ಬಾಲಕಿ ಆತ್ಮಹತ್ಯೆ ಪ್ರಕರಣ ಖಂಡಿಸಿ ಜ.16 ರಂದು ಜೇವರ್ಗಿ ಬಂದ್ ಕರೆ
ನಾಗಾವಿ ಎಕ್ಸಪ್ರೆಸ್
ಜೇವರ್ಗಿ: ನಗರದ ಅಪ್ರಾಪ್ತ ಬಾಲಕಿ ಅನ್ಯಕೋಮಿನ ಯುವಕನ ಕಿರುಕುಳದಿಂದ ಬೇಸತ್ತು ಜನವರಿ 11 ರಂದು ಆತ್ಮಹತ್ಯೆ ಮಾಡಿಕೊಂಡಿರುತ್ತಾಳೆ ಬದುಕಿ ಬಾಳಬೇಕಾಗಿದ್ದ ಯುವತಿ ಆತನ ಮಾನಸಿಕ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಾಗಿದೆ. ಆತ್ಮಹತ್ಯೆಗೆ ಕಾರಣನಾದ ಯುವಕನಿಗೆ ಕಠಿಣ ಶಿಕ್ಷೆ ನೀಡಿ ಮುಂದೆ ಇಂತಹ ಘಟನೆ ಜರುಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರವನ್ನು ಒತ್ತಾಯಿಸಲು ಜೇವರ್ಗಿ ತಾಲೂಕ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಜನವರಿ 16 ರಂದು ಜೇವರ್ಗಿ ಬಂದಗೆ ಕರೆ ನೀಡಲಾಗಿದೆ.
ಈ ಕರೆಗೆ ಜೇವರ್ಗಿ ತಾಲೂಕ ಜಾಗತಿಕ ಲಿಂಗಾಯತ ಮಹಾಸಭಾ ಸಂಪೂರ್ಣವಾಗಿ ಬೆಂಬಲಿಸಿ ಭಾಗವಹಿಸಲು ನಿಶ್ಚಯಿಸಲಾಗಿದೆ ಎಂದು ಅಧ್ಯಕ್ಷ ನೀಲಕಂಠ ಅವoಟಿ, ಗೌಡಪ್ಪ ಗೌಡ ಪಾಟೀಲ್ ಆಂದೋಲಾ, ಶಿವನಗೌಡ ಪಾಟೀಲ್ ಹಂಗರಗಿ, ಶರಣಬಸವ ಕಲ್ಲಾ, ಷಣ್ಮುಖಪ್ಪ ಹಿರೇಗೌಡ, ಬಾಪುಗೌಡ ಪಾಟೀಲ್ ಬಿರಾಳ, ಗುರುಲಿಂಗಪ್ಪ ಗೌಡ ಮಾಲಿಪಾಟೀಲ್ ಆಂದೋಲಾ, ಸದಾನಂದ ಪಾಟೀಲ್, ಮಾಂತೇಶ್ ಎಸ್ ಹರವಾಳ, ಮಲ್ಲನಗೌಡ ಕನ್ಯಾಕುಳೂರ್, ಅಖಂಡಪ್ಪ ಎಂ.ಕಲಾ ಅವರು ತಿಳಿಸಿದ್ದಾರೆ.