Oplus_131072

31 ನೇ ಪುಣ್ಯ ಸ್ಮರಣೋತ್ಸವ, ಭರತನೂರ ಲಿಂ. ಗುರುನಂಜೇಶ್ವರರು ಭಕ್ತರ ಬಾಳಿಗೆ ಬೇಳಕಾಗಿದ್ದರು: ಹಾರಕೂಡ ಶ್ರೀ 

ನಾಗಾವಿ ಎಕ್ಸಪ್ರೆಸ್ 

ಕಾಳಗಿ: ಭರತನೂರಿನ ಲಿಂ. ಪೂಜ್ಯ ಶ್ರೀ ಗುರುನಂಜೇಶ್ವರರು ಆಧ್ಯತ್ಮದ ಜ್ಯೋತಿಯಾಗಿ ಭಕ್ತರ ಬಾಳಿಗೆ ಬೇಳಕಾಗಿದ್ದರು ಎಂದು ಹಾರಕೂಡ ಪೂಜ್ಯ ಡಾ. ಚನ್ನವೀರ ಶಿವಾಚಾರ್ಯರು ಆಶೀರ್ವಚನ ನೀಡಿದರು.

ತಾಲೂಕಿನ ಭರತನೂರಿನ ವಿರಕ್ತ ಮಠದ ಮಹಾತಪಸ್ವಿ ದಾಸೋಹ ಮೂರ್ತಿ ಲಿಂ. ಪೂಜ್ಯ ಗುರುನಂಜೇಶ್ವರ ಮಹಾ ಶಿವಯೋಗಿಗಳವರ 31 ನೇ ಪುಣ್ಯ ಸ್ಮರಣೋತ್ಸವ ಹಾಗೂ ಪೂಜ್ಯ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳ ಪಟ್ಟಾಧಿಕಾರದ 25 ನೇ ರಜತ್ ಮಹೋತ್ಸವ ನಿಮಿತ್ತ ಹಮ್ಮಿಕೊಂಡ ಸರ್ವಧರ್ಮ ಸಮ್ಮೇಳನ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನ ನೀಡಿದರು.

ಭಕ್ತಿ, ಶ್ರದ್ಧೆಯಿಂದ ಗುರುವಿನ ನಾಮಸ್ಮರಣೆ ಮಾಡಿದರೆ ಸಂಕಷ್ಟಗಳು ದೂರವಾಗುತ್ತವೆ ಎಂದು ಹೇಳಿದರು. ಪೂಜ್ಯ ಚಿಕ್ಕಗುರುನಂಜೇಶ್ವರರರು ಸರ್ವಧರ್ಮದವರನ್ನು ಸಮಾನವಾಗಿ ಕಾಣುತ್ತಾ ಭಕ್ತರ ಪಾಲಿನ ದೈವವಾಗಿದ್ದಾರೆ, ಮುಂದೆ 50 ನೇ ವರ್ಷದ ಸುವರ್ಣ ಮಹೋತ್ಸವ ಆಚರಿಸಿಕೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು.

ಸರ್ವಧರ್ಮ ಸಮನ್ವಯ ವಿವೇಕಾನಂದರ ಆಶಯವಾಗಿತ್ತು. ಮನುಷ್ಯ ಮನುಷ್ಯನನ್ನು ಪ್ರೀತಿಸುವುದೇ ನಿಜವಾದ ಧರ್ಮ ಎಂದು ಹೇಳಿದರು. ಸರ್ವಧರ್ಮ ಸಮನ್ವಯ ಭಾವ ಎಲ್ಲರಲ್ಲೂ ಮೂಡಬೇಕು, ಚಿಕ್ಕ ವಯಸ್ಸಿನಲ್ಲಿಯೇ ಮಕ್ಕಳ ಮನಸ್ಸಿನಲ್ಲಿ ಸಮಭಾವ ಬೆಳೆಸುವ ಕೆಲಸ ಆಗಬೇಕು ಎಂದು ಹೇಳಿದರು.

ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ ಮಾತನಾಡಿ, ಮಾನವ ತನ್ನ ಜೀವನದಲ್ಲಿ ಶ್ರೇಷ್ಠ ಕರ್ಮಗಳನ್ನು ಮಾಡಬೇಕಾದರೆ ಶಾಸ್ತ್ರ ಗಳಲ್ಲಿ ತಿಳಿಸಿದಂತೆ ಧರ್ಮದ ಹಾದಿಯಲ್ಲಿ ನಡೆಯಬೇಕು, ಸಂಸ್ಕಾರ ಮತ್ತು ಸಂಸ್ಕೃತಿ ನಮ್ಮ ಜೀವನದ ಮಹತ್ವದ ಮೌಲ್ಯಗಳಾಗಿವೆ, ಉತ್ತಮ ಜೀವನ ನಡೆಸಲು ಎರಡು ನಮ್ಮಲ್ಲಿರಬೇಕು ಶ್ರೇಷ್ಠ ಜನ್ಮದ ಸಾರ್ಥಕತೆಗೆ ಸಂಸ್ಕಾರ ಅಗತ್ಯ ಎಂದು ಹೇಳಿದರು.

ಕಾಳಗಿ ಗ್ರೇಡ್- ತಹಸೀಲ್ದಾರ ಘಮಾವತಿ ರಾಠೋಡ ಮಾತನಾಡಿದರು. ಭರತನೂರಿನ ಪೂಜ್ಯ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು, ಹುಲಸೂರ ಪೂಜ್ಯ ಡಾ. ಶಿವಾನಂದ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ, ಸ್ವಾಗತ ಸಮಿತಿ ಪ್ರಧಾನ ಕಾರ್ಯದರ್ಶಿ ರಾಮಲಿಂಗರೆಡ್ಡಿ ದೇಶಮುಖ, ಭೂದಾನಿ ಗೋವಿಂದರೆಡ್ಡಿ ತುಮಕುಂಟಿ, ಮಲ್ಲಯ್ಯ ಸ್ವಾಮಿ ಹಾರಕೂಡ, ಸಂಗನಗೌಡ ಪಾಟೀಲ್ ಜಂಬಗಾ, ಸುಧಾಕಾರ ಪಾಟೀಲ್ ರಾಜಾಪೂರ, ಬಸವರಾಜ ಚಿಟ್ಟಾ, ಅಣ್ಣಾರಾಯ ಪೆದ್ದಿ, ಜಗದೀಶ ಪಾಟೀಲ್ ರಾಜಾಪೂರ, ಮುರಗಯ್ಯ ಸ್ವಾಮಿ ಮಠಪತಿ ಸೇರದಂತೆ ಸುತ್ತಲಿನ ಗ್ರಾಮದ ಭಕ್ತರು ಇದ್ದರು. ರೇವಣಸಿದ್ದಪ್ಪ ದುಖಾನ ನಿರೂಪಿಸಿ ವಂದಿಸಿದರು.

Spread the love

Leave a Reply

Your email address will not be published. Required fields are marked *

You missed

error: Content is protected !!