ಯವಹಾರ ನಡೆದಿದ್ದು ತನಿಖೆ ಮಾಡಿ ಕಾರ್ಯದರ್ಶಿ ಅವರು ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರವೇ ನಾರಾಯಣಗೌಡ ಬಣ ತಾಲೂಕು ಅಧ್ಯಕ್ಷ ಚಂದರ್ ಚವ್ಹಾಣ ಆಗ್ರಹಿಸಿದ್ದಾರೆ.
ಈ ಕುರಿತು ತಹಸೀಲ್ದಾರ್ ಅವರಿಗೆ ಬುಧವಾರ ಮನವಿ ಪತ್ರ ಸಲ್ಲಿಸಿದ ಅವರು, ಕಳೆದ ಮಾ.5 ರಂದು ಮಳಿಗೆ ಸಂಖ್ಯೆ: 3,7,8 ಅಂಗಡಿಗಳು ಸಂಪೂರ್ಣ ಮುಚಿಸದೇ ಹರಾಜು ಮಾಡುತ್ತಿರುವುದನ್ನು ಕಂಡು ಈ ಅಂಗಡಿಗಳು ಸಂಪೂರ್ಣ ಮುಚಿದ ಮೇಲೆ ಹರಾಜು ಪ್ರಕ್ರಿಯನ್ನು ಮಾಡಬೇಕೆಂದು ಮನವಿ ಸಲ್ಲಿಸಲಾಗಿತ್ತು, ಆದರೆ ಕಾರ್ಯದರ್ಶಿ ಸರಕಾರದ ನಿಯಮಗಳನ್ನು ಗಾಳಿಗೆ ತುರಿ ಆ ಅಂಗಡಿಗಳು ಯಥಾ-ವಥವಾಗಿ ನಡೆಯುತ್ತಿರುವಾಗಲೇ ಹಾರಜು ಪ್ರಕ್ರಿಯೆ ಮುಗಿಸಿರುತ್ತಾರೆ ಮತ್ತು ಅಂಗಡಿಯ ಹರಾಜುದಾರರಿಗೆ ಹರಾಜ ಆದನಂತರ ಇಲಾಖೆಯಿಂದ ಅನುಮೋದನೆ ಸಿಕ್ಕ ಮೇಲೆ ಇಲಾಖೆಯ ಕಾರ್ಯದರ್ಶಿ ಇವರು ಬೀಗ ಕೊಡುವವರೆಗೆ ಆ ಅಂಗಡಿಯಾಗಲಿ ಆ ಅಂಗಡಿಯ ಅಂಗಳದಲ್ಲಿಯಾಗಲಿ ಹೋಟೆಲ್ ಅಥವಾ ಇನ್ನಿತರ ಅಂಗಡಿಗಳು ನಡೆಸಬಾರದೆಂದು ಸರಕಾರದ ನಿಯಮವಿರುದ್ದರೂ ಎಪಿಎಂಸಿ ಕಾರ್ಯದರ್ಶಿಗಳು ನಿಯಮ ಮೀರಿ ನಡೇದುಕೊಂಡಿದ್ದಾರೆ. ಈ ಕುರಿತು ಮನವಿ ಕೊಟ್ಟರೂ ಕೂಡ ತಮ್ಮ ಮನ ಬಂದಂತೆ ಮಾಡುತ್ತಿರುವುದು ಖಂಡನಿಯವಾಗಿದೆ ಎಂದು ತಿಳಿಸಿದ್ದಾರೆ.
ಮತ್ತೇ ಇನ್ನುಳಿದ ಬೇರೆ ಬೇರೆ ಅಂಗಡಿಗಳು ಕೂಡ ಕಾನೂನು ಬಾಹಿರವಾಗಿ ನಡೆಸುತ್ತಿದ್ದಾರೆ, ಹರಾಜು ಮಾಡುವವರು ಒಬ್ಬರು ಅಂಗಡಿ ನಡೆಸುವವರು ಒಬ್ಬರುರಾಗಿದ್ದಾರೆ, ಹಾಗಾಗಿ ಇವೆಲ್ಲ ನಡೆಯುತ್ತಿರುವ ಅವ್ಯವಹಾರಗಳನ್ನು ತನಿಖೆ ಮಾಡಿ ಹಾಗೂ ಯಥಾ-ವಥಾವಾಗಿ ನಡೆಯುತ್ತಿರುವ ಅಂಗಡಿಗಳನ್ನು ತಕ್ಷಣವೇ ಮುಚ್ಚಿಸಬೇಕು ಹಾಗೂ ಒಂದು ವಾರದ ಒಳಗೆ ಕಾರ್ಯದರ್ಶಿ ಅವರ ಮೇಲೆ ಕಾನೂನು ಕ್ರಮ ಜರುಗಿಸದಿದ್ದರೇ ಮುಂಬುರುವ ದಿನಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಮುತ್ತಿಗೇ ಹಾಕಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಈಶ್ವರಮ್ಮಾ ಯಾಧವ, ಮೋನಪ್ಪಾ ಹಾದಿಮನಿ, ಶಿವುಕುಮಾರ ಗುತ್ತೇದಾರ, ಸಂತೋಷ ಚವ್ಹಾಣ, ಸಾಬಯ್ಯ ಗುತ್ತೇದಾರ, ಭಾಗಪ್ಪ, ಅಯ್ಯಪ್ಪಾ, ಭೀಮು, ಚಂದ್ರು, ಸುನಿಲ್ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.