ಬಂದೂಕು ತರಬೇತಿಗೆ ಅರ್ಜಿ ಆಹ್ವಾನ
ನಾಗಾವಿ ಎಕ್ಸಪ್ರೆಸ್
ಕಲಬುರಗಿ: ನಗರ ಪೊಲೀಸ್ ಆಯುಕ್ತಾಲಯದ ವತಿಯಿಂದ ಸಾರ್ವಜನಿಕರಿಗೆ ನಾಗರಿಕ ಬಂದೂಕು ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ತರಬೇತಿಗೆ ಸಂಬಂಧಪಟ್ಟಂತೆ ಅರ್ಜಿ ಸಲ್ಲಿಕೆಯು ಜನವರಿ 10 ರಿಂದ ರಿಂದ ಪ್ರಾರಂಭವಾಗಲಿದ್ದು, ನಾಗರಿಕ ಬಂದೂಕು ತರಬೇತಿಗೆ ಸಂಬಂದಿಸಿದ ಅರ್ಜಿಗಳು ನಗರ ಪೊಲೀಸ್ ಸಶಸ್ತ್ರ ಮೀಸಲು ಪಡೆ (ಸಿ.ಎ.ಆರ್) ಘಟಕದಲ್ಲಿ ಲಭ್ಯವಿರುತ್ತದೆ. ನಾಗರಿಕ ಬಂದೂಕು ತರಬೇತಿಗೆ ಸಂಬಂದಿಸಿದ ಹೆಚ್ಚಿನ ಮಾಹಿತಿಗಾಗಿ ಎ.ಸಿ.ಪಿ ಸಿ.ಎ.ಆರ್ ಘಟಕ ಹಾಗೂ ಆರ್.ಪಿ.ಐ ಸಿ.ಎ.ಆರ್ ಘಟಕ ಕಲಬುರಗಿ ನಗರ ರವರನ್ನು ಸಂಪರ್ಕಿಸಬಹುದಾಗಿದೆ. ಇದೇ ಜನವರಿ 22 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.
ಆಸಕ್ತ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಲು ಸೂಚಿಸಲಾಗಿದೆ. ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: ಎ.ಸಿ.ಪಿ ಸಿ.ಎ.ಆರ್ 9480805542, ಆರ್.ಪಿ.ಐ ಸಿ.ಎ.ಆರ್ 9449445143.