Oplus_0

ಬೆದರಿಕೆಗಳೆ ಪತ್ರಕರ್ತರಿಗೆ ಪ್ರಶಸ್ತಿ ಮತ್ತು ಸನ್ಮಾನ ಪತ್ರವಿದ್ದಂತೆ: ಅಜಿತ್ ಹನುಮಕ್ಕನವ‌ರ್

ನಾಗಾವಿ ಎಕ್ಸಪ್ರೆಸ್

ಬೆಳಗಾವಿ: ತಿಂಗಳಿಗೊಮ್ಮೆ ಭ್ರಷ್ಟ ರಾಜಕಾರಣ, ದುರಾಡಾಳಿತ ನೀಡುವ ಅಧಿಕಾರಿಗಳು, ಭೂಗತ ಜಗತ್ತಿನಿಂದ ಬೆದರಿಕೆ ಕರೆಗಳು ಬಂದಾಗಲೆ ನಾನು ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂಬ ಸಮಾಧಾನ ನನಗೆ ಉಂಟಾಗುತ್ತದೆ. ಪದೇ ಪದೇ ಎದುರಾಗುವ ಬೆದರಿಕೆಗಳು ಪತ್ರಕರ್ತರಿಗೆ ಪ್ರಶಸ್ತಿ ಮತ್ತು ಸನ್ಮಾನ ಪತ್ರವಿದ್ದಂತೆ ಎಂದು ಹಿರಿಯ ಪತ್ರಕರ್ತ ಅಜಿತ್ ಹನುಮಕ್ಕನವರ್ ಹೇಳಿದರು.

ಬೆಳಗಾವಿಯ ಪ್ರಬುದ್ಧ ಭಾರತ ಮತ್ತು ಚನ್ನಮ್ಮ ವಿಶ್ವವಿದ್ಯಾಲಯ ದೀನದಯಾಳ್ ಪೀಠದ ಸಹಯೋಗದಲ್ಲಿ ಕೆಎಲ್‌ಇ ಸೆಂಟನರಿ ಕನ್ವೆನ್ಷನ್ ಸೆಂಟರ್‌ದಲ್ಲಿ ಜರುಗಿದ ಎರಡು ದಿನದ ಏಕಾತ್ಮ ಮಾನವ ದರ್ಶನ ವಿಷಯದ ವಿಚಾರ ಸಂಕಿರಣದಲ್ಲಿ ಅವರು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಪತ್ರಿಕೋದ್ಯಮ ವಿಷಯದ ಕುರಿತಾಗಿ ಮಾತನಾಡುತ್ತಾ ಹೇಳಿದರು.

ನಾಯ್ಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗದಂತೆ ಪತ್ರಿಕಾರಂಗವು ಸಮಾಜದ ಉನ್ನತಿಗೆ ಶ್ರಮಿಸುತ್ತದೆ. ಆದರೆ ಕೆಲ ಬಾರಿ ಶಾಸಕಾಂಗ ಮತ್ತು ಕಾರ್ಯಾಂಗ ತಪ್ಪು ದಾರಿಯಲ್ಲಿ ಸಾಗುತ್ತಿರಬೇಕಾದರೆ ಚುರುಕು ಮುಟ್ಟಿಸುವ ಜವಾಬ್ದಾರಿ ಪತ್ರಿಕಾ ರಂಗದ್ದಾಗಿದೆ. ಸಮಾಜದಲ್ಲಿ ಮಾಧ್ಯಮದ ವರದಿಯಿಂದಾಗುವ ಅವಮಾನ ಮತ್ತು ಅಪಪ್ರಚಾರಕ್ಕೆ ಹೆದರಿ, ಯಾವುದೆ ಜನವಿರೋಧಿ ಮತ್ತು ಅಕ್ರಮಕ್ಕೆ ಅವಕಾಶ ನೀಡಿದೆ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದು ಮಾಧ್ಯಮದ ಉಪಯುಕ್ತತೆ ಎನ್ನಬಹುದು ಎಂದರು.

ಇತ್ತೀಚೆಗೆ ಕಾರ್ಯಾಂಗ ಮತ್ತು ನ್ಯಾಯಾಂಗ ವ್ಯವಸ್ಥೆಗಳನ್ನು ಭ್ರಷ್ಟರು ಇಂದು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿರುವುದು ವಿಪರ್ಯಾಸ ಸಂಗತಿ. ಅವರ ವಿರುದ್ಧ ವರದಿ ಮಾಡಲು ಕೂಡಾ ಸಾಧ್ಯವಾಗುವುದಿಲ್ಲ. ಏಕೆಂದರೆ ಅವರು ನ್ಯಾಯಾಲಯಗಳ ಮೂಲಕ ವರದಿ ಪ್ರಸಾರಕ್ಕೆ ನಿರ್ಬಂಧ ಮತ್ತು ಕೆವಿಟ್ ಆದೇಶವನ್ನು ಪಡೆದಿರುತ್ತಾರೆ. ನ್ಯಾಯಾಲಯದ ಈ ಬಗೆಯ ಅದೇಶಗಳು ಮಾಧ್ಯಮಗಳ ಕಾರ್ಯನಿರ್ವಹಿಸಲು ದೊಡ್ಡ ತಡೆ ಉಂಟುಮಾಡುತ್ತಿವೆ ಎಂದರು.

ಮಾಧ್ಯಮಗಳು ಇತ್ತೀಚೆಗೆ ಟಿಆರ್‌ಪಿಯ ಜಾಲದಲ್ಲಿ ಕಳೆದು ಹೋಗಿವೆ. ಟಿಆರ್‌ಪಿ ಕಾರಣದಿಂದ ಮಾಧ್ಯಮಗಳು ಯಾವ ಬಗೆಯ ಕಾರ್ಯಕ್ರಮ ಪ್ರಸಾರ ಮಾಡಬೇಕು ಮತ್ತು ಪ್ರಸಾರ ಮಾಡಬಾರದು ಎಂದು ನಿರ್ಧರಿತವಾಗುತ್ತದೆ. ಕಾರ್ಯಕ್ರಮ ವೀಕ್ಷಣೆ ಕುರಿತಾದ ಜನರ ಬಯಕೆ ಮತ್ತು ಅವರ ವೀಕ್ಷಣೆ ಈ ಎರಡು ಸಂಗತಿಗಳು ವೈರುಧ್ಯದಿಂದ ಕೂಡಿವೆ. ಹಾಗಾಗಿ ವಾಹಿನಿ ಸಂಸ್ಥೆಗಳಿಗೆ ಯಾವ ಬಗೆಯ ಕಾರ್ಯಕ್ರಮ ನಿರ್ಮಾಣ ಮಾಡಬೇಕು ಎಂಬುದು ಟಿಆರ್‌ಪಿಯೆ ಮಾನದಂಡವಾಗಿರುವುದು ಸೋಜಿಗದ ಸಂಗತಿ ಎಂದರು.

ಜಸ್ಟಿಸ್‌ ಅರವಿಂದ ಪಾಶ್ಚಾಪುರೆ ಮಾತನಾಡಿ, ನಾಯ್ಯಾಂಗದಿಂದ ದೊರೆಯುವ ಕೆವಿಟ್ ಆದೇಶ ಬಗ್ಗೆ ಮಾಧ್ಯಮದಲ್ಲಿ ವರದಿ ಮಾಡಲು ಸಾಧ್ಯವಾಗುವುದಿಲ್ಲ. ನ್ಯಾಯಾಂಗದ ಪ್ರಕಾರ ಆರೋಪ ಸಿದ್ಧವಾಗಿ ಅಪರಾಧಿ ಆದಾಗ ಮಾತ್ರ ಕೆವಿಟ್ ಆದೇಶ ಬಿದ್ದು ಹೋಗುವುದು. ನ್ಯಾಯಾಂಗ ವ್ಯವಸ್ಥೆಯು ಕೂಡಾ ಬ್ರಿಟಿಷರ ಕಾಲದಲ್ಲಿನ ಅನೇಕ ಪದ್ಧತಿಗಳನ್ನು ಪರಿಷ್ಕರಣೆಗೆ ಒಳಪಡಿಸಿ, ಭಾರತೀಯ ನ್ಯಾಯ ಪದ್ಧತಿ ಜಾರಿಗೆ ತರುವ ಅವಶ್ಯಕತೆಯಿದೆ ಎಂದರು.

Spread the love

Leave a Reply

Your email address will not be published. Required fields are marked *

error: Content is protected !!