Oplus_0

ವಿಶ್ವಕರ್ಮ ಜಯಂತಿಗೆ ಅವಮಾನಿಸಿದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ತಹಸೀಲ್ ಕಚೇರಿಯ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಸೆ.17 ರಂದು ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮದ ವೇದಿಕೆಯಲ್ಲಿ ವಿಶ್ವಕರ್ಮ ಜಯಂತಿ ಬ್ಯಾನರ್ ಹಾಕದೆ ಅವಮಾನಿಸಿದ ತಾಲೂಕು ಆಡಳಿತ ನಡೆ ಖಂಡನೀಯ ಎಂದು ವಿಶ್ವಕರ್ಮ ಸಮಾಜದ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದ ಕಾಳಿಕಾದೇವಿ ದೇವಸ್ಥಾನದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ  ವಿಶ್ವಕರ್ಮ ಸಮಾಜದ ತಾಲೂಕು ಅಧ್ಯಕ್ಷ ಪ್ರಲ್ಹಾದ ವಿಶ್ವಕರ್ಮ ಮಾತನಾಡಿ, ಸರ್ಕಾರದ ವತಿಯಿಂದ ಶಿಷ್ಟಾಚಾರದ ಪ್ರಕಾರ ವಿಶ್ವಕರ್ಮ ಜಯಂತಿ ಆಚರಣೆ ಮಾಡದೇ ಕೇವಲ ಕಾಟಾಚಾರಕ್ಕೆ ಎಂಬಂತೆ ಮಾಡಿ ವಿಶ್ವಕರ್ಮ ಸಮಾಜಕ್ಕೆ ಮೂಲೆಗುಂಪು ಮಾಡಿ ಮಲತಾಯಿ ಧೋರಣೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಬರೀ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಕಾರ್ಯಕ್ರಮಕ್ಕೆ ಗಮನ ಹರಿಸಿ ವಿಶ್ವಕರ್ಮ ಜಯಂತಿಗೆ ನಿರ್ಲಕ್ಷ್ಯ ಮಾಡಿದ್ಹದಾರೆ. ಕಾರ್ಯಕ್ರಮದ ವೇದಿಕೆಯ ಮೇಲೆ ವಿಶ್ವಕರ್ಮ ಜಯಂತಿಯ ಬ್ಯಾನರ್ ಹಾಕಿಲ್ಲ, ಭಾವಚಿತ್ರ ಇಟ್ಟಿಲ್ಲ ಅಷ್ಟೇ ಅಲ್ಲ ಆಮಂತ್ರಣ ಪತ್ರಿಕೆ ಸಹ ಮುದ್ರಿಸಿಲ್ಲ ,ಪೂರ್ವಭಾವಿ ಸಭೆಯಲ್ಲಿ ಚರ್ಚೆ ಮಾಡಿದ ಯಾವುದೇ ಕ್ರಮ ಕೈಗೊಂಡಿಲ್ಲ ಇದು ವಿಶ್ವಕರ್ಮ ಸಮಾಜಕ್ಕೆ ಮಾಡಿದ ಅವಮಾನ ಎಂದು ಹೇಳಿದರು.

ದೇಶದ ಬೆನ್ನೆಲುಬು ರೈತ, ರೈತರ ಬೆನ್ನೆಲುಬು ವಿಶ್ವಕರ್ಮ ಸಮಾಜ. ವಿಶ್ವಕರ್ಮರ ಕೊಡುಗೆ ಅಪಾರ ಇದೆ, ಇಂತಹ ವಿಶ್ವಕರ್ಮರ ಜಯಂತಿಗೆ ಅಧಿಕಾರಿಗಳು ನಿರ್ಲಕ್ಷ್ಯ ಮಾಡಿರುವುದು ಅಕ್ಷಮ್ಯ ಅಪರಾಧವಾಗಿದ್ದು ಕೂಡಲೇ ಬೇಜವಾಬ್ದಾರಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಶ್ವಕರ್ಮ ಸಮಾಜದ ಕಾರ್ಯದರ್ಶಿ ಮೋನಯ್ಯ ಪಂಚಾಳ, ಮುಖಂಡರಾದ ಕಾಶಿಪತಿ ಬಡಿಗೇರ್, ವೀರಣ್ಣ ಶಿಲ್ಪಿ, ಪ್ರಕಾಶ್ ತೋನಸನಳ್ಳಿ, ರವೀಂದ್ರ ವಿಶ್ವಕರ್ಮ, ಕಲ್ಯಾಣರಾವ ಭಕ್ತಿ, ಅಖಂಡೇಶ್ವರ, ಪ್ರಕಾಶ್ ಸುನಾರ್, ರಾಮಚಂದ್ರ ಅಲ್ಲೂರ, ಬಸವರಾಜ ಬೆನಕನಳ್ಳಿ, ಸಂಗಣ್ಣ ವಿಶ್ವಕರ್ಮ, ದೇವಾನಂದ ಪಂಚಾಳ ಸೇರಿದಂತೆ ಇತರರು ಇದ್ದರು.

“ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ಬ್ಯಾನರ್ ಜೊತೆಗೆ ವಿಶ್ವಕರ್ಮ ಜಯಂತಿ ಬ್ಯಾನರ್ ಕೂಡ ಹಾಕಿದ್ದಾರೆ, ಚಿತ್ತಾಪುರದಲ್ಲಿ ಮಾತ್ರ ಬ್ಯಾನರ್ ಹಾಕದೆ ಅವಮಾನ ಮಾಡಿದ್ದಾರೆ ಕೂಡಲೇ ಬೇಜಾರು ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದೆ ಹೋರಾಟ ಮಾಡಬೇಕಾಗುತ್ತದೆ”-ರವೀಂದ್ರ ವಿಶ್ವಕರ್ಮ ಯುವ ಮುಖಂಡ ವಿಶ್ವಕರ್ಮ ಸಮಾಜ.

Spread the love

Leave a Reply

Your email address will not be published. Required fields are marked *

error: Content is protected !!