ಈ ಬಾರಿ ದಾಖಲೆ ಮಾಡಿದ ಉತ್ಸವ
ಭಕ್ತಸಾಗರದ ನಡುವೆ ನಾಗಾವಿ ಯಲ್ಲಮ್ಮ ದೇವಿಯ ಅದ್ದೂರಿ ಪಲ್ಲಕ್ಕಿ ಉತ್ಸವ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಐತಿಹಾಸಿಕ ನಾಗಾವಿ ಕ್ಷೇತ್ರದಲ್ಲಿರುವ ಶಕ್ತಿ ದೇವತೆ, ಜಲದುರ್ಗೆ ಯಲ್ಲಮ್ಮ ದೇವಿಯ ಪಲ್ಲಕ್ಕಿ ಉತ್ಸವ ಭಕ್ತರ ಜಯಘೋಷಗಳ ನಡುವೆ ಸಡಗರ, ಸಂಭ್ರಮದಿಂದ ಅದ್ದೂರಿಯಾಗಿ ನಡೆಯಿತು.
ಪಲ್ಲಕ್ಕಿ ಉತ್ಸವದ ಸಂಭ್ರಮ ಕಣ್ಣುಂಬಿಕೊಳ್ಳಲು ಭಕ್ತ ಸಾಗರವೇ ನಾಗಾವಿ ಕ್ಷೇತ್ರಕ್ಕೆ ಹರಿದು ಬರುವ ಮೂಲಕ ದೇವಿಯ ದರ್ಶನ ಭಾಗ್ಯ ಪಡೆದು ಪುನಿತರಾದರು. ನೆರೆಯ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಸೇರಿದಂತೆ ವಿವಿಧ ಪ್ರದೇಶಗಳಿಂದ ಭಕ್ತರ ಮಹಾಪೂರವೇ ಹರಿದು ಬಂದಿತ್ತು. ಈ ಬಾರಿ ಪಲ್ಲಕ್ಕಿ ಉತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿದ್ದು ದಾಖಲೆ ಆಗಿದೆ ಎಂದು ಹೇಳಲಾಗಿದೆ. ಪಟ್ಟಣದ ಎಲ್ಲ ರಸ್ತೆಗಳು ಜಾಮ್ ಆಗಿದ್ದವು ಅಷ್ಟರ ಮಟ್ಟಿಗೆ ಭಕ್ತರು ಆಗಮಿಸಿದ್ಜರು ಇದು ಪ್ರಥಮ ಬಾರಿಗೆ ಇಷ್ಟು ಭಕ್ತರ ದಂಡೇ ಬಂದಿದೆ ಎಂದು ಹೇಳಲಾಗಿದೆ.
ಪಟ್ಟಣದ ಸರಾಫ್ ಲಚ್ಚಪ್ಪ ನಾಯಕ ನಿವಾಸದಲ್ಲಿ ಗುರುವಾರ ಮಧ್ಯಾಹ್ನ 2 ಗಂಟೆಗೆ ಗಣ್ಯರ ಸಮ್ಮುಖದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಘ್ನೇಶ್ವರ ಗುರು ಹಾಗೂ ಯಲ್ಲಮ್ಮ ದೇವಿ ಪಲ್ಲಕ್ಕಿಯ ಪೂಜೆ ಕಾರ್ಯ ನಡೆಯಿತು. ನಂತರ ಶ್ರೀ ನಾಗಾವಿ ಯಲ್ಲಮ್ಮ ದೇವಿಯ ಮೂರ್ತಿ ಹೊತ್ತ ಪಲ್ಲಕ್ಕಿ ಉತ್ಸವಕ್ಕೆ ದೇವಸ್ಥಾನ ಸಮಿತಿಯ ಅಧ್ಯಕ್ಷರೂ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರು ಚಾಲನೆ ನೀಡಿದರು.
ಚಿತ್ತಾವಲಿ ವೃತ್ತ, ಕಪಡಾ, ಕಿರಾಣಾ ಬಜಾರ್, ಜನತಾ ವೃತ್ತ, ನಾಗಾವಿ ವೃತ್ತ, ಒಂಟಿ ಕಮಾನ್, ದಿಗ್ಗಾಂವ ಕ್ರಾಸ್ ಮೂಲಕ ದೇವಸ್ಥಾನದವರೆಗೆ ಪಲ್ಲಕ್ಕಿ ಉತ್ಸವ ವಿಜೃಂಭಣೆಯಿಂದ ನಡೆಯಿತು.
ದೇವಸ್ಥಾನದ ಮಾರ್ಗದ ಉದ್ದಕ್ಕೂ ಭಕ್ತಸಮ್ಮೂಹ ಪ್ರಸಾದ ಸೇವೆ, ಕುಡಿವ ನೀರು, ಹಣ್ಣು ಹಂಪಲು, ಜೌಷಧಿಗಳನ್ನು ವಿತರಣೆ ಮಾಡಿದರು. ಮೆರವಣಿಗೆಯಲ್ಲಿ ಬಾಜಾ ಭಜಂತ್ರಿ, ಡೊಳ್ಳು ಕುಣಿತ, ಹಲಗೆ ವಾದನ, ಯುವಕರ ಲೈಜಿಮ್ ನೃತ್ಯ ಹಾಗೂ ಡಿಜೆ ಸೌಂಡ್ ಗೆ ಯುವಕರ ಭರ್ಜರಿ ನೃತ್ಯ ಹಾಗೂ ಮಾತಂಗಿಯರ ಭಕ್ತಿಯ ನೃತ್ಯ ಎಲ್ಲರ ಕಣ್ಮನ ಸೆಳೆಯಿತು. ಅಲ್ಲದೇ ಜೆಸಿಪಿ ಮೂಲಕ ಹಾಗೂ ಕಟ್ಟಡಗಳ ಮೇಲಿಂದ ಪಲ್ಲಕ್ಕಿ ಮೇಲೆ ಭಕ್ತರು ಹೂ ಚೆಲ್ಲಿ ಭಕ್ತಿ ಮೆರೆದರು. ಯುವಕರ ಜಯಘೋಷಗಳು ಮತ್ತು ನಾಗಾವಿ ನಾಡು ಧ್ವಜಗಳು ರಾರಾಜಿಸಿದವು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐಗಳಾದ ಜಗದೇವಪ್ಪ ಪಾಳಾ, ಚಂದ್ರಶೇಖರ ತಿಗಡಿ, ನಟರಾಜ ಲಾಡೆ, ಪಿಎಸ್’ಐಗಳಾದ ಶ್ರೀಶೈಲ್ ಅಂಬಾಟಿ, ತಿರುಮಲೇಶ ಕುಂಬಾರ್, ಮುಖಂಡರಾದ ವಿನಾಯಕ ನಾಯಕ, ರತ್ನಾಕರ್ ನಾಯಕ, ಕಣ್ವಾ ನಾಯಕ, ಪ್ರಶಾಂತ್ ನಾಯಕ, ಪ್ರಸನ್ನ ನಾಯಕ, ಲಕ್ಷ್ಮಣ್ ನಾಯಕ, ಗೌತಮ್ ನಾಯಕ, ಭೀಮಣ್ಣ ಸಾಲಿ, ರವೀಂದ್ರ ಸಜ್ಜನಶೆಟ್ಟಿ, ಡಾ.ಪ್ರಭುರಾಜ ಕಾಂತಾ, ಈರಪ್ಪ ಭೋವಿ, ಮುಕ್ತಾರ್ ಪಟೇಲ್, ಸೈಯದ್ ಜಫರುಲ್ ಹಸನ್, ಚಂದ್ರಶೇಖರ ಕಾಶಿ, ಚಂದ್ರಶೇಖರ ಆವಂಟಿ, ಕೋಟೇಶ್ವರ ರೇಶ್ಮಿ, ನಾಗರಾಜ ಕಡಬೂರ, ರಾಜಣ್ಣ ಕರದಾಳ, ಭೀಮಸಿಂಗ್ ಚವ್ಹಾಣ, ತಿರುಪತಿ ಚವ್ಹಾಣ, ಜಗದೀಶ್ ಚವ್ಹಾಣ, ನರಹರಿ ಕುಲಕರ್ಣಿ, ಸುರೇಶ್ ಆಳ್ಳೋಳ್ಳಿ, ಸಿದ್ರಾಮ ಭೋವಿ, ಅಂಬರೀಶ್ ಸುಲೇಗಾವ್, ಲಕ್ಷ್ಮೀಕಾಂತ ತಾಂಡೂರಕರ್, ಅಂಬರೀಶ್ ಬೋವಿ, ಆನಂದ ರಾವೂರಕರ್, ಭೀಮು ಹೋಳಿಕಟ್ಟಿ, ಮಾರುತಿ ತಾಂಡೂರಕರ್, ಶಿರಸ್ತೇದಾರ್ ಅಶ್ವಥ ನಾರಾಯಣ ಸೇರಿದಂತೆ ಅನೇಕ ಮುಖಂಡರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಾವಿರಾರು ಭಕ್ತರು ಇದ್ದರು. ಭೋವಿ ಸಮಾಜದ ವತಿಯಿಂದ ಪಲ್ಲಕ್ಕಿ ಸೇವೆ ನಡೆಯಿತು.