ಚಿಂಚೋಳಿ ಸಿದ್ದಸಿರಿ ಕಾರ್ಖಾನೆ ಆರಂಭಕ್ಕೆ ಸಂತಸ: ವೀರಣ್ಣ ಗಂಗಾಣಿ
ನಾಗಾವಿ ಎಕ್ಸಪ್ರೆಸ್
ಚಿಂಚೋಳಿ: ತಾಲೂಕಿನ ಸಿದ್ದಸೀರಿ ಸೌಹಾರ್ದ ಸಹಕಾರಿ ನಿಯಮಿತ ಸಿದ್ದಸಿರಿ ಎಥೆನಾಲ್ ಪವರ್ ಘಟಕ ಪ್ರಾರಂಭಿಸಲು ಅನುಮತಿ ಸಿಕ್ಕಿದ್ದು ನಾಲ್ಕಾರು ತಾಲೂಕಿನ ರೈತರಿಗೆ ಬಹಳ ಸಂತೋಷವಾಗಿದೆ ಎಂದು ರೈತ ಮುಖಂಡ ವೀರಣ್ಣ ಗಂಗಾಣಿ ಹರ್ಷ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದಸಿರಿ ಪವರ್ ಘಟಕ ಸಕ್ಕರೆ ಕಾರ್ಖಾನೆ ಮತ್ತು ಪವರ್ ಘಟಕ ಪುನರ್ ಆರಂಭವಾಗಿರುವುದು ತಾಲೂಕಿನ ಸಾವಿರಾರು ರೈತರಿಗೆ, ಕಾರ್ಮಿಕರಿಗೆ ಬಹಳ ಸಂತೋಷವಾಗಿದೆ. ಹೋದ ವರ್ಷ ನವೆಂಬರ್ ತಿಂಗಳಲ್ಲಿ ಬಂದ್ ಆಗಿದ್ದ ಕಾರ್ಖಾನೆ ಈಗ ಪುನಃ ಪ್ರಾರಂಭವಾಗಿದ್ದು. ಈ ಭಾಗದ ರೈತರಿಗೆ ಮತ್ತು ಕಾರ್ಮಿಕರಿಗೆ ಕೆಲಸ ಸಿಕ್ಕಂತಾಗಿದೆ ಎಂದು ತಿಳಿಸಿದ್ದಾರೆ.
ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಸಿದ್ದಸಿರಿ ಕಾರ್ಖಾನೆ ಬಹಳ ದಿನದಿಂದ ಬಂದಾದ ಕಾರಣ ಈ ಭಾಗದ ಕಬ್ಬು ಬೆಳೆದ ರೈತರಿಗೆ ದಿಕ್ಕು ತೋಚದಂತಾಗಿತ್ತು. ನಿನ್ನೆ ದಿನ ಚಿಮಣಿ ಯಿಂದ ಹೊಗೆ ಬಂದಿರುವುದರಿಂದ ಇನ್ನು ಹೆಚ್ಚು ಕಬ್ಬು ಬೆಳೆಯುವ ನಿರೀಕ್ಷೆಯಲ್ಲಿ ರೈತರಿದ್ದಾರೆ. ಕಲಬುರ್ಗಿ ಜಿಲ್ಲೆ ಚಿಂಚೋಳಿ, ಕಾಳಗಿ, ಚಿತ್ತಾಪುರ, ಸೇಡಂ, ಕಮಲಾಪುರ, ಬೀದರ್ ಜಿಲ್ಲೆ ಹುಮನಾಬಾದ್, ಚಿಟಗುಪ್ಪ ಭಾಗದಲ್ಲಿ ಕಬ್ಬು ಬೆಳೆಯುತ್ತಿರುವ ರೈತರಿಗೆ ಅನುಕೂಲವಾಗಲಿದೆ ನಮ್ಮ ಭಾಗದಲ್ಲಿ ಹೆಚ್ಚು ಕಬ್ಬು ಬೆಳೆಯಲು ಕಾರಣವಾದ ಸಿದ್ಧ ಸಿರಿ ಕಾರ್ಖಾನೆ, ಸುಪ್ರೀಂ ಕೋರ್ಟ್ ನೀಡಿದ ತೀರ್ಪು ರೈತರಿಗೆ ಮಂದಹಾಸ ಮೂಡಿಸಿದೆ ಮತ್ತು ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಲ್ಲಿಯೂ ಮಂದಹಾಸ ಮೂಡಿಸಿದೆ ಎಂದು ಕರ್ನಾಟಕ ರಾಜ್ಯ ತಾಲೂಕು ರೈತ ಸೇನೆ ಹಾಗೂ ರೈತ ಸಂಘ ತಾಲೂಕ ಅಧ್ಯಕ್ಷ ವೀರಣ್ಣ ಗಂಗಾಣಿ ಸಂತಸ ವ್ಯಕ್ತಪಡಿಸಿದ್ದಾರೆ.