ಚಾಮನೂರ ಮತ್ತು ನರಿಬೋಳ ಸೆತುವೆಯ ಕೂಡು ರಸ್ತೆ ಕಾಮಗಾರಿ ನಿರ್ಮಾಣಕ್ಕಾಗಿ ಬೇಕಾದ ಜಮೀನು ನೇರ ಖರೀದಿಗಾಗಿ ಒಪ್ಪಿಗೆ ಪತ್ರ ನೀಡಿದ ರೈತರು
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಚಾಮನೂರ ಮತ್ತು ನರಿಬೋಳ ಸೆತುವೆಯ ಕೂಡು ರಸ್ತೆ ಕಾಮಗಾರಿ ನಿರ್ಮಾಣಕ್ಕಾಗಿ ಸ್ವಚ್ಚೆಯಿಂದ ನೇರ ಖರೀದಿಗೆ ರೈತರು ಒಪ್ಪಿರುವ ಪತ್ರವನ್ನು ಸೇಡಂ ಸಹಾಯಕ ಆಯುಕ್ತ ಪ್ರಭುರೆಡ್ಡಿ ಹಾಗೂ ತಹಸೀಲ್ದಾರ್ ನಾಗಯ್ಯ ಹಿರೇಮಠ ಅವರಿಗೆ ಸಲ್ಲಿಸಿದರು.
ಸೈಯ್ಯದ್ ದಹೀರಪಾಶಾ ಸೈಯದ್ ಮಹೇಬೂಬ್, ಶರಣಪ್ಪ ರಾಮಣ್ಣ ಕಂಚಗಾರಹಳ್ಳಿ, ಭಾಗಿರಥಿ ಭೀಮರಾಯ ಕಂಚಗಾರಹಳ್ಳಿ, ಹಣಮಂತ ರಾಮಣ್ಣ ಕಂಚಗಾರಹಳ್ಳಿ, ಭೀಮರಾಯ ಸಾಯಬಣ್ಣ ದೊಡ್ಡಮನಿ, ದೇವಪ್ಪ ನಾಗಪ್ಪ, ಲಕ್ಷ್ಮಣ ಲಚಮಣ್ಣಾ ಕಾಮಣ್ಣ, ಚಾಂದಪಾಶಾ ಕಸಾಬ್ ಜಲಾಲ್ ಸಾಬ್ ಕಸಾಬ್, ಅಯ್ಯಪ್ಪ ಹೈಯಾಳಪ್ಪ ಕಾಮಣ್ಣ, ಮಶಾಖ್ ಖಾನ್ ಯಾಕುಬಸಾಬ್ ರೈತರು ಸೇತುವೆ ಕೂಡು ರಸ್ತೆ ಕಾಮಗಾರಿ ನಿರ್ಮಾಣಕ್ಕಾಗಿ ಸ್ವ ಇಚ್ಛೆಯಿಂದ ನೇರ ಖರೀದಿಗೆ ಅಗತ್ಯ ಜಮೀನು ನೀಡಲು ಒಪ್ಪಿದ್ದಾರೆ ಎಂದು ತಿಳಿಸಿದ್ದಾರೆ.