Oplus_0

ಚಿತ್ತಾಪುರ ಪುರಸಭೆ ಆಸ್ತಿ ತೆರಿಗೆ ಪರಿಷ್ಕರಣೆ ಮಾಡುವ ಪ್ರಸ್ತಾವನೆಯನ್ನು ಕೈಬಿಡಲು ಸಿದ್ದರಾಮೇಶ್ವರ ಸಜ್ಜನಶೆಟ್ಟಿ ಮನವಿ

ನಾಗಾವಿ ಎಕ್ಸಪ್ರೆಸ್

ಚಿತ್ತಾಪುರ: ಪಟ್ಟಣದಲ್ಲಿ ರೈತಾಪಿ ವರ್ಗ ಹಾಗೂ ಕೃಷಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಆರ್ಥಿಕವಾಗಿ ತುಂಬ ತೊಂದರೆ ಅನುಭವಿಸುವ ಕಾರಣದಿಂದ ಸಾಮಾನ್ಯ ಸಭೆಯಲ್ಲಿ 2025-26 ಆಸ್ತಿ ತೆರಿಗೆ ಪರಿಷ್ಕರಣೆ ಮಾಡುವ ಪ್ರಸ್ತಾವನೆಯನ್ನು ಕೈಬಿಡಬೇಕು ಎಂದು ಪುರಸಭೆ ಮಾಜಿ ಸದಸ್ಯ ಸಿದ್ದರಾಮೇಶ್ವರ ಸಜ್ಜನಶೆಟ್ಟಿ ಅವರು ಮನವಿ ಮಾಡಿದ್ದಾರೆ.

ಈ ಕುರಿತು ಪುರಸಭೆ ಅಧ್ಯಕ್ಷರಿಗೆ ಹಾಗೂ ಮುಖ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ಅವರು, ಪ್ರಸ್ತುತ ಸಂದರ್ಭದಲ್ಲಿ ಸಾರ್ವಜನಿಕರು ಜೀವನ ನಿರ್ವಹಣೆ ನಡೆಸಲು ಕಷ್ಟಪಡುತಿದ್ದು, ಇಂತಹ ಸಮಯದಲ್ಲಿ ಆಸ್ತಿ ತೆರಿಗೆ ದರ ಪರಿಷ್ಕರಣೆ ಮಾಡಿದರೆ ಸಾರ್ವಜನಿಕರಿಗೆ ತುಂಬ ತೊಂದರೆಯಾಗುತ್ತದೆ ಎಂದು ತಿಳಿಸಿದ್ದಾರೆ.

ಮಂಗಳವಾರ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಆಸ್ತಿ ತೆರಿಗೆ ಪರಿಷ್ಕರಣೆ ಮಾಡುವ ಕುರಿತು ಚರ್ಚೆ ಮಾಡುವ ಮಾಹಿತಿ ನೀಡಿರುತ್ತೀರಿ. ಪಟ್ಟಣದ ಜನರ ಹಿತದೃಷ್ಟಿಯಿಂದ ಪರಿಷ್ಕರಣೆ ಮಾಡುವ ಈ ವಿಷಯ ಕೈಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ಚಿತ್ತಾಪುರ ಪುರಸಭೆಗೆ ಖಾತಾ ನಕಲು (ನಮೂನೆ-3) ನಮೂನೆ ಶುಲ್ಕ ರೂ. 500 ಇದ್ದು, ಇದನ್ನು ಕಡಿಮೆ ಮಾಡುವ (ಪರಿಷ್ಕರಿಸುವ) ಕ್ರಮ ಕೈಗೊಳ್ಳಬೇಕು ಎಂದು 2023 ರಲ್ಲಿ ಮನವಿ ಸಲ್ಲಿಸಿದಾಗ ಪರಿಷ್ಕರಿಸಲು ತಾಂತ್ರಿಕ ತೊಂದರೆಯಾಗುವುದರಿಂದ ಮುಂಬರುವ ಆರ್ಥಿಕ ವರ್ಷ 2023-24 ರಿಂದ ಖಾತಾ ನಕಲು ಶುಲ್ಕ ಪರಿಷ್ಕರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹಿಂಬರಹ ನೀಡಿದ್ಜರು. ಸದರಿ ಆರ್ಥಿಕ ವರ್ಷ 2025-26 ಶುರುವಾದ್ದರಿಂದ ಮನವಿ ಸಲ್ಲಿಸಿ ಎರಡು ವರ್ಷಗಳ ಕಳೆದರೂ ಖಾತಾ ನಕಲು (ನಮೂನೆ-3) ನಮೂನೆ ಶುಲ್ಕ ಪರಿಷ್ಕರಣೆ (ಕಡಿಮೆ) ಮಾಡುವ ಕ್ರಮ ಕೈಗೊಂಡಿಲ್ಲ ಹೀಗಾಗಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಂಡು ಸಾರ್ವಜನಿಕರ ಹಿತ ಕಾಪಾಡಬೇಕು ಎಂದು ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳಿಗೆ ಸಜ್ಜನಶೆಟ್ಟಿ ಅವರು ಮನವಿ ಮಾಡಿದ್ದಾರೆ.

Spread the love

Leave a Reply

Your email address will not be published. Required fields are marked *

You missed

error: Content is protected !!