Oplus_0

ಚಿತ್ತಾಪುರ ಬೆಥನಿ ಪ್ರೌಢ ಶಾಲೆಯ ಮಕ್ಕಳು ರಾಜ್ಯ ಮಟ್ಟಕ್ಕೆ ಆಯ್ಕೆ: ಶಿಕ್ಷಕ ವೃಂದ ಹರ್ಷ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ರಾಯಚೂರ ಜಿಲ್ಲೆಯಲ್ಲಿ ನಡೆದ ವಿಭಾಗ ಮಟ್ಟದ ಕ್ರಿಕೆಟ್ ಕ್ರೀಡಾಕೂಟದಲ್ಲಿ ಪಟ್ಟಣದ ಬೆಥನಿ ಪ್ರೌಢಶಾಲೆಯ ಮಕ್ಕಳು ಭಾಗವಹಿಸಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ಮುಖ್ಯ ಗುರು ಸಿಸ್ಟರ್ ಕವಿತಾ ಬಿ.ಎಸ್ ತಿಳಿಸಿದ್ದಾರೆ.

ಕ್ರಿಕೆಟ್ ಕ್ರೀಡೆಯಲ್ಲಿ ಅಲೋಕಿ ಗೌತಮಬುದ್ಧ, ಅವಾನಿ ಗೌತಮಬುದ್ಧ, ಅಂಬಿಕಾ ರವಿ, ಭೂಮಿಕಾ ಚಂದಪ್ಪ, ನಂದಿನಿ ಅವರು ಹಾಗೂ ಮೇಲಾಟಗಳಲ್ಲಿ ಭೂಮಿಕಾ ಚಂದಪ್ಪ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಹಾಗೂ ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ ಎಂದು ತಿಳಿಸಿದ್ದಾರೆ.

ಬೆಥನಿ ಪ್ರೌಢಶಾಲೆಯ ಮಕ್ಕಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಯ ಹಾಗೂ ತಾಲೂಕಿನ ಹೆಸರು ತಂದ ವಿದ್ಯಾರ್ಥಿಗಳ ಸಾಧನೆಗೆ ಮುಖ್ಯಗುರು ಸಿಸ್ಟರ್ ಕವಿತಾ ಬಿ.ಎಸ್, ದೈಹಿಕ ಶಿಕ್ಷಕ ವಿಶ್ವನಾಥ ಕುಂಬಾರ, ಶೇಷಪ್ಪ ಬಡಿಗೇರ್, ನಿಖತ್ ಮಿಸ್ ಸೇರಿದಂತೆ ಶಿಕ್ಷಕ ವೃಂದದವರು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!