ವಾಡಿ ಶ್ರೀ ಸೇವಲಾಲ್ ಮಹಾರಾಜರ ಜಯಂತಿಗೆ ಬಿ.ವೈ. ವಿಜಯೇಂದ್ರ ಅವರಿಗೆ ಆಮಂತ್ರಣ

ನಾಗಾವಿ ಎಕ್ಸಪ್ರೆಸ್

ವಾಡಿ: ಪಟ್ಟಣದಲ್ಲಿ ಬರುವ ಫೆಬ್ರುವರಿ 15 ರಂದು ನಡೆಯಲಿರುವ ಶ್ರೀ ಸಂತ ಸೇವಲಾಲ್ ಮಹಾರಾಜರ 286ನೇ ಜಯಂತೋತ್ಸವ ಸಮಾರಂಭಕ್ಕೆ ಬಿಜೆಪಿ ರಾಜಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರನ್ನು ಬಂಜಾರ ಸಮಾಜದ ಮುಖಂಡರು ಆಹ್ವಾನಿಸಿದರು.

ಸೇಡಂ ‌ನ ಬೀರನಳ್ಳಿಯಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಬಿ.ವೈ ವಿಜಯೇಂದ್ರ ಅವರನ್ನು ಕಲಬುರ್ಗಿಯಲ್ಲಿ ಭೇಟಿಯಾಗಿ ಆಮಂತ್ರಿಸಿದರು.

ಪಟ್ಟಣದಲ್ಲಿ ಸುಮಾರು 24 ವರ್ಷಗಳಿಂದ ಬಂಜಾರ ಸಮಾಜದ ಮುಖಂಡರು ತಮ್ಮ ಸಂಪ್ರದಾಯದ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಜಯಂತಿ ಆಚರಿಸಿಕೊಂಡು ಬರುತ್ತಿದ್ದಾರೆ. ಈ ಭಾಗದ ಸ್ವಾಮಿಜಿಗಳು, ಎಲ್ಲಾ ಸಮಾಜದ ಮುಖಂಡರು ಭಾಗವಹಿಸಿ ಹಬ್ಬದಂತೆ ಸಂಭ್ರಮಿಸುವುದು ಈ ಜಯಂತಿಯ ವಿಶೇಷವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶ್ರೀ ಸೇವಲಾಲ್ ಮಹಾರಾಜರ ಜಯಂತೋತ್ಸವ ಸಮಿತಿ ಅಧ್ಯಕ್ಷ ವಿಠಲ್ ವಾಲ್ಮೀಕ ನಾಯಕ, ಬಂಜಾರ ಸಮಾಜದ ಅಧ್ಯಕ್ಷ ರಮೇಶ ಕಾರಬಾರಿ, ಪ್ರಧಾನ ಕಾರ್ಯದರ್ಶಿ ಸೋಮು ಚವ್ಹಾಣ, ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ, ಮುಖಂಡರಾದ ಕಿಶನ ಜಾಧವ, ಅಂಬದಾಸ ಜಾಧವ, ರಾಜು ಪವಾರ, ನಾಗರಾಜ ಗೌಡ ಗೌಡಪ್ಪನೂರ, ದತ್ತಾ ಖೈರೆ ಸೇರಿದಂತೆ ಇತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!