ಚಿತ್ತಾಪುರ ಅಂಬಿಗರ ಚೌಡಯ್ಯ ವೃತ್ತಕ್ಕೆ ಅಂಟಿಕೊಂಡ ಟಿಸಿ ಸ್ಥಳಾಂತರ ಮಾಡಲು ಕೋಲಿ ಸಮಾಜದ ಅಧ್ಯಕ್ಷ ಶಿವುಕುಮಾರ ಯಾಗಾಪೂರ ಆಗ್ರಹ
ನಾಗಾವಿ ಎಕ್ಸಪ್ರೆಸ್
ಚಿತ್ತಾಪುರ: ಪಟ್ಟಣದ ಲಾಡ್ಜಿಂಗ್ ಕ್ರಾಸ್ ಇಂದಿರಾ ಕ್ಯಾಂಟಿನ್ ಹತ್ತಿರದ ನಿಜಶರಣ ಅಂಬಿಗರ ಚೌಡಯ್ಯ ವೃತ್ತಕ್ಕೆ ಅಂಟಿಕೊಂಡ ವಿದ್ಯುತ್ ಟಿಸಿ ಕೂಡಲೇ ಸ್ಥಳಾಂತರ ಮಾಡಬೇಕು ಎಂದು ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಶಿವುಕುಮಾರ ಯಾಗಾಪೂರ ನೇತೃತ್ವದಲ್ಲಿ ಮುಖಂಡರು ಮಂಗಳವಾರ ಜೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಹನ್ನೆರಡನೇ ಶತಮಾನದ ನಿಜಶರಣ ಅಂಬಿಗರ ಚೌಡಯ್ಯನವರ ವೃತ್ತದ ಹತ್ತಿರ ಜೆಸ್ಕಾಂ ಇಲಾಖೆಯ ದೊಡ್ಡದಾದ ಟಿಸಿ ಇದೆ, ಇದರಿಂದ ವಿದ್ಯುತ್ ಅವಘಡ ಆಗುವ ಸಂಭವವಿದೆ ಹೀಗಾಗಿ ಕೂಡಲೇ ಈ ಟಿಸಿ ಇಲ್ಲಿಂದ ಸ್ಥಳಾಂತರ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಜನವರಿ 21 ರಂದು ನಿಜಶರಣ ಅಂಬಿಗರ ಚೌಡಯ್ಯ ನವರ ಜಯಂತ್ಯೋತ್ಸವ ಇರುವುದರಿಂದ ಅಂದು ಜಯಂತಿ ಸಮಾರಂಭ ಮಾಡುವುದಿದೆ, ಕೋಲಿ ಸಮಾಜದ ಅಸಂಖ್ಯಾತ ಜನರು ಭಾಗವಹಿಸಲಿದ್ದಾರೆ ಹೀಗಾಗಿ ಅಂದು ಯಾವುದೇ ಅನಾಹುತಕ್ಕೆ ಅವಕಾಶ ನೀಡದೇ ತಕ್ಷಣ ಟಿಸಿ ಸ್ಥಳಾಂತರ ಮಾಡುವ ಮೂಲಕ ಸಹಕಾರ ನೀಡಬೇಕೆಂದು ಕೋಲಿ ಸಮಾಜದ ತಾಲೂಕು ಅಧ್ಯಕ್ಷ ಶಿವುಕುಮಾರ ಯಾಗಾಪೂರ ಎಂದು ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕೋಲಿ ಸಮಾಜದ ಮುಖಂಡರಾದ ಗುಂಡು ಐನಾಪುರ, ಸಂತೋಷ ನಾಟೀಕಾರ, ಕಾಶಪ್ಪ ಡೋಣಗಾಂವ, ಶಿವುಕುಮಾರ ಸುಣಗಾರ, ಸಾಬಣ್ಣ ಭರಾಟೆ, ಸಾಬಣ್ಣ ಹೋಳಿಕಟ್ಟಿ, ದಶರಥ ದೊಡ್ಡಮನಿ, ಮಹಾದೇವ ಕೊನಿಗೇರಿ, ಸೂರ್ಯಕಾಂತ ಕೊಂಕನಳ್ಳಿ, ಆನಂದ ಯರಗಲ್, ಬೆಳ್ಳಪ್ಪ ಇಂಗನಕಲ್, ಈರಣ್ಣ ಕೊಳ್ಳಿ, ಸಾಬಣ್ಣ ಲಾಡ್ಲಾಪೂರ, ಮಲ್ಲಿಕಾರ್ಜುನ ಅಲ್ಲೂರಕರ್, ಸಿದ್ದು ಸಂಗಾವಿ, ಗೂಳಿ ಡಿಗ್ಗಿ, ರೇವಣಸಿದ್ದ ಬೆಣಮಿ, ಶರಣು ಅರಣಕಲ್, ಶರಣು ದೋಲಕ್ ಭಾಗೋಡಿ, ಮಹೇಶ್ ಸಾತನೂರು, ಮಾರುತಿ ದಂಡೋತಿ, ಸಂತೋಷ ಕೊಂಕನಳ್ಳಿ, ಮೌನೇಶ್ ರಾಜೋಳ್ಳಾ ಸೇರಿದಂತೆ ಇತರರು ಇದ್ದರು