ಭರತನೂರ ಸಮುದಾಯ ಭವನ ಕಾಮಗಾರಿಗೆ ಎಂಎಲ್ಸಿ ಜಗದೇವ ಗುತ್ತೇದಾರ ಅಡಿಗಲ್ಲು
ನಾಗಾವಿ ಎಕ್ಸಪ್ರೆಸ್
ಕಾಳಗಿ : ತಾಲೂಕಿನ ಭರತನೂರ ಗ್ರಾಮದಲ್ಲಿ ಕರ್ನಾಟಕ ಸರ್ಕಾರ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಪರಿಶಿಷ್ಟ ಜಾತಿ ಬಡಾವಣೆಯಲ್ಲಿ ಸಮುದಾಯ ಭವನ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯ ಜಗದೇವ ಗುತ್ತೇದಾರ ಅಡಿಗಲ್ಲು ನೆರವೇರಿಸಿದರು.
ನಂತರ ಮಾತನಾಡಿದ ಅವರು, ನನ್ನ ಆರಾಧ್ಯ ಗುರುಗಳಾದ ಭರತನೂರ ಲಿಂ.ಗುರುನಂಜೇಶ್ವರ ಶಿವಯೋಗಿಗಳ ಆಶಿರ್ವಾದ ಪಡೆದುಕೊಂಡು ಮೊದಲ ಅಭಿವೃದ್ಧಿ ಕಾಮಗಾರಿ ಭರತನೂರ ಗ್ರಾಮದಿಂದಲೇ ಪ್ರಾರಂಭ ಮಾಡಿರುವುದು ಹೆಮ್ಮೆಯಿದೆ. ಭರತನೂರ ಗ್ರಾಮದಲ್ಲಿ ಕಾಳಗಿ – ರಾಜಾಪೂರ ಮುಖ್ಯರಸ್ತೆಯಿಂದ ಗುರುನಂಜೇಶ್ವರ ಮಠದವರೆಗೆ 10 ಲಕ್ಷ ರೂ. ಅನುದಾನದಲ್ಲಿ ರಸ್ತೆ ನಿರ್ಮಾಣ, ಪರಿಶಿಷ್ಟ ಜಾತಿ ಬಡಾವಣೆಯಲ್ಲಿ 8 ಲಕ್ಷ ರೂ. ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದ ಅವರು ಕಾಮಗಾರಿಗಳು ಗುಣಮಟ್ಟದಿಂದ ಕೂಡಿರುವಂತೆ ಸ್ಥಳೀಯರು ಗಮನ ವಹಿಸಬೇಕು ಎಂದು ಹೇಳಿದರು.
ಭರತನೂರ ಪೂಜ್ಯ ಚಿಕ್ಕಗುರುನಂಜೇಶ್ವರ ಮಹಾಸ್ವಾಮಿಗಳು, ಜಿಪಂ ಮಾಜಿ ಸದಸ್ಯ ರಾಮಲಿಂಗರೆಡ್ಡಿ ದೇಶಮುಖ, ಮುಖಂಡರಾದ ರಾಘವೇಂದ್ರ ಗುತ್ತೇದಾರ, ಬೋಗಪ್ಪ ಮನ್ನಾಳಿ, ಜಗನ್ನಾಥ ಚಂದನಕೇರಾ, ಪ್ರಕಾಶ ಯಲಾಲಕಾರ, ಅವಿನಾಶ್ ಗುತ್ತೇದಾರ, ಅನೀಲ್ ಗುತ್ತೇದಾರ, ಜೈಭೀಮ ಚೆಂಗಟಾ, ದೀಲಿಪ ಭರತನೂರ, ಮಲ್ಕಪ್ಪ ದೊಡ್ಡಮನಿ, ಶಿವಲಿಂಗಪ್ಪ ಚೆಂಗಟಾ, ನಾಗಪ್ಪಗೌಡ ಮಂಗಲಗಿ, ಗುಂಡಪ್ಪ ಪಾಟೀಲ ಮಂಗಲಗಿ, ಮೋದಿನಲಾಲ ನೈಕೋಡಿ, ನಾಗೀಂದ್ರ ಕಟ್ಟಿಮನಿ, ಪವಾನ ಚಿನ್ನಾ ಸೇರಿದಂತೆ ಅನೇಕರು ಇದ್ದರು.