ಬೆಳಗುಂಪಾ ಮೃತ ಶ್ರೀಧರ್ ನವಲಕರ್ ಕುಟುಂಬಕ್ಕೆ 10 ಲಕ್ಷ ಪರಿಹಾರ: ಯಾಗಾಪೂರ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ತಾಲೂಕಿನ ಬೆಳಗುಂಪಾ ಗ್ರಾಮದ ಮರಳು ಗುಂಡಿಯಲ್ಲಿ ಆಕಸ್ಮಿಕವಾಗಿ ಮೃತಪಟ್ಟ ಶ್ರೀಧರ್ ನವಲಕರ್ ಕುಟುಂಬಕ್ಕೆ ಮರುಳು ದಕ್ಕಾದವರಿಂದ ರೂ.10 ಲಕ್ಷ ಪರಿಹಾರ ಕೊಡಿಸಲಾಗಿದೆ ಎಂದು ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಶಿವುಕುಮಾರ ಯಾಗಾಪೂರ ತಿಳಿಸಿದ್ದಾರೆ.
ಬುಧವಾರ ಮೃತ ಶ್ರೀಧರ್ ನವಲಕರ್ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ನಂತರ ಮಾತನಾಡಿದ ಅವರು, ಬೆಳಗುಂಪಾ ಘಟನೆಯನ್ನು ಕೆಲವರು ರಾಜಕೀಯವಾಗಿ ಬಳಸಿಕೊಂಡು ತಮ್ಮ ಬೆಳೆ ಬೇಯಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಇದು ಸರಿಯಲ್ಲ, ಯಾವುದೇ ಕಾರಣಕ್ಕೂ ಈ ಕುಟುಂಬವನ್ನು ರಾಜಕೀಯ ವಿಷಯಕ್ಕೆ ಎಳೆ ತರಬಾರದು ಈಗಾಗಲೇ ಇದೊಂದು ಮುಗಿದ ಅಧ್ಯಾಯವಾಗಿದೆ ಎಂದು ಹೇಳಿದರು.
ನಾವು ಬಡವರು ನಮಗೆ ಈಗಾಗಲೇ ಪರಿಹಾರ ಸಿಕ್ಕಿದೆ ಹೀಗಾಗಿ ನಮ್ಮ ವಿಷಯವನ್ನು ಇಟ್ಟುಕೊಂಡು ಯಾವುದೇ ಹೋರಾಟ ಮತ್ತು ಪತ್ರಿಕಾಗೋಷ್ಠಿ ಯಾರೂ ಮಾಡಬಾರದು ಎಂದು ಕುಟುಂಬದವರು ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಗುಂಡಗುರ್ತಿ ಪಿಕೆಪಿಎಸ್ ಅಧ್ಯಕ್ಷ ಸುನೀಲ್ ದೊಡ್ಡಮನಿ, ತಾಪಂ ಮಾಜಿ ಸದಸ್ಯ ಬಸವರಾಜ ಹೊಸಳ್ಳಿ, ಮುಖಂಡರಾದ ಯಲ್ಲಾಲಿಂಗ ಪೂಜಾರಿ, ಕಾಶಪ್ಪ ಡೋಣಗಾಂವ, ವಿಜಯಕುಮಾರ್ ಕಂಠಿ, ಸಾಬಣ್ಣ ಭರಾಟೆ, ಸಂತೋಷ ಇವಣಿ, ಶರಣು ಭಾಗೋಡಿ, ರವಿ ಕೊಂಕನಳ್ಳಿ, ಹಫೀಜ್ ರಾಹುಲ್, ಅರ್ಫತ್ ದಂಡೋತಿ, ನಾಗಪ್ಪ ಡೋಣಗಾಂವ, ಬಸವರಾಜ ಬೆಳಗುಂಪಾ, ಕೀಶನ ಲೋಲಕ್ ಸೇರಿದಂತೆ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.