Oplus_0

ಭಾಗೋಡಿ ಗ್ರಾಮದಲ್ಲಿ ರೈತರಿಗೆ ತರಬೇತಿ ಕಾರ್ಯಕ್ರಮ, ರೈತರು ಮಣ್ಣಿನ ಗುಣಮಟ್ಟ ಕಾಪಾಡಿ: ಮಹಾಂತಗೌಡ ಪಾಟೀಲ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ರೈತರು ತಮ್ಮ ಹೊಲದಲ್ಲಿನ ಮಣ್ಣಿನ ಗುಣಮಟ್ಟ ಕಾಪಾಡಬೇಕು ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಮಹಾಂತಗೌಡ ಪಾಟೀಲ ಹೇಳಿದರು.

ತಾಲೂಕಿನ ಭಾಗೋಡಿ ಗ್ರಾಮದ ಶಾಂತೇಶ್ವರ ಮಠದಲ್ಲಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ನಾಲವಾರ, ಯುವ ಕೃಷಿ ವೈಭವ ಭಾಗೋಡಿ ಹಾಗೂ ಗ್ರಾಮ ಪಂಚಾಯತ ಭಾಗೋಡಿ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತೊಗರಿ, ಕಡಲೆ, ಜೊಳ, ಬಾಳೆ ಹಾಗೂ ಕಬ್ಬಿನ ತಾಂತ್ರಿಕ ಬೇಸಾಯದ ಬಗ್ಗೆ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರೈತರು ತಮ್ಮ ಹೊಲವನ್ನು ಸ್ವಚ್ಚವಾಗಿ ಇಟ್ಟುಕೊಂಡು, ಹುಲ್ಲು ನಾಶಪಡಿಸುವ ಎಣ್ಣೆ ಹೊಡೆಯುವುದು ಹಾಗೂ ಆಗಾಗ ಬೆಂಕಿ ಹಚ್ಚುವುದರಿಂದ ಮಣ್ಣಿನ ಸತ್ವ ಕಳೆದುಕೊಳ್ಳಲಿದೆ ಎಂದು ಹೇಳಿದರು. ಮಣ್ಣಿನ ಗುಣಮಟ್ಟ ಕಾಯ್ದುಕೊಂಡಾಗ ಉತ್ತಮ ಬೆಳೆ ಬೆಳೆದು ಉತ್ತಮ ಫಲ ಸಿಗಲಿದೆ ಈ ನಿಟ್ಟಿನಲ್ಲಿ ರೈತರು ಆದಷ್ಟು ರಾಸಾಯನಿಕ ಎಣ್ಣೆ ಹೊಡೆಯುವುದು ಬಿಟ್ಟು ನೈಸರ್ಗಿಕ ಗೊಬ್ಬರ ಬಳಸಬೇಕು ಎಂದು ಕಿವಿಮಾತು ಹೇಳಿದರು.

ತಾಪಂ ಮಾಜಿ ಅಧ್ಯಕ್ಷ ಶರಣಬಸಪ್ಪಗೌಡ ಪಾಟೀಲ ಉದ್ಘಾಟಿಸಿದರು, ಗುರುಮಿಟಕಲ್ ಖಾಸಾ ಮಠದ ಶ್ರೀ ಶಾಂತವೀರ ಮುರುಘರಾಜೇಂದ್ರ ಸ್ವಾಮೀಜಿಯವರು ದಿವ್ಯ ಸಾನಿಧ್ಯ ವಹಿಸಿದ್ದರು, ಗ್ರಾಪಂ ಅಧ್ಯಕ್ಷ ಜಗದೀಶ್ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ವಾಸುದೇವ ನಾಯಕ, ನಾಲವಾರ ಕೇಂದ್ರದ ಮುಖ್ಯಸ್ಥ ಡಾ.ಉಮೇಶ್ ಬಾರಿಕರ್, ಗ್ರಾಪಂ ಸದಸ್ಯರಾದ ಮುತ್ತಣ್ಣ ಶಿರೂರು, ಜುಲ್ಫಿಕರ್ ಖಾಜಿ, ಚಂದ್ರಕಲಾ ದೇವಿಂದ್ರ ಹಾಸ್ಬಾ, ಲೀಲಾವತಿ ಮಲ್ಲಿಕಾರ್ಜುನ ಏರಿ, ಸಂಗೀತಾ ದೇವಿಂದ್ರ ಶೇರಿ, ಜಗದೇವಿ ಚಂದ್ರಶ್ಯಾ ನಾಟೀಕಾರ, ಮಲ್ಕಮ್ಮ ಜೀವಣಗಿ, ಕಾರ್ಯದರ್ಶಿ ರಾಜು ಬಾಳಿ, ಶರಣಪ್ಪ ಐನಾಪುರ, ದೇವಿಂದ್ರ ಅರಣಕಲ್, ಸಂದೀಪ್ ಹಾಸ್ಬಾ, ಸಂತೋಷ ಐನಾಪುರ, ಸಾಬಣ್ಣ ಹಾಸ್ಬಾ, ರಮೇಶ್ ನೀಲಕಂಠಿ, ಮಹೇಶ್ ಕುದರಿ, ಮರೇಪ್ಪ ಹಲಚೇರಿ, ಮಲ್ಲಪ್ಪ ಬೆಣ್ಣೂರ, ಕಲ್ಯಾಣಿ ಬೆಣ್ಣೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಿವಕುಮಾರ ಕಲಬುರ್ಗಿ ಸ್ವಾಗತಿಸಿ, ನಿರೂಪಿಸಿದರು.

Spread the love

Leave a Reply

Your email address will not be published. Required fields are marked *

error: Content is protected !!